ಬೇಡಿಕೆ ಪೂರೈಕೆಗೆ ಆಧುನಿಕ ಕೃಷಿ ಪರಿಹಾರ
ಬ್ಯಾಡಗಿ: ಹಸಿರುಕ್ರಾಂತಿ ಪರಿಣಾಮ ದೇಶ ಆಹಾರ ಭದ್ರತೆ ಸಾಧಿಸಲು ಸಾಧ್ಯವಾಯಿತು. ಬೆಳೆಯುತ್ತಿರುವ ಜನಸಂಖ್ಯೆಗೆ ಆಧುನಿಕ ಕೃಷಿಯೊಂದೇ ಅಂತಿಮ ಪರಿಹಾರ ಎಂದು ಗ್ರಾಪಂ ಸದಸ್ಯ ಈರಪ್ಪ ಚಿನ್ನಿಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಖುರ್ದಕೋಡಿಹಳ್ಳಿಯಲ್ಲಿ ರೈತ ಮಂಜು ಪೂಜಾರ ಇವರ ಹೊಲದಲ್ಲಿ ನವಭಾರತ ಫರ್ಟಿಲೈಸರ್ಸ್ ಲಿ. ಆಶ್ರಯದಲ್ಲಿ ಆಯೋಜಿಸಿದ್ದ ಎಲೆಕೋಸು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರ ಹಾಗೂ ಹೈಬ್ರಿಡ್ ತಳಿ ಬೀಜ ಬಳಕೆಯಿಂದಾಗಿ ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ಹಣದಾಸೆಗಾಗಿ ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ಕೃಷಿಭೂಮಿಗೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಬಳಕೆ ಮಾಡುತ್ತಿರುವುದು ದುರಂತ ಎಂದು ಬಣ್ಣಿಸಿದರು.
ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸುತ್ತಿರುವ ಪರಿಣಾಮ ಭೂಮಿಯು ತನ್ನ ಎಂದಿನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಸೇವಿಸುವ ಆಹಾರವು ಸತ್ವರಹಿತವಾಗುತ್ತಿದ್ದು, ವಿಷಯುಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಅನ್ನ ಹಾಕುವ ನಾವೆಲ್ಲರೂ ಗಂಭೀರ ಚಿಂತನೆ ನಡೆಸುವ ಮೂಲಕ ಗೊಬ್ಬರದ ಬಳಕೆ ಮಾಡುವಾಗ ವೈಜ್ಞಾನಿಕ ಪದ್ಧತಿ ಅನುಸರಿಸಬೇಕಾಗಿದೆ ಎಂದರು.
ಆಧುನಿಕ ಕೃಷಿ ಪದ್ಧತಿಯಲ್ಲಿ ಹೆಚ್ಚು ಇಳುವರಿ ಪಡೆಯಬಹುದಾದರೂ ಅಧಿಕ ಹಣ ವ್ಯಯಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ತಾಲೂಕಾದ್ಯಂತ ಬೆಳೆದಿರುವ ಎಲೆಕೋಸು ಒಂದು ರಾಜ್ಯದಲ್ಲಿರುವ ಜನರಿಗೆ ಆಹಾರ ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಫರ್ಟಿಲೈಸರ್ಸ್ ಲಿಮಿಟೆಡ್ ಜಿಲ್ಲಾ ಮುಖ್ಯಸ್ಥ ಜಿ.ಎಂ. ಗುರುಸಿದ್ದಯ್ಯ, ಎಚ್. ಶಂಕರಗೌಡ, ಸಿ.ಬಿ. ಶ್ರೀಕಾಂತ, ಕೆ. ಗೋಪಿ, ಗ್ರಾಮದ ರೈತರು ಉಪಸ್ಥಿತರಿದ್ದರು. ಸಂಜಯ ಕುಮಾರ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

