ಬ್ಯಾಡಗಿಗೆ ಬಸ್ ಸಂಚಾರ ಕಲ್ಪಿಸಲು ಬದ್ಧ: ಶಿವಣ್ಣನವರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 9
ಪಟ್ಟಣವು ಮೆಣಸಿನಕಾಯಿ ವ್ಯಾಪಾರಿ ಕೇಂದ್ರವಾಗಿದ್ದು, ಆದ್ಯತೆ ಮೇರೆಗೆ ವಾಣಿಜ್ಯ ನಗರಿ ಬ್ಯಾಡಗಿಗೆ ಬಸ್ ಸಂಚಾರ ಕಲ್ಪಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಘಟಕ ಆಯೋಜಿಸಿದ್ದ ಬ್ಯಾಡಗಿ-ಸತಾರ ನೂತನ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಮೆಣಸಿನಕಾಯಿ ವ್ಯಾಪಾರಕ್ಕೆ ದೂರದ ಊರುಗಳಿಂದ ಬಹುತೇಕ ರೈತರು, ವ್ಯಾಪಾರಸ್ಥರು ಹಾಗೂ ಕೂಲಿಕಾರ್ಮಿಕರು ಪಟ್ಟಣಕ್ಕೆ ಆಗಮಿಸುತ್ತಾರೆ. ಇವರೆಲ್ಲರಿಗೂ ಸಂಚಾರ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲು ಬದ್ಧವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪಾಟೀಲ, ದಾನಪ್ಪ ಚೂರಿ, ಎಚ್.ಎಚ್. ದೊಡ್ಮನಿ, ದುರ್ಗೇಶ ಗೋಣೆಮ್ಮನವರ, ನಜೀರ್ ಶೇಖ್, ಬೀರಪ್ಪ ಬಣಕಾರ, ಘಟಕ ವ್ಯವಸ್ಥಾಪಕ ಎಸ್. ಶಿವಮೂರ್ತಿ, ಸಿ.ಬಿ. ಚನ್ನಗೌಡ್ರ, ಎಲ್.ಎಸ್. ಹುಲ್ಮನಿ, ಪಿ.ಎಸ್. ಹಾರೋಗೊಪ್ಪ, ತಿಪ್ಪಣ್ಣ ಗುದುಗಿ, ಜೆ. ರಾಜಶೇಖರ, ಈ.ಪಿ. ಅಗಸಿಮನಿ ಎಸ್.ಎಂ. ಹಿರೇಮಠ, ಎಚ್.ಜಿ. ಪಾಟೀಲ, ಎಂ.ಎಂ. ಮುಲ್ಲಾನವರ, ಪಿ. ಪ್ರಶಾಂತ್, ಎಂ.ಹಿದಾಯತ್ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

