ದೇವಸ್ಥಾನ ನೆಮ್ಮದಿಯ ತಾಣ: ಬಣಕಾರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಆ. 9
ದುಡಿದು, ದಣಿದು, ಬಸವಳಿದು, ಬೇಸತ್ತ ಮನುಷ್ಯರ ನೆಮ್ಮದಿಗೆ ಪೂರಕವಾದ ವಾತಾವರಣ ದೇವಸ್ಥಾನಗಳಲ್ಲಿ ಸಿಗುತ್ತದೆ. ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಧರ್ಮವನ್ನು ಉಳಿಸಲು ಸಾಧ್ಯ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.
ತಾಲೂಕಿನ ಮಾಸೂರ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಬನಶಂಕರಿ ದೇವಸ್ಥಾನದ ಗರ್ಭಗುಡಿ ಮತ್ತು ಮಹಾದ್ವಾರವನ್ನು ಉದ್ಘಾಟಿಸಿದ ಅವರು, ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ಧರ್ಮ ರಕ್ಷಣೆಯಂತಹ ಪುಣ್ಯದ ಕಾರ್ಯ ಮಾಡಬೇಕು. ಮಾಸೂರ ಗ್ರಾಮದ ನೇಕಾರ ದೇವಾಂಗ ಸಮಾಜದವರು ದೇವಸ್ಥಾನದ ಧರ್ಮ ಕಾರ್ಯಗಳಿಗೆ ಅರ್ಥಿಕ ಸಹಾಯ ನೀಡಿರುವುದು ಶ್ಲಾಘನೀಯ ಎಂದರು.
ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಪೀಠಾಧಿಪತಿ ವಿರೂಪಾಕ್ಷ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಪ್ರಕಾಶ ದೇವಾಂಗದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜಕ್ಕ ಕಾಮಕರ, ಅನಸೂಯಾ ಜವಳಿ, ಲೋಹಿತ್ ಮಾನೆ, ವೀರಭದ್ರಪ್ಪ ಹಂಚಿನಮನಿ, ಸತ್ಯನಾರಾಯಣ ದೇವಾಂಗದ, ನಿರ್ಮಲಾ ದೇವಾಂಗದ, ದೇವೇಂದ್ರಪ್ಪ ಹಿರೇಕೆರೂರು, ಕೃಷ್ಣಾ ದೇವಾಂಗದ, ನಿರ್ಮಲಾ ವಿಷ್ಣು ದೇವಾಂಗದ, ಲಕ್ಷ್ಮವ್ವ ಹಿರೇಕೆರೂರು, ದುರ್ಗವ್ವ ದೇವಾಂಗದ, ರುದ್ರಗೌಡ ಪಾಟೀಲ, ಎಂ.ಆರ್. ದೇವಾಂಗದ, ಮಂಜಪ್ಪ ದೇವಾಂಗದ, ಶಿವಾನಂದ ಜವಳಿ, ವೆಂಕಟೇಶ ಜವಳಿ, ಪ್ರಭು ಮಳವಳ್ಳಿ, ರಾಮು ಚಿಗಮೊರಬ ಹಾಗೂ ದೇವಾಂಗ ಸಮಾಜದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

