ಮಠ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ
ಹಿರೇಕೆರೂರು: ಭಕ್ತರ ಒತ್ತಾಯಕ್ಕೆ ಮಣಿದು ದೇಣಿಗೆ ಸಂಗ್ರಹಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬಡವ ಬಲ್ಲಿದರೆನ್ನದೆ ಭಕ್ತರು ತಮಗೆ ತಿಳಿದಷ್ಟು ಹಣದ ಸಹಾಯ ಸಲ್ಲಿಸಿದಲ್ಲಿ ಏಕ ಮನಸ್ಸಿನಿಂದ ಸ್ವಿಕರಿಸಲಾಗುವುದು. ಪಕ್ಷ ಅಥವಾ ರಾಜಕೀಯ ವ್ಯಕ್ತಿ ನೀಡುವ ಹಣದಿಂದ ಮಠ ನಿರ್ಮಾಣವಾಗಬಾರದು. ಭಕ್ತರಿಂದಲೇ ನಿಧಿ ಸಂಗ್ರಹಣೆ ಆಗಬೇಕು ಎಂದು ಹರಿಹರ ಪಂಚಮಸಾಲಿ ಮಠಾಧೀಶ, ಜಗದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಆಲದಗೇರಿ ಗ್ರಾಮದಲ್ಲಿ ವೀರಶೈವ ಪಂಚಮಸಾಲಿ ಪೀಠದ ಕಟ್ಟಡ ಸ್ಥಾಪನೆಗೆ ಹಣ ಸಂಗ್ರಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಕ್ತರು ಶ್ರಮವಹಿಸಿ ದುಡಿದು ಉಳಿತಾಯ ಮಾಡಿದ ಹಣವನ್ನು ದಾನರೂಪದಲ್ಲಿ ಕೊಟ್ಟರೆ ಮಾತ್ರ ಮಾತ್ರ ಸ್ವಿಕರಿಸಲಾಗುವುದು. ಒತ್ತಾಯ ಅಥವಾ ನಿರ್ಬಂಧ ಇಲ್ಲ. ಸಮಸ್ತ ಸಮುದಾಯಕ್ಕೆ ಹಾಗೂ ನೊಂದವರಿಗೆ ನೆರಳಾಗಿ ಮಠದ ನಿರ್ಮಾಣವಾಗಬೇಕೆಂದರು.
ಮಠಗಳು ರಾಜಕೀಯ ಪಕ್ಷಗಳ ಸ್ವತ್ತಾಗಬಾರದು. ಭಕ್ತರ ಮಠವಾಗಬೇಕು. ಈ ಹಿಂದಿನ ಮುಖ್ಯಮಂತ್ರಿಗಳಿಬ್ಬರು ರು. 15 ಕೋಟಿ ಅನುದಾನ ನೀಡಲು ಬಂದಾಗ ನಿರಾಕರಿಸಿದೆವು. ಮಠದ ನಿರ್ಮಾಣಕ್ಕೆ ಕನಿಷ್ಠ ರು. 25ರಿಂದ 30 ಕೋಟಿ ಹಣ ಬೇಕಾಗಿದೆ. ಭಕ್ತರು ದಾನ ಕೊಟ್ಟರೆ ಸಾಕು, ಸರ್ಕಾರದ ಅನುದಾನ ಬೇಡ ಎಂದು ಶ್ರೀಗಳು ಹೇಳಿದರು.
ವೀರಶೈವ ಪಂಚಮಸಾಲಿ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ, ಪಂಚಮ ಸಾಲಿ ಮಠ ಧಾರ್ಮಿಕ ವಿಧಿ-ವಿಧಾನಗಳಿಗೆ ಸೀಮಿತವಾಗದೆ, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದರು. ತಾಲೂಕಾಧ್ಯಕ್ಷ ರುದ್ರೇಶ ಹುಲ್ಮನಿ, ರು. 1 ಕೋಟಿ ನಿಧಿ ಸಂಗ್ರಹಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಸ್.ಆರ್. ಅಂಗಡಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ನೀಲಮ್ಮ ಹೊಸಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸಮ್ಮ ಅಬಲೂರ, ಮುಖಂಡರಾದ ನಿಂಗಪ್ಪ ಚಳಗೇರಿ, ಬಿದ್ದಾಡೆಪ್ಪ ಉಕ್ಕುಂದ, ಮಹೇಶ ರಾಜೇರ, ವೀರಪ್ಪ ಪುರದ, ರಮೇಶ ಬೆನಕೆನಕೊಂಡ, ಸಿದ್ನಗೌಡ ತಿರುಕನಗೌಡ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

