ಹಾವೇರಿ

ದೇಶಭಕ್ತರ ಚರಿತ್ರೆ ಪರಿಚಯಿಸಿ: ತಹಶೀಲ್ದಾರ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 13
ಕನ್ನಡನಾಡಿನ ಧೀರ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಮುಂತಾದ ದೇಶಭಕ್ತರ ಚರಿತ್ರೆ ಪರಿಚಯಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವಕರಲ್ಲಿ ದೇಶಪ್ರೇಮ ಹಾಗೂ ಸ್ವಾಭಿಮಾನ ಬಡಿದೆಬ್ಬಿಸುವ ಕಾರ್ಯ ಆಗಬೇಕು ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ಮಂಗಳವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 219ನೇ ಜನ್ಮದಿನದ ಅಂಗವಾಗಿ, ಪ್ರದೇಶ ಕುರುಬ ಸಂಘದ ಹಾನಗಲ್ಲ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೊಮ್ಮನಹಳ್ಳಿ ಗ್ರಾಮೀಣ ಘಟಕದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ, ದೇಶಪ್ರೇಮ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಕುರಿತಾದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ, ಉಪನ್ಯಾಸಕ ಮಾರುತಿ ಶಿಡ್ಲಾಪುರ ಮಾತನಾಡಿ, ದೇಶದ ನೆಲ, ಜಲ, ಭಾಷೆ ಪ್ರೇಮ ಬೆಳೆಸುವುದು ಇಂದಿನ ಅಗತ್ಯ. ದೇಶದ ಸಾಂಘಿಕ ಬಲವರ್ಧನೆ, ಬದುಕಿನ ಆದರ್ಶಕ್ಕಾಗಿ ಹುತಾತ್ಮರ ಜೀವನದ ತಿಳಿವಳಿಕೆ ಅಗತ್ಯ ಎಂದರು.
ಕುರುಬ ಸಂಘದ ತಾಲೂಕು ಅಧ್ಯಕ್ಷ ದಾನಪ್ಪ ಗಂಟೇರ ಮಾತನಾಡಿ, ಯಾವುದೇ ಅಧಿಕಾರಕ್ಕೆ ಹಂಬಲಿಸದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣ ಮುಂತಾದವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವನೆ ವಿದ್ಯಾರ್ಥಿ ದೆಸೆಯಿಂದಲೇ ಬೆಳೆದು ಬರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮುತ್ತಣ್ಣ ನಾಸಿಕ, ಸದಸ್ಯರಾದ ನಂದಾ ಕಬ್ಬೂರ, ಅರುಣ ನಾಗಜ್ಜನವರ, ಗಂಗಾಧರ ಪವಾರ, ಮುಖಂಡರಾದ ಸರ್ವರಪಾಷಾ ಪೀರಜಾದೆ, ಅಶೋಕ ಆರೆಗೊಪ್ಪ, ಗಿರೀಶಗೌಡ ಪಾಟೀಲ, ಎಂ.ಎಂ. ಮುಲ್ಲಾ, ಸುರೇಶ ದೊಡ್ಡಕುರುಬರ, ಬೀರೇಶ ಬರಡಿ, ವಿ.ಯು. ಪಾಟೀಲ, ಕೆ. ಈಶ್ವರ, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀಕಾಂತ ದೊಡ್ಡಕುರುಬರ, ಉಪನ್ಯಾಸಕರಾದ ಎಂ.ಬಿ. ಕಾಡಪ್ಪನವರ, ಸುರೇಶ ಹಿರೂರ, ಎಸ್.ಬಿ. ಕಮಾಟಿ, ರಶ್ಮಿ ಇದ್ದರು.
ಫಲಿತಾಂಶ: ಪ್ರೌಢಶಾಲಾ ವಿಭಾಗದಲ್ಲಿ ತಿಳವಳ್ಳಿ ಸಿದ್ಧರಾಮೇಶ್ವರ ಪ್ರೌಢಶಾಲೆಯ ಸುಶ್ಮಿತಾ ತಳವಾರ, ನೇತ್ರಾ ಬೆಣಗೇರಿ, ಪಿಯು ವಿಭಾಗದಲ್ಲಿ ಹಾನಗಲ್ಲ ಎನ್‌ಸಿಜೆ ಕಾಲೇಜಿನ ಸಹನಾ ಕಂಬಾಳಿ, ಅಮೃತಾ ಕುಂದಾಪುರ, ಸರ್ಕಾರಿ ಪಿಯು ಕಾಲೇಜಿನ ವಿಜಯಲಕ್ಷ್ಮೀ ಮಡಿವಾಳರ, ಪದವಿ ವಿಭಾಗದಲ್ಲಿ ಹಾನಗಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿಪ್ಪುಸುಲ್ತಾನ ನಾಯ್ಕವಾಡಿ, ಕುಮಾರೇಶ್ವರ ಪದವಿ ಕಾಲೇಜಿನ ಮಂಜುನಾಥ ಸಮನಹಳ್ಳಿ ಮತ್ತು ನಿಂಗಪ್ಪ ಮರಡಿ ಬಹುಮಾನ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.