ಪುಟ್ಟರಾಜರು ನಾಡಿನ ದಿವ್ಯ ಚೇತನ
ಹಾನಗಲ್ಲ: ಲಿಂ. ಪಂಡಿತ ಪುಟ್ಟರಾಜಕವಿ ಗವಾಯಿಗಳವರು ಸೃಜನಶೀಲ ಸಂಗೀತ ವಿದ್ವಾಂಸರೂ, ಧಾರ್ಮಿಕ ಕವಿಯೂ ಆಗಿ, ನಾಡ ದಿವ್ಯ ಚೇತನವಾಗಿ, ನಾಡುವಂದ್ಯ ಶ್ವೇತ ವಸ್ತ್ರದ ಮಹಾತ್ಮರಾಗಿ ಜೀವನ್ಮುಕ್ತರಾದರು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರು ಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ನುಡಿದರು.
ಹಾನಗಲ್ಲಿನಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 3ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಅವರು, ಕನ್ನಡ-ಸಂಸ್ಕೃತಗಲ್ಲೇ ಬರೆದ ಮಹಾಕವಿ, ಕನ್ನಡದ ಧಾರ್ಮಿಕ ಕವಿ ಅವರು. ಶಿವನಿಷ್ಠರಾಗಿ, ಆಸ್ತಿಕ ಧರ್ಮ ಪ್ರಚಾರಕರಾಗಿ ಸಮಾಜಕ್ಕೆ ಪ್ರೇರಣೆಯಾಗಿ ಬಾಳಿದರು. ನಾಳಿನ ಸಾಂಸ್ಕೃತಿಕ, ಸಾಮಾಜಿಕ ಕಳಕಳಿಗಾಗಿ, ಅಂಧ ಅನಾಥರ ಬದುಕು ಹಸನಾಗಿಸಲು ನುಡಿದಂತೆ ನಡೆದ ಗವಾಯಿಗಳು ಮಹಾಮಹಿಮರು ಎಂದು ಬಣ್ಣಿಸಿದರು.
ಸದ್ವಿನಿಯೋಗ ಆಗಲಿ: ಧರ್ಮಸಭೆ ಉದ್ಘಾಟಿಸಿದ ಮಾಜಿ ಸಚಿವ ಸಿ.ಎಂ. ಉದಾಸಿ, ಧರ್ಮ-ಸಂಸ್ಕೃತಿ ರಕ್ಷಣೆಗಾಗಿ ಶ್ರಮಿಸಲು ಸಂಘಟನಾತ್ಮಕ ಶಕ್ತಿ ಸದ್ವಿನಿಯೋಗ ಆಗಬೇಕಾಗಿದೆ. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು, ಪಂಡಿತ ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳಂತಹ ಮಹಾತ್ಮರನ್ನು ಪಡೆದ ನಾಡು ನಮ್ಮದು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಅಧ್ಯಕ್ಷ ನಾಗೇಶ ಪಡೆಪ್ಪನವರ, ಮನುಕುಲದ ಪ್ರೇರಣೆಯಾಗಿರುವ ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಹೆಸರಿನಲ್ಲಿ ಸಂಗೀತ ಸಮಾರಂಭಗಳು ನಿರಂತರವಾಗಿ ನಡೆಯಬೇಕು. ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರಾಗಿ ಭಕ್ತರ ಮನ ತಣಿಸಿದರೆಂದು ನುಡಿದರು.
ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಬಿಜಕಲ್ ಶಿವಲಿಂಗ ಸ್ವಾಮೀಜಿ, ಹೋತನಹಳ್ಳಿ ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉತ್ಸವ ಸಮಿತಿ ಕೋಶಾಧ್ಯಕ್ಷ ನಾಗಪ್ಪ ಸವದತ್ತಿ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯೆ ವಿಜಯಾ ಹಿರೇಮಠ, ಪುರಸಭಾ ಅಧ್ಯಕ್ಷ ಲಕ್ಷ್ಮೀ ಹರಿಜನ, ನ್ಯಾಯವಾದಿ ಜಿ.ವಿ. ಕಂಬಾಳಿಮಠ, ಪ್ರೊ. ಸಿ.ಎಸ್. ಬಡಿಗೇರ, ಕಲ್ಯಾಣಕುಮಾರ ಶೆಟ್ಟರ, ಕೆ.ಎಲ್. ದೇಶಪಾಂಡೆ, ಅರುಣ ನಾಗಜ್ಜನವರ, ಗುರುಸಿದ್ದಪ್ಪ ಕೊಂಡೋಜಿ, ಏಳುಕೋಟೆಪ್ಪ ಹಾವಳೇರ, ಮುತ್ತಣ್ಣ ನಾಸಿಕ, ಪ್ರಭು ದೊಡ್ಡಕುರುಬರ, ಎಚ್.ಪಿ. ವೆಂಕಟೇಶ, ಎಸ್.ಎಂ. ಕೋತಂಬರಿ, ಕೇಶವ ಶೇಷಗಿರಿ, ವೆಂಕಟಾಪುರಮಠ, ಪ್ರಕಾಶ ಸಿಂಧೂರ, ಹಾಶಂಪೀರ ಇನಾಮದಾರ, ಗುರುರಾಜ ನಿಂಗೋಜಿ, ಪಿ.ಕೆ. ಪಾರಂಗಾಂವಕರ ಇದ್ದರು. ಪ್ರೊ. ಮಾರುತಿ ಶಿಡ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರಂಜನ ಗುಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

