ಕ್ರೀಡೆಗಳಿಂದ ಸಾಮರ್ಥ್ಯ ವೃದ್ಧಿ: ಮೂಡೂರು
ಹಾನಗಲ್ಲ: ಕ್ರೀಡೆಗಳಿಂದ ಮಕ್ಕಳ ಮನಸ್ಸು ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆ ಬಗ್ಗೆ ಆಸಕ್ತಿ ಮೂಡಿಸಿ ಆರೋಗ್ಯಕರ ಮಕ್ಕಳನ್ನಾಗಿ ಬೆಳೆಸಬಹುದು ಎಂದು ಎಂ.ಪಿ. ಮೂಡೂರು ಅಭಿಪ್ರಾಯ ಪಟ್ಟರು. ತಾಲೂಕಿನ ಅರಳೇಶ್ವರ ಕ್ಲಸ್ಟರ್ನ ಹೋತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕ್ರೀಡೆಗಳು ಮಕ್ಕಳ ಶರೀರದ ಜತೆಗೆ ಸೌಹಾರ್ದ ಬೆಳೆಸುತ್ತವೆ. ಆಟಗಳು ಎಂದಾಗ ಸೋಲು-ಗೆಲವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಸ್ಪರ್ಧಾತ್ಮಕವಾಗಿ ಆಡಬೇಕು ಎಂದರು. ಸದಾನಂದ ಕಮಲಕ್ಕನವರ ಆಧ್ಯಕ್ಷತೆ ವಹಿಸಿದ್ದರು. ಶಿವಾನಂದ ಕನ್ನಕ್ಕನವರ್, ಹನುಮಂತಪ್ಪ ಕಮಲಕ್ಕನವರ, ಮಮತಾ ಮಡಿವಾಳರ, ಪ್ರಕಾಶ ಲಕ್ಕೊಳ್ಳಿ, ನಾಗಪ್ಪ ದೊಡ್ಡಮನಿ, ಪಿ.ಎಂ. ಚಲವಾದಿ, ಎ.ಆರ್. ಪ್ರಾಣೇಶ್ವರ ರಾವ್, ಎಫ್.ಎ. ಕರಗುದರಿ, ಮುಖ್ಯೋಪಾಧ್ಯಾಯ ಜೆ.ಎಸ್. ಶಿಡ್ಲಾಪುರ, ಟಿ. ಶಿವಕುಮಾರ್, ಎಸ್. ದಿಕ್ಷೀತ, ಸುಧಾ ಮಾಣಿಕ್ಯ, ಅನಿಲಕುಮಾರ ಗೋಣಣ್ಣನವರ, ಗಿರೀಶ ನೆಲ್ಲಿಕೊಪ್ಪ, ಬಿ.ಎಂ. ಉದ್ದೇಗೌಡ್ರ, ಪ್ರಭಾ ಪಾಂಡುರಂಗ ಇದ್ದರು.
ಇಂದು ಉಪನ್ಯಾಸ
ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಪಂ ಆವರಣದಲ್ಲಿ ಆ. 10ರಂದು ಸಂಜೆ 6 ಗಂಟೆಗೆ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-33 ಕಾರ್ಯಕ್ರಮ ಜರುಗಲಿದೆ. ಗದಗಿನ ಪ್ರಾಚ್ಯವಸ್ತು ಸಂಗ್ರಹಾಲಯದ ಮಾರ್ಗದರ್ಶಕ ಅ.ದ. ಕಟ್ಟಿಮನಿ ಇವರು ಗದಗ ಜಿಲ್ಲೆಯ ಪ್ರಾಚೀನ ಸ್ಮಾರಕ ಕುರಿತು ಉಪನ್ಯಾಸ ನೀಡುವರು. ಡಾ ಸದಾಶಿವ ದೊಡ್ಡಮನಿ ಕಾವ್ಯವಾಚನ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರದೀಪ ಶೆಟ್ಟರ್ ಪ್ರಚಾರ
ರಾಣಿಬೆನ್ನೂರು: ಸ್ಥಳಿಯ ಸಂಸ್ಧೆಗಳಿಂದ ಧಾರವಾಡ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತವೆಂದು ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ತಿಳಿಸಿದರು. ತಾಲೂಕಿನ ಕಮದೋಡ, ಚಳಗೇರಿ, ಕರೂರು, ಮಾಕನೂರು, ಕೋಡಿಯಾಲ ಹೊಸಪೇಟೆ, ಕವಲೆತ್ತು, ಮುದೇನೂರು ಮುಂತಾದ 15ಕ್ಕೂ ಹೆಚ್ಚು ಗ್ರಾಪಂ, ನಗರಸಭೆ ಹಾಗೂ ತಾಪಂನ ಅಧ್ಯಕ್ಷ - ಉಪಾಧ್ಯಕ್ಷ, ಸದಸ್ಯರನ್ನು ಭೇಟಿಯಾಗಿ ಮತ ಯಾಚಿಸಿ, ತಮ್ಮ ಸಹೋದರ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸ್ದಳಿಯ ಸಂಸ್ಧೆಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಸಾಧಿಸಲು ಚುನಾಯಿತ ಸದಸ್ಯರಿಗೆ ಅಧಿಕಾರ ನೀಡಿರುವುದರ ಫಲವಾಗಿ ರಾಜ್ಯದ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ವಸತಿ ಸೌಲಭ್ಯ ಸಿಗಲು ಸಾಧ್ಯವಾಗಿದೆ. ಸ್ಥಳಿಯ ಸಂಸ್ಧೆಗಳ ಆರ್ಥಿಕಾಭಿವೃದ್ಧಿಗೆ ಮತ್ತು ಮೂಲಭೂತ ಸೌಲಭ್ಯ ಪಡೆಯಲು ಕಾರಣವಾಗಿರುವ ಬಿಜೆಪಿ ಅಭ್ಯರ್ಥಿಯಾದ ತಮ್ಮ ಗೆಲುವಿಗೆ ಶ್ರಮಿಸುವುದಾಗಿ ಹಾಗೂ ಮತ ನೀಡುವುದಾಗಿ ಮತದಾರರು ಭರವಸೆ ನೀಡಿದ್ದಾರೆ ಎಂದರು. ಜಿಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಮಂಜುನಾಥ ಓಲೇಕಾರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ ಪರವಾಗಿ ತಾಲೂಕಿನ 35 ಗ್ರಾಪಂ, ತಾಪಂ, ಜಿಪಂ ಮತ್ತು ನಗರಸಭೆ ಸದಸ್ಯರ ಮನೆ ಮನೆಗೆ ಭೇಟಿ ನೀಡಿ, ಮತ ಯಾಚಿಸಿದ್ದು, ಗೆಲುವು ಖಚಿತವೆಂದು ತಿಳಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ಸೋಮಣ್ಣ ಬೇವಿನಮರದ, ನಗರಸಭೆ ಸದಸ್ಯರಾದ ಪ್ರಭುಸ್ವಾಮಿ ಕರ್ಜಗಿಮಠ, ಶಿವರಾಜ ಬ್ಯಾಡಗಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರುಣಕುಮಾರ ಪೂಜಾರ, ಕುಮಾರ ಜಂಬಗಿ, ಸಂಕಪ್ಪ ಮಾರನಾಳ ಇದ್ದರು.
ಇಂದು ಕಾಲೇಜು ಒಕ್ಕೂಟ ಉದ್ಘಾಟನೆ
ಶಿಗ್ಗಾಂವಿ: ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2013-14ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ಒಕ್ಕೂಟದ ವಿವಿಧ ಸಂಘಗಳ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಉದ್ಘಾಟನೆ ಆ. 10ರಂದು ಮುಂಜಾನೆ 10.30ಕ್ಕೆ ಮಹಾವಿದ್ಯಾಲಯ ಆವರಣದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಎಸ್.ಆರ್.ಜೆ.ವಿ. ಕಾಲೇಜಿನ ಆಡಳಿತಾಧಿಕಾರಿ ವಿಶ್ವನಾಥ ಎಸ್. ಕಂಬಾಳಿಮಠ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಸಂಗಮೇಶ ಸವದತ್ತಿಮಠ ಉದ್ಘಾಟಿಸುವರು. ಅತಿಥಿಗಳಾಗಿ ಹಾವೇರಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಸಜ್ಜನ್ ಆಗಮಿಸುವರು. ಪ್ರಾಚಾರ್ಯರಾದ ಪ್ರೊ. ಎಸ್.ವಿ. ಕುಲಕರ್ಣಿ, ಪ್ರೊ. ಸಿ.ಎಚ್. ತಾವರಗುಂದಿ, ಪ್ರೊ. ಎಫ್.ಎಸ್. ಶಿವಣ್ಣವರ, ಪ್ರೊ.ಎ.ಐ. ಕೋಟಿ, ವನಜಾಕ್ಷಿ ಸರ್ಜಾಪುರ, ಶಿಲ್ಪಾ ಬರಮಗೌಡ್ರ ಉಪಸ್ಥಿತರಿರುವರು.
