ಸಾಕ್ಷರತೆಯಿಂದ ಭ್ರಷ್ಟಾಚಾರ ತಡೆ: ನ್ಯಾ. ರಾಮಚಂದ್ರ
ಹಾನಗಲ್ಲ: ಸಂಪೂರ್ಣ ಸಾಕ್ಷರತೆಯಿಂದ ಭ್ರಷ್ಟಾಚಾರದ ಪಿಡುಗು ತಡೆಗಟ್ಟಲು ಸಾಧ್ಯವಿದೆ. ಗುಣಾತ್ಮಕ ಚಿಂತನೆಗಳ ಮೂಲಕ ದೇಶಕ್ಕೆ ಮಾರಕವಾಗಿರುವ ಅನಕ್ಷರತೆ, ಬಡತನ ಮತ್ತು ಭ್ರಷ್ಟಾಚಾರ ನಿಗ್ರಹ ಮಾಡಬೇಕಿದೆ ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಎಂ. ರಾಮಚಂದ್ರ ಕರೆ ನೀಡಿದರು.
ಗುರುವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ವ್ಯಕ್ತಿಯ ಅರ್ಹತೆಗೆ ತಕ್ಕಂತೆ ಅವಕಾಶ ಒದಗಿಸುವ ಸಂವಿಧಾನದ ಮೂಲ ಆಶಯದಂತೆ ಪ್ರತಿಯೊಬ್ಬ ಪ್ರಜೆಯೂ ನಡೆದುಕೊಂಡು, ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರವಿ ವಡೆಯರ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ವಿಭಾಗದ ನ್ಯಾಯಾಧೀಶ ಮಧ್ವೇಶ ದಬೇರ, ಸಹಾಯಕ ಸರ್ಕಾರಿ ಅಭಿಯೋಜಕ ಸೂರ್ಯನಾರಾಯಣ, ನ್ಯಾಯವಾದಿಗಳಾದ ಎಸ್.ಆರ್. ಪಾಟೀಲ, ಬಿ.ಎಸ್. ಅಕ್ಕಿವಳ್ಳಿ, ಎಂ.ಎಂ. ಉಪ್ಪಿನ, ಕೆ.ಬಿ. ದೊಡ್ಡಮನಿ, ಎ.ಎಂ. ಗುಲಾಮಲಿಶ್ಯಾನವರ, ಕೆ.ಜಿ. ಸವದತ್ತಿ, ರಂಗನಾಥ ಅಕ್ಕಿವಳ್ಳಿ, ಎನ್.ಬಿ. ರಾಯ್ಕರ, ಎಂ.ವಿ. ಮಟ್ಟಿಮನಿ, ಎಸ್.ಎಲ್. ಬಣಕಾರ, ರವಿಬಾಬು ಪೂಜಾರ, ಎಫ್.ಬಿ. ಮಡಿವಾಳರ, ಜೆ.ಬಿ. ಕೊಂಡೋಜಿ, ಎಂ.ಎಸ್. ಹುಲ್ಲೂರ, ಎನ್.ಎಸ್. ದೊಡ್ಡಮನಿ, ರವಿ ಕಲಾಲ ಪಾಲ್ಗೊಂಡಿದ್ದರು.
--
ಹೋರಾಟದ ಫಲ ಸ್ವಾತಂತ್ರ್ಯ
ಶಿಗ್ಗಾಂವಿ: ದೇಶಭಕ್ತರ ಹೋರಾಟದಿಂದ ಸಿಕ್ಕ ಸ್ವಾತಂತ್ರ್ಯದ ಫಲವಾಗಿ ನಾವಿಂದು ಸಮೃದ್ಧ ಸ್ವಾವಲಂಬಿ ಬದುಕು ನಡೆಸುವಂತಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು. ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಮಾಜಿ ಸದಸ್ಯ ವೀರಣ್ಣ ಬಡ್ಡಿ, ಸಂಸ್ಥೆ ನಿರ್ದೇಶಕ ಎಚ್.ಎಸ್. ಹಲಸೂರ, ಶಿವಪುತ್ರಪ್ಪ ಜಕ್ಕಣ್ಣವರ, ಅಶೋಕ ಕಾಳೆ, ರವಿ ಮಹಾಂತಶೆಟ್ಟರ, ಮುಖ್ಯಶಿಕ್ಷಕ ಎ.ಎನ್. ಕನವಳ್ಳಿ, ಜಿ.ಎಂ. ಅರಗೋಳ, ಸಿ.ಟಿ. ಪಾಟೀಲ, ಸಿ.ಬಿ. ಕುನ್ನೂರ ಇದ್ದರು. ನಾಗರಾಜ ದ್ಯಾಮನಕೊಪ್ಪ ಸ್ವಾಗತಿಸಿದರು. ಎಸ್.ಎಸ್. ಘೋಡಗೇರಿ ವಂದಿಸಿದರು. ವಸಂತಮಾಲಾ ದೇಶಪಾಂಡೆ ನಿರೂಪಿಸಿದರು.
ಭಯೋತ್ಪಾದನೆ ಕಿತ್ತೊಗೆಯಿರಿ
ಹಾವೇರಿ: ವೈಚಾರಿಕತೆಯ ನೆಪದಲ್ಲಿ ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿರುವ ಭಯೋತ್ಪಾದನೆ ವಿರುದ್ಧ ಯುವಜನತೆ ಧ್ವನಿ ಎತ್ತಬೇಕು. ಭೀತಿವಾದವನ್ನೂ ಕಿತ್ತೊಗೆಯಬೇಕಿದೆ ಎಂದು ಪ್ರಾಚಾರ್ಯ ಡಾ ಬಿ.ಸಿ. ಬನ್ನೂರ ಹೇಳಿದರು. ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರೊ ಎಂ.ಎಸ್. ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

