ಹಾವೇರಿ

ಧರ್ಮಕಾರ್ಯಗಳಿಂದ ಬದುಕು ಸಾರ್ಥಕ: ಸದಾಶಿವ ಶ್ರೀಗಳು

Published On :

ಹಾವೇರಿ: ಗ್ರಾಮೀಣ ಜನತೆ ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಧರ್ಮ ಕಾರ್ಯಗಳಿಂದ ಪ್ರತಿಯೊಬ್ಬರೂ ಸಾರ್ಥಕ ಬದುಕು ಸಾಗಿಸಲು ಮತ್ತು ಸದ್ಭಾವನೆ ಬೆಳೆಸಿಕೊಳ್ಳಲು ಸಾಧ್ಯವೆಂದು ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ನುಡಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ಜರುಗಿದ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು, ಧರ್ಮ ಮಾರ್ಗದಲ್ಲಿ ನಡೆಯಿರಿ. ಭಕ್ತಿ - ಶ್ರದ್ಧೆ ಅಳವಡಿಸಿಕೊಳ್ಳಿ ಎಂದರು.
ಗ್ರಾಮೀಣ ಜನರೂ ದುಶ್ಚಟಗಳಿಗೆ ಬಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಯುವಕರಿಗೆ ಸಂಸ್ಕಾರ ನೀಡುವ ಮೂಲಕ ಅವರನ್ನು ದುಶ್ಚಟಗಳಿಂದ ದೂರವಿಡಬಹುದು. ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಯುವಕರು ತೊಡಗಿಕೊಳ್ಳಬೇಕು ಎಂದರು.
ಸಮ್ಮುಖವನ್ನು ಹೊಸರಿತ್ತಿಯ ಶ್ರೀ ಮನಿಪ್ರ ಗುದ್ಲೇಶ್ವರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಸ್ವಾಮೀಜಿ, ಅಂಕಸಾಪುರದ ಶಿವಾನಂದ ಆಶ್ರಮದ ಸ್ವಾಮೀಜಿ, ಬಂಕಾಪುರದ ಕೆಂಡದ ಮಠದ ಸ್ವಾಮೀಜಿ, ಶ್ರೀ ರೇವಣಸಿದ್ದ ಸ್ವಾಮೀಜಿ, ಶ್ರೀಕ್ಷೇತ್ರ ಮೈಲಾರಲಿಂಗೇಶ್ವರದ ಸ್ವಾಮೀಜಿ ವಹಿಸಿ,ಆಶೀರ್ವಚನ ನೀಡಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಪರಮೇಶಪ್ಪ ಚಾವಡಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವ ದೇವಸ್ಥಾನದ ನಿರ್ಮಾಣಕ್ಕೆ 4 ಎಕರೆ ಜಮೀನು ನೀಡುವುದಾಗಿ ಘೋಷಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ, ಹುಕ್ಕೇರಿಮಠ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಡಿ. ಶಿರೂರ,  ಹಾವೇರಿಯ ವರ್ತಕರಾದ ಶಿವಬಸಪ್ಪ ಹುರಳಿಕೊಪ್ಪಿ, ವಿರೂಪಾಕ್ಷಪ್ಪ ಬಣಕಾರ ಪಾಲ್ಗೊಂಡಿದ್ದರು.
ಗ್ರಾಮದ ಮುಖಂಡರಾದ ರಾಚಪ್ಪ ದೇಟಿನ, ಬಸಣ್ಣ ದೊಡ್ಡಮನಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ನಿಂಗಪ್ಪ ಚಾವಡಿ, ಪರಮಣ್ಣ ಚಾವಡಿ, ತಾಪಂ ಮಾಜಿ ಸದಸ್ಯ ಬಸಣ್ಣ ಕಂಬಳಿ, ಗ್ರಾಪಂ ಅಧ್ಯಕ್ಷೆ ಪ್ರೇಮಾ ಚಾವಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ಚಾವಡಿ, ಮಾಲತೇಶ ದೊಡ್ಡಮನಿ, ಅಳಲಗೇರಿ ಇದ್ದರು. ಶ್ರೀ ಮೈಲಾರಲಿಂಗೇಶ್ವರ ಮೂರ್ತಿಯ ದಾನಿಗಳಾದ ನೀಲಪ್ಪ ಚಾವಡಿ, ಶಿಕ್ಷಕ ನಾಗಪ್ಪ ಚಾವಡಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಮುಂತಾದವರನ್ನು ಶ್ರೀ ಸದಾಶಿವ ಸ್ವಾಮೀಜಿ ಸನ್ಮಾನಿಸಿ, ಗೌರವಿಸಿದರು.
ನ್ಯಾಯವಾದಿ ನೀಲಪ್ಪ ಚಾವಡಿ ಸ್ವಾಗತಿಸಿದರು. ಶಿಕ್ಷಕ ಹೊನ್ನಪ್ಪ ತಳವಾರ ನಿರೂಪಿಸಿದರು. ಭರಮಪ್ಪ ಹೊರಕೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.