ಅಪಹೃತ ಅಧಿಕಾರಿ ಪತ್ತೆ ಮಾಡಿ: ಸರ್ಕಾರಕ್ಕೆ ಮನವಿ
ಶಿಗಾಂವಿ: ಹೊರ ರಾಜ್ಯದವರಿಂದ ರಾಜ್ಯದ ಪ್ರತಿಷ್ಠಿತ ವ್ಯಕ್ತಿ ಹಾಗೂ ಅಧಿಕಾರಿಗಳನ್ನು ಅಪಹರಿಸುವ ದುಸ್ಸಾಹಸ ನಿರಂತರವಾಗಿ ನಡೆಯುತ್ತಿದೆ. ವರನಟ ಡಾ ರಾಜಕುಮಾರ್ ಹಾಗೂ ಛಾಯಾಗ್ರಾಹಕರ ಅಪಹರಣ ಪ್ರಕರಣಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ. ಒಡಿಶಾದಲ್ಲಿ ಗಣಿ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿ ಇಬ್ರಾಹಿಂ ಶರೀಫ್ ಅಪಹರಣವಾಗಿದೆ. ರಾಜ್ಯದಿಂದ ವಿಶೇಷ ತಂಡ ಕಳುಹಿಸಿ, ಅವರ ಪತ್ತೆಗೆ ಪ್ರಯತ್ನಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಹರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಕನ್ನಡಿಗರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬೇರೆ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಕನಕದಾಸ ಸೇವಾ ಸಮಿತಿಗೆ ಸಂಗಪ್ಪ ಕಂಕನವಾಡ ಆಯ್ಕೆ
ಶಿಗಾಂವಿ: ಪಟ್ಟಣದ ಕನಕದಾಸ ಸೇವಾ ಸಮಿತಿ ಅಧ್ಯಕ್ಷರಾಗಿ ಸಂಗಪ್ಪ ಕಂಕನವಾಡ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ತಿಪ್ಪಣ್ಣ ಬಿ. ಜವಳಗಟ್ಟಿ, ಕಾರ್ಯದರ್ಶಿಯಾಗಿ ರವಿ ಶಿ. ಮುಳಕೇರಿ, ಖಜಾಂಚಿಯಾಗಿ ಮಾಲತೇಶ ಕಂಕನವಾಡ, ಸಹ ಕಾರ್ಯದರ್ಶಿಯಾಗಿ ಪರಶುರಾಮ ಕುದರಿ ಆಯ್ಕೆಯಾಗಿದ್ದಾರೆ. ಸದಸ್ಯರಾದ ಗದಿಗೆಪ್ಪ ಕೋಡ್ಲಿವಾಡ, ಯಲ್ಲಪ್ಪ ಕುಂದೂರ, ಶೇಖಪ್ಪ ಗುಳೇದ, ಯಲ್ಲಪ್ಪ ಚಾಕಲಬ್ಬಿ, ಮಾಲತೇಶ ಯಲವಿಗಿ, ಯಲ್ಲಪ್ಪ ಮಲ್ಲೂರ ಉಪಸ್ಥಿತರಿದ್ದರು ಎಂದು ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸ ಸೇವಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

