ಪಾರದರ್ಶಕ ಆಡಳಿತಕ್ಕೆ ಸಿಸಿ ಕ್ಯಾಮೆರಾ
ಶಿಗ್ಗಾಂವಿ: ಸಾರ್ವಜನಿಕರ ಕುಂದುಕೊರತೆ, ಸಮಯಕ್ಕೆ ಸರಿಯಾಗಿ ಪುರಸಭೆ ಅಧಿಕಾರಿಗಳು ಸ್ಪಂದಿಸುವ ಹಾಗೂ ಪಾರದರ್ಶಕ ಆಡಳಿತ ನೀಡುವ ಸದುದ್ದೇಶದಿಂದ ಸಿಸಿ ಕ್ಯಾಮೆರ್ನಾ ಅಳವಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಡಿ.ಎನ್. ಹೇಳಿದರು.
ತಾಲೂಕಿನ ಬಂಕಾಪುರ ಪುರಸಭೆ ಕಾರ್ಯಾಲಯದಲ್ಲಿ ಸುಮಾರು ಎಂಟು ಸಿಸಿ ಕ್ಯಾಮೆರಾಗಳನ್ನ್ನು ಅಳವಡಿಸಲಾಗಿದೆ. ಇದಲ್ಲದೆ ಪುರಸಭೆಯ ವಿವಿಧ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಾಲಯದ ವೇಳೆಗೆ ಸರಿಯಾಗಿ ಬರುವ ಉದ್ದೇಶದಿಂದ ಅವರ ಹಾಜರಾತಿಗಾಗಿ ಬಯೋವುಟ್ರಿಕ್ ಕೂಡಾ ಅಳವಡಿಸಲಾಗಿದೆ ಎಂದು ಹೇಳಿದರು.
ಇಂಟರ್ಕಾಂ ಸೇರಿದಂತೆ ಇನ್ನ್ನು ಹಲವಾರು ವ್ಯವಸ್ಥೆಗಳನ್ನ್ನು ಮಾಡಲಾಗುವುದು ಎಂದರು. ಸಾರ್ವಜನಿಕರಿಗೆ ಇದು ಸಹಕಾರಿಯಾಗಲಿದ್ದು, ಇದರಿಂದ ಯಾವುದೇ ಕೆಲಸ ಮಾಡದೆ ಖಾಲಿ ಕೂಡ್ರೂವ, ಹರಟೆ ಹೊಡೆಯುವ ಪ್ರಮೇಯವೇ ಇಲ್ಲದಂತಾಗುತ್ತದೆ ಎಂದರು.
ಹಾವೇರಿ ಜಿಲ್ಲೆಯಲ್ಲಿಯೇ ಪುರಸಭೆಗೆ ಮೊಟ್ಟ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಿದ್ದು, ಬಂಕಾಪುರ ಪುರಸಭೆಯು ಮಾದರಿಯಾಗಿದೆ. ಇದಕ್ಕೆಲ್ಲ ಸುಮಾರು ಪುರಸಭೆ ನಿಧಿಯ ರು. 4 ಲಕ್ಷ ರು. 70 ಸಾವಿ ವೆಚ್ಚ ಮಾಡಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಬರುವ ದಿನಗಳಲ್ಲಿ ವಾಕಿಟಾಕಿಯನ್ನ್ನು ಅಳವಡಿಸಲಾಗುವುದು. ಬಂಕಾಪುರ ಪಟ್ಟಣದಲ್ಲಿ ಸ್ವಚ್ಛತಾ ಆಂದೋಲನವನ್ನ್ನು ಹಮ್ಮಿಕೊಳ್ಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

