ಶರಣೆ ದಾನಮ್ಮ ಅಧ್ಯಯನ ಕೇಂದ್ರಆರಂಭಿಸಿ: ನಿಜಗುಣಾನಂದ ಶ್ರೀ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 4
ಜಾತಿ, ಮತ, ಪಂಥ ಮೀರಿದ ಮಹಾಶರಣೆ ದಾನಮ್ಮಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ದಾನಮ್ಮ ಹಾಡುಗಳನ್ನಷ್ಟೇ ಅಲ್ಲ, ವಚನಗಳನ್ನೂ ಬರೆದಿರಬೇಕು. ಅವುಗಳ ಸಮಗ್ರ ಸಂಶೋಧನೆ ಹಾಗೂ ಅಧ್ಯಯನ ಕೇಂದ್ರ ಆರಂಭ ಆಗಬೇಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಯ ದಾನಮ್ಮ ದೇವಿ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಅವರು, ದಾನಮ್ಮ ನಮ್ಮ ಹೃದಯ, ಅರಿವಿನ ಪ್ರಜ್ಞೆಯಾಗಿದ್ದು, ಉಳಿದ ದೇವಸ್ಥಾನಗಳಿಗಿಂತ ಭಿನ್ನವಾಗಿದೆ. ಶರಣ ಪರಂಪರೆಯಲ್ಲಿ ಅತಿ ಹೆಚ್ಚು ಲಿಂಗ ಧಾರಣೆ ಮಾಡಿದ ಕೀರ್ತಿ ದಾನಮ್ಮಗೆ ಸಲ್ಲುತ್ತದೆ. ಅಂತರಂಗದ ಲಿಂಗಾಂಗ ಯೋಗಿಣಿಯಾದ ಆಕೆಯ ಬಗ್ಗೆ ವಿಚಾರ ಸಂಕಿರಣ, ಮಹಿಳೆಯರಿಗೆ ಯೋಗ, ಧ್ಯಾನ, ಲಿಂಗಪೂಜೆ ಕುರಿತು ಶಿಬಿರ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಶೋಭಾತಾಯಿ-ರಾಜಶೇಖರ ಮಾಗಾವಿ ದಂಪತಿ ಕಾರ್ಯ ಮೆಚ್ಚಲೇಬೇಕು ಎಂದು ಹೇಳಿದರು.
ಸುಮಾರು 900 ವರ್ಷಗಳ ಹಿಂದೆಯೇ ದಾನಮ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿ, ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾಳೆ. ಮಹಿಳೆಯರು ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಸ್ವಾಮೀಜಿ ನುಡಿದರು.
ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಸಮಿತಿಯವರು ಶುದ್ಧ ಕುಡಿವ ನೀರಿನ ಘಟಕ ಆರಂಭಕ್ಕೆ ಮುಂದಾಗಬೇಕು. ನಾಗರಿಕರು ಜೀವಜಲ ಪೋಲಾಗದಂತೆ ನೋಡಿಕೊಂಡು, ನಗರದ ಅಭಿವೃದ್ಧಿಗೆ ಅಗತ್ಯ ಸಲಹೆ ನೀಡಬೇಕು ಎಂದು ಹೇಳಿದರು.
ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯ ಸಂಜೀವ ನೀರಲಗಿ ಮಾತನಾಡಿದರು. ಶೋಭಾತಾಯಿ ಮಾಗಾವಿ ಅವರು ಹಿಂದಿಯಲ್ಲಿ ಬರೆದ ಬಸವಣ್ಣನವರ ಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಶೋಭಾತಾಯಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳನ್ನು ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ರಾಜಶೇಖರ ಮಾಗಾವಿ, ಶಿವರಾಜ ಮರ್ತೂರು, ಗಿರಿಜಾ ತಾಂಡೂರ ಇದ್ದರು.
ಶಿವಯೋಗೆಪ್ಪ ವಾಲಿಶೆಟ್ಟರ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ಕಾರ್ಯಕ್ರಮ ನಿರೂಪಿಸಿದರು. ಬಸವಕೇಂದ್ರದ ಶಿವಬಸಪ್ಪ ಹತ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

