ಕಾಟೇನಹಳ್ಳಿ ವೀರಭದ್ರೇಶ್ವರ ದೇವಸ್ಥಾನ ಕುಸಿತ
ಬ್ಯಾಡಗಿ: ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ತಾಲೂಕಿನ ಕಾಟೇನಹಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಭಾನುವಾರ ನೆಲಸಮವಾಗಿದೆ.
ದೇವಸ್ಥಾನದ ಗೋಡೆಗಳು ಸಂಪೂರ್ಣ ಕುಸಿದುಬಿದ್ದಿದ್ದು, ಕಟ್ಟಡದ ಮೇಲೆ ನಿರ್ಮಿಸಲಾಗಿದ್ದ ಕಳಸವು ನೆಲಕ್ಕುರುಳಿ ಭಕ್ತರಲ್ಲಿ ಕಳವಳವುಂಟಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಪರಿಶೀಲನೆ
ದೇವಸ್ಥಾನದ ನೆಲಕ್ಕುರುಳಿದ ಸುದ್ದಿ ತಿಳಿದ ಧಾವಿಸಿದ ಗ್ರಾಮ ಲೆಕ್ಕಾಧಿಕಾರಿ ಎಸ್. ಪ್ರಕಾಶ, ಮಾಹಿತಿ ಹಾಗೂ ಹಾನಿ ಅಂದಾಜು ಕಲೆಹಾಕಿದರು. ದೇವಸ್ಥಾನ ಸಂಪೂರ್ಣ ಕುಸಿದು ಹೆಚ್ಚಿನ ಹಾನಿಯಾಗಿದ್ದು, ವರದಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಸುಮಾರು ರು. 4 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ತ್ವರಿತವಾಗಿ ಪರಿಹಾರ ಒದಗಿಸಿ, ದೇವಸ್ಥಾನ ಮರು ನಿರ್ಮಾಣಕ್ಕೆ ಸಹಕರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ಅಡ್ಡಿ
ಪ್ರತಿವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆ, ಭಕ್ತಿ ಹಾಗೂ ಶ್ರದ್ಧೆಯಿಂದ ಶ್ರಾವಣ ಮಾಸದ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಿದ್ದ ಕಮಿಟಿ ಹಾಗೂ ಭಕ್ತರಿಗೆ ದೇವಸ್ಥಾನ ಬಿದ್ದಿರುವುದರಿಂದ ತೀವ್ರ ಆಘಾತವಾಗಿದೆ.
ತಾಲೂಕಿನ ಕೆಲವೆಡೆ ಮಳೆಯಿಂದ ದೇವಸ್ಥಾನಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಈ ಕುರಿತು ತಾವು ಮುಜರಾಯಿ ಇಲಾಖೆಗೆ ಸಮಗ್ರ ಮಾಹಿತಿ ಒದಗಿಸುವ ಮೂಲಕ ಪರಿಹಾರಕ್ಕೆ ಯತ್ನಿಸುವೆ. ಕೆಲವು ಗ್ರಾಮಗಳಲ್ಲಿ ಭಾಗಶಃ ಹಾಗೂ ಪೂರ್ಣವಾಗಿ ಮನೆಗಳೂ ಬಿದ್ದಿದ್ದು, ಅವುಗಳನ್ನು ಈ ಸಾಲಿನ ಆಶ್ರಯ ಮನೆಗಳ ಆಯ್ಕೆಯಲ್ಲಿ ಸೇರಿಸಲು ಗ್ರಾಪಂಗೆ ಸೂಚಿಸಿದ್ದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಗ್ರಾಪಂ ಸದಸ್ಯರಾದ ರುದ್ರಪ್ಪ ಶಿವಕ್ಕನವರ, ಶಿವಾನಂದ ಹಿತ್ತಲಮನಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಜಯಪ್ಪ ಮೋಟೆಬೆನ್ನೂರು, ಗ್ರಾಮಸ್ಥರಾದ ಚನ್ನಬಸಯ್ಯ ಕೊಪ್ಪದಮಠ, ಪರಮೇಶ ಕಾರಗಿ, ವೀರೇಶ ಕಜ್ಜರಿ, ಶೇಖಪ್ಪ ಹಲಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

