ಸತಗಿಹಳ್ಳಿ ಶಾಲೆಯಲ್ಲಿ ವನಮಹೋತ್ಸವ
ಹಿರೇಕೆರೂರು: ದಿನ ನಿತ್ಯ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳನ್ನು ಜೀವಶಾಸ್ತ್ರೀಯ ನಿಯಂತ್ರಣದಿಂದ ಹತೋಟಿಗೆ ತರಲು ಸಾಧ್ಯವಿದೆ ಎಂದು ಮುಖ್ಯ ಶಿಕ್ಷಕ ಚನ್ನವೀರ ಚಕ್ರಸಾಲಿ ಅಭಿಪ್ರಾಯ ಪಟ್ಟರು.
ತಾಲೂಕಿನ ಸತಗಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಜರುಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾನಿಕಾರಕ ಸೊಳ್ಳೆಗಳು ನೀರಿನಲ್ಲಿ ಬೆಳೆಯುತ್ತವೆ. ಅವುಗಳನ್ನು ನಿಯಂತ್ರಣ ಮಾಡಲು ಡಿಡಿಟಿ ಮುಂತಾದ ವಿಷಕಾರಿ ರಾಸಾಯಿನಿಕ ಔಷಧಿಗಳನ್ನು ಬಳಸುವ ಬದಲು ಡ್ರೇಗನ್ ಪ್ರೈಮರಿ ಅಥವಾ ಡ್ಯಾಮ್ ಸೆಲ್ಫ್ ಮರಿಗಳನ್ನು ಬಳಸಿದರೆ ಇವು ಸೊಳ್ಳೆಗಳನ್ನು ತಿನ್ನುತ್ತವೆ. ಯಾವುದೇ ದುಷ್ಪರಿಣಾಮ ಇಲ್ಲದೆ ಸೊಳ್ಳೆ ಕಾಟ ತಪ್ಪುತ್ತದೆ. ಪ್ರಕೃತಿ ವಿಶಿಷ್ಟ ಜೀವಕೋಶವಿದ್ದಂತೆ. ಇದು ಪರಿಸರದಲ್ಲಿರುವ ಎಲ್ಲ ಜೀವಿಗಳಿಗೂ ಪೂರಕವಾಗಿದ ವಾತಾರಣ ಸೃಷ್ಟಿಸುವ ಮೂಲಕ ಉದಾರತೆ ಮೆರೆಯುತ್ತದೆ. ಪರಿಸರ ತನಗಾಗಿ ಏನೂ ಬೇಡುವುದಿಲ್ಲ. ಬೇಡಿದ ಎಲ್ಲರಿಗೂ ಹಾಗೂ ಎಲ್ಲ ಜೀವಿಗಳಿಗೂ ಬದುಕನ್ನು ನಡೆಸಲು ಪೂರಕ ವಾತಾವರಣ ಮಾಡಿಕೊಡುತ್ತದೆ. ಮರಗಳು ತನ್ನನ್ನು ಕಡಿಯುವವರಿಗೂ ನೆರಳು, ಹಣ್ಣುಗಳನ್ನು ಕೊಡುತ್ತವೆ. ಆದರೆ ಮಾನವರು ಗಿಡ ಮರಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತ ಪ್ರಕೃತಿಗೆ ದ್ರೋಹ ಎಸುಗುತ್ತಿರುವುದು ಒಳ್ಳೆಯದಲ್ಲ. ಗಿಡಗಳನ್ನು ಮಕ್ಕಳಂತೆ ಬೆಳೆಸಲು ಮುಂದಾಗಬೇಕು ಎಂದರು.
ಶಾಲಾ ಆವರಣದಲ್ಲಿ ಪ್ರಧಾನಮಂತ್ರಿ ಕಾವ್ಯಾ ಶಾಂತನಗೌಡ್ರ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯೆ ಹನುಮವ್ವ ಹರಿಜನ, ಎಸ್ಡಿಎಂಸಿ ಅಧ್ಯಕ್ಷ ರಂಗಪ್ಪ ಮೇದೂರ, ಶರಣಪ್ಪ ಕರುಬರ, ರೂಪಾ ಓಲೇಕಾರ, ಮಹದೇವಕ್ಕ ಹೆಗಡೇರ, ಶಿಕ್ಷಕರಾದ ವಿನಾಯಕ ಭೀಮಪ್ಪನವರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
--
ಕೃಷ್ಣಾಷ್ಟಮಿ: 25ರಂದು ಛದ್ಮವೇಷ, ನೃತ್ಯ ಸ್ಪರ್ಧೆ
ಹಾವೇರಿ: ಭಾರತ ವಿಕಾಸ ಪರಿಷತ್ತು ಹಾಗೂ ಗೆಳೆಯರ ಬಳಗ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆ. 25ರಂದು ಮುಂಜಾನೆ 9.30ಕ್ಕೆ ಗೆಳೆಯರ ಬಳಗದ ಪ್ರಾಥಮಿಕ ಶಾಲೆಯ ಶ್ರೀಮತಿ ಮಣಿಬಾಯಿ ಲೊಡಾಯ ಸಭಾಭವನದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲು ಛದ್ಮವೇಷ ಹಾಗೂ ಗುಂಪು ನೃತ್ಯ ಪ್ರದರ್ಶನ ಆಯೋಜಿಸಿವೆ. ಶ್ರೀಕೃಷ್ಣನನ್ನು ಕುರಿತ ವೇಷ ಹಾಗೂ ನೃತ್ಯಗಳಿಗೆ ಮಾತ್ರ ಅವಕಾಶ. ಹಾವೇರಿ ನಗರದ 6 ವರ್ಷದೊಳಗಿನ ಮಕ್ಕಳಿಗೆ ಛದ್ಮವೇಷ ಹಾಗೂ ಪ್ರಾಥಮಿಕ-ಪ್ರೌಢಶಾಲೆಯ ಮಕ್ಕಳಿಗೆ ಗುಂಪು ನೃತ್ಯ. 10 ಮಕ್ಕಳು ಗುಂಪು ನೃತ್ಯದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿಪತ್ರ, ನೆನಪಿನ ಕಾಣಿಕೆ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

