20ರಂದು ಜಿ.ಎಚ್. ಕಾಲೇಜಲ್ಲಿ ಶಿಕ್ಷಣ ಶ್ರಾವಣ
ಹಾವೇರಿ: ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಆ. 20ರಂದು ಮುಂಜಾನೆ 11 ಗಂಟೆಗೆ ವಿನೂತನ ಕಾರ್ಯಕ್ರಮ ಶಿಕ್ಷಣ-ಶ್ರಾವಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಡಾ ಬಸವರಾಜ ಬನ್ನ್ನೂರ ತಿಳಿಸಿದ್ದಾರೆ. ಕಾಲೇಜು ಒಕ್ಕೂಟದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾವೇರಿ ಬಸವ ಕೇಂದ್ರ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿಗಳು ಆಗಮಿಸುವರು. 2013-14ನೇ ಶ್ರಾವಣ ಮಾಸದ ವಿಶೇಷವಾಗಿ ಸಂವಾದದ ಮೂಲಕ ಗುಣಮಟ್ಟದ ಶಿಕ್ಷಣ, ಉತ್ತಮ ಚಿಂತನೆಗಳತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಉದ್ದೇಶವಿದೆ. ಪದವಿ ಕಾಲೇಜಿನ ಪ್ರಾಚಾರ್ಯ ಡಾ ಬಿ.ಸಿ. ಬನ್ನ್ನೂರ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ ಸಿ. ಮಲ್ಲಣ್ಣ, ಬಿಸಿಎ ಕಾಲೇಜಿನ ಪ್ರಾಚಾರ್ಯೆ ಪ್ರೊ ಶ್ವೇತಾ ಮರಿಗೌಡರ, ವಾಣಿಜ್ಯಶಾಸ್ತ್ರ ಸ್ನ್ನಾತಕೋತ್ತರ ವಿಭಾಗದ ಸಂಯೋಜಕ ಡಾ ಸದಾನಂದ ಹಲಗೇರಿ ಉಪಸ್ಥಿತರಿರುವರು ಎಂದು ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ ಎನ್. ಕೆಂಚವೀರಪ್ಪ ತಿಳಿಸಿದ್ದಾರೆ.
26ರಂದು ಯೋಗ-ಅಧ್ಯಾತ್ಮ ಉಪನ್ಯಾಸ
ಹಾವೇರಿ: ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಆ. 26ರಂದು ಮುಂಜಾನೆ 11.30ಕ್ಕೆ ಯೋಗ ಮತ್ತು ಆಧ್ಯಾತ್ಮಿಕ ವಿಚಾರ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಡಾ ಬಿ.ಸಿ. ಬನ್ನ್ನೂರ ತಿಳಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರೇಕೆರೂರು ತಾಲೂಕು ಕಡೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮಹೇಶ ಎಂ. ಕೆರೂರ ಭಾಗವಹಿಸಿ, ಯೋಗ ಮತ್ತು ಆಧ್ಯಾತ್ಮಿಕ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿ.ಎಚ್. ಕಾಲೇಜಿನ ಯೋಗ ಕೇಂದ್ರದ ಮುಖ್ಯಸ್ಥ, ರಸಾಯನಶಾಸ್ತ್ರ ವಿಷಯದ ಪ್ರಾಧ್ಯಾಪಕ ನಾಗಲಿಂಗಪ್ಪ ಎಂ. ಗುಂಡಣ್ಣವರ ಅವರು ತ್ರಿಶಕ ಬ್ರಾಹ್ಮಣ ಉಪನಿಷತ್ತಿನಲ್ಲಿ ಮೂಡಿಬಂದ ಅಷ್ಟಾಂಗಯೋಗ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಹುಬ್ಬಳ್ಳಿಯ ಎಸ್.ಕೆ. ಕಲಾ ಹಾಗೂ ಎಚ್.ಎಸ್.ಕೆ. ವಿಜ್ಞಾನ ಮಹಾವಿದ್ಯಾಲಯದ ಗ್ರಂಥಪಾಲಕ ಬಿ.ಎಸ್. ಮಾಳವಾಡ ಆಗಮಿಸಿ, 'ವಿದ್ಯಾರ್ಥಿಗಳು ಮತ್ತು ಆರೋಗ್ಯ' ಕುರಿತು ಉಪನ್ಯಾಸ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ವ್ಯಕ್ತಿ ನಾಪತ್ತೆ: ದೂರು
ಭಟ್ಕಳ: ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆಯಾದ ಘಟನೆ ಇಲ್ಲಿನ ಮೂಸಾ ನಗರದಲ್ಲಿ ನಡೆದಿದೆ. ಹಾಲಿ ಮೂಸಾ ನಗರದ ನಿವಾಸಿ ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಹಮದ್ ಸಾದಿಕ್ ಜಾಫರಸಾಬ್ ಬಾವಣ್ಣನವರ (35) ಎಂದು ತಿಳಿದು ಬಂದಿದೆ. ಈತ ಮೂಸಾ ನಗರದಿಂದ ಆ. 8ರಂದು ಊರಿಗೆ ಹೋಗುವುದಾಗಿ ಹೇಳಿ ಹೋದವ ಈ ತನಕ ಪತ್ತೆಯಾಗಿಲ್ಲವೆಂದು ಪುರವರ್ಗದ ಮುಕ್ತಾರ ಅಹಮದ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಪಿಎಸ್‌ಐ ಜಾನ್ಸನ್ ಡಿಸೋಜಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

