ಸೌಲಭ್ಯ ವಿಳಂಬ: ಸಾರ್ವಜನಿಕರಿಂದ ಗ್ರಾಪಂಗೆ ಬೀಗ
ರಾಣಿಬೆನ್ನೂರು: ತಾಲೂಕಿನ ಗುಡ್ಡಗುಡ್ಡಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹುಲ್ಲತ್ತಿ ಗ್ರಾಮಕ್ಕೆ ಗ್ರಾಪಂನಿಂದ ಸಾರ್ವಜನಿಕರಿಗೆ ನೀಡಬೇಕಾಗಿರುವ, ಸರ್ಕಾರದ ವಿವಿಧ ಸೌಲಭ್ಯ ನೀಡುವಲ್ಲಿ ಗ್ರಾಪಂ ಆಡಳಿತ ಮಂಡಳಿ ವಿಫಲಗೊಂಡಿದೆ ಎಂದು ಆರೋಪಿಸಿ, ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಯುವಕ ಸಂಘದ ಸದಸ್ಯರು, ಗ್ರಾಮಸ್ಧರು ಗುಡ್ಡಗುಡ್ಡಾಪುರ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರು.
ಸೋಮವಾರ ಹುಲ್ಲತ್ತಿ ಗ್ರಾಮದ ಆಂಜನೇಯ ದೇವಸ್ಥಾನದ ಹತ್ತಿರ ಸೇರಿದ್ದ, ವಂದೇ ಮಾತರಂ ಯುವಕ ಸಂಘದ ಸದಸ್ಯರು, ಗ್ರಾಮಸ್ಧರು, ಸುಮಾರು 4ಕಿ.ಮೀ ಅಂತರದಲ್ಲಿರುವ ಗುಡ್ಡಗುಡ್ಡಾಪುರ ಗ್ರಾಪಂ ಕಾರ್ಯಲಯದವರೆಗೆ, ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಪಂ ಕಾರ್ಯಾಲಯವನ್ನು ತಲುಪಿ ಗ್ರಾಪಂ ಆಡಳಿತ ಮಂಡಳಿಯ ವಿರುದ್ದ ಧಿಕ್ಕಾರ ಕೂಗಿ, ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಂದೇ ಮಾತರಂ ಯುವಕ ಸಂಘದ ಮುಖಂಡ ಮಂಜುನಾಥ ಕೂರಗುಂದ ಮಾತನಾಡಿದರು.
ಗ್ರಾಪಂದಿಂದ ಗ್ರಾಮದ ಸಾರ್ವಜನಿಕರಿಗೆ ನೀಡಬೇಕಾಗಿರುವ ಮೂಲ ಸೌಲಭ್ಯಗಳಾದ, ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ಮಶಾನ ಅಭಿವೃದ್ದಿ ಸೇರಿದಂತೆ ಶಾಲಾ ಆವರಣದಲ್ಲಿನ ಕ್ರೀಡಾಂಗಣ ಅಭಿವೃದ್ದಿ ಪಡಿಸುವಲ್ಲಿ ಗುಡ್ಡಗುಡ್ಡಾಪುರ ಗ್ರಾಪಂ ಆಡಳಿತ ಮಂಡಳಿ ವಿಫಲಗೊಂಡಿದ್ದು, ಕಾರಣ ತಾಲೂಕು ಮತ್ತು ಜಿಪಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಡಳಿತ ಮಂಡಳಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಹಲ್ಲತ್ತಿ ಗ್ರಾಮದ ಪಂಚಾಯಿತಿ ಸದಸ್ಯಳಾದ ಜಾನಕಮ್ಮ ಕೂನಪ್ಪನವರ ಮಾತನಾಡಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