ಹಾವೇರಿ

ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಿ: ರಾಮಣ್ಣ

Published On :

ಶಿಗ್ಗಾಂವಿ: ಕುರುಬ ಜನಾಂಗದ ಮೂಲ ಕಸಬು ಕೃಷಿಯಾಗಿದೆ. ಕೃಷಿಯ ಮೂಲಕ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಗಳು ರೂಪುತಾಳಿದ್ದು, ಅವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಅವಶ್ಯಕತೆ ಇದೆ ಎಂದು ಖ್ಯಾತ ಜಾನಪದ ವಿದ್ವಾಂಸ ಹಾಗೂ ಸಂಶೋಧಕ ಕ್ಯಾತನಹಳ್ಳಿ ರಾಮಣ್ಣ ಪ್ರತಿಪಾದಿಸಿದರು.
ಗೊಟಗೊಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಜಾನಪದ ದಿನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂಸ್ಕೃತಿಯು ಕೃಷಿ ಪದ್ಧತಿಯಿಂದ ಉಗಮವಾಗಿದ್ದು, ಜಾನಪದದ ಮೂಲ ಬೇರುಗಳು ಇರುವುದು ಬೇಸಾಯ ಸಂಸ್ಕೃತಿಯಲ್ಲಿ ಎಂದು ನಾಡಿನ ಅಭಿಪ್ರಾಯಪಟ್ಟರು.
ಖ್ಯಾತ ಜಾನಪದ ವಿದ್ವಾಂಸ ಡಾ೤ ಯು.ಎಸ್. ರಾಮಣ್ಣ ಅವರು ಮಾತನಾಡಿ, ಗ್ರಾಮೀಣ ಜನರ ಸಮೃದ್ಧ ಬದುಕಿನ ಅನುಭವಗಳು ಅನಾವರಣಗೊಳ್ಳಬೇಕು. ರಂಗಭೂಮಿ ಹಾಗೂ ಜಾನಪದ ಕುರಿತು ತೌಲನಿಕ ಅಧ್ಯಯನ, ಸಂಶೋಧನೆ ಆಗಬೇಕು. ಈ ಹಿನ್ನೆಲೆಯಲ್ಲಿ ಜಾನಪದ ವಿಶ್ವವಿದ್ಯಾಲಯವು ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ೤ ಅಂಬಳಿಕೆ ಹಿರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾಲಯವು ಹೆಚ್ಚಿನ ಮಟ್ಟದಲ್ಲಿ ಕಾರ್ಯಪ್ರವೃತ್ತಗೊಳ್ಳಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ೤ ಸಿ.ಎ. ಸೋಮಶೇಖರಪ್ಪ ಮಾತನಾಡಿದರು.
ಕ್ಯಾತನಹಳ್ಳಿ ರಾಮಣ್ಣ ಹಾಗೂ ಡಾ೤ ಯು.ಎಸ್. ರಾಮಣ್ಣ ಅವರನ್ನು ವಿಶ್ವವಿದ್ಯಾಲಯದಿಂದ ಸನ್ಮಾನಿಸಲಾಯಿತು.
ಜಾನಪದ ವಿದ್ವಾಂಸರಾದ ಡಾ೤ ಎಂ.ಜಿ. ಈಶ್ವರಪ್ಪ ದಂಪತಿ, ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ೤ ಚಂದ್ರ ಪೂಜಾರಿ, ಡಾ೤ ಶ್ರೀಶೈಲ ಹುದ್ದಾರ, ಮೂಡಲಪಾಯ ಯಕ್ಷಗಾನ ಕಲಾವಿದರಾದ ಮಡಿವಾಳರ ಉಪಸ್ಥಿತರಿದ್ದರು. ಬಸವರಾಜ ಶಿಗ್ಗಾಂವಿ, ವೀರೇಶ ಬಡಿಗೇರ, ಎನ್.ಎಚ್. ನದಾಫ್ ತತ್ವಪದ ಹಾಡಿದರು.
ಸಾವಕ್ಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ೤ ಸ.ಚಿ. ರಮೇಶ ಸ್ವಾಗತಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ೤ ಕೆ. ಕಮಲಾಕ್ಷ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಂಶೋಧನಾಧಿಕಾರಿ ಡಾ೤ ಕೆ. ಪ್ರೇಮಕುಮಾರ ವಂದಿಸಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ಸಂಯೋಜಿಸಿದ್ದರು. ಕ್ಷೇತ್ರ ಸಹಾಯಕ ಸಂಗಮೇಶ ಎಸ್. ಗಣಿ, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಎಸ್. ಜಯದತ್ತ ಹಾಗೂ ಪ್ರಕಾಶ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.