ಇಂದು ಕಾಂಗ್ರೆಸ್ ಸಭೆ
ಹಾವೇರಿ: ಹಾವೇರಿ ಜಿಲ್ಲಾ ಕಾಂಗ್ರೆಸ್ ಸಭೆ ಆ. 10ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯಲಿದೆ. ಆ. 22ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಈ ಕುರಿತು ಕಾರ್ಯತಂತ್ರ ರೂಪಿಸಲು ಈ ಸಭೆ ಕರೆಯಲಾಗಿದೆ. ಈ ಮೊದಲು ಆ. 8ರಂದು ನಿಗದಿಯಾಗಿದ್ದ ಸಭೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು. ಸಭೆಯಲ್ಲಿ ವಾರ್ತಾ ಸಚಿವ ಸಂತೋಷ ಲಾಡ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಮನೋಹರ ತಹಶೀಲ್ದಾರ್, ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ನಾಗರಾಜ ಛಬ್ಬಿ, ಶಾಸಕರಾದ ಕೆ.ಬಿ. ಕೋಳಿವಾಡ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಸಚಿವ ಎಚ್.ಡಿ. ಲಮಾಣಿ, ಮಾಜಿ ಶಾಸಕ ಬಿ.ಸಿ. ಪಾಟೀಲ, ಅಜ್ಜಂಪೀರ ಖಾದ್ರಿ, ಪರಿಷತ್ ಮಾಜಿ ಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುನ್ನೂರ, ಐ.ಜಿ. ಸನದಿ, ಶಶಿಕಲಾ ಕವಲಿ, ರುಕ್ಮಿಣಿ ಸಾವಕಾರ, ಶಾರದಾ ಬೆಟಗೇರಿ, ಮಂಜುನಾ ಬಾಳಿಕಾಯಿ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕರ್ತರು, ಮುಖಂಡರು ಪಾಲ್ಗೊಂಡು ಸಲಹೆ-ಸೂಚನೆ ನೀಡುವಂತೆ ಜಿಲ್ಲಾ ಸಂಚಾಲಕ ಶಿವಯೋಗಿ ಎಚ್. ಹಿರೇಮಠ ತಿಳಿಸಿದ್ದಾರೆ.
13ರಂದು ಭಾಷಣ ಸ್ಪರ್ಧೆ
ಹಾನಗಲ್ಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 219ನೇ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ, ದೇಶಪ್ರೇಮ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಕುರಿತು ಆ. 13ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರದೇಶ ಕುರುಬ ಸಂಘದ ಹಾನಗಲ್ಲ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೊಮ್ಮನಹಳ್ಳಿ ಗ್ರಾಮೀಣ ಘಟಕದ ಆಶ್ರಯದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಪದವಿ, ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನವಿದ್ದು, ಪ್ರಥಮ ರು. 1 ಸಾವಿರ, ದ್ವಿತೀಯ ರು. 500 ಹಾಗೂ ಪ್ರಮಾಣಪತ್ರ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀಕಾಂತ ದೊಡ್ಡಕುರುಬರ, ಮೊ. 9901772415, ಮಹೇಶ ಪವಾಡಿ, ಮೊ. 9964405988, ಸುರೇಶ ದೊಡ್ಡಕುರಬರ, ಮೊ. 9964955884 ಅವರನ್ನು ಸಂಪರ್ಕಿಸಬೇಕೆಂದು ತಾಲೂಕಾಧ್ಯಕ್ಷ ದಾನಪ್ಪ ಗಂಟೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಪಂಗೆ ಆಯ್ಕೆ
ಶಿಗ್ಗಾಂವಿ: ತಾಲೂಕಿನಲ್ಲಿ ಗ್ರಾಪಂಗೆ ಜರುಗಿದ ಉಪ ಚುನಾವಣೆಯಲ್ಲಿ ತಡಸ ಗ್ರಾಪಂಗೆ ಅಬ್ದುಲ್ ಖಾದರ್ ರಾಜೆಸಾಬ ಕೊಲ್ಲಾಪುರ ಹಾಗೂ ಹಿರೇಮಲ್ಲೂರು ಗ್ರಾಪಂಗೆ ಅನಸೂಯಾ ರವಿ ವಾಲ್ಮೀಕಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಹಾಗೂ ಚುನಾವಣಾ ಅಧಿಕಾರಿ ಎಸ್.ಎ. ಚೌಗಲೆ ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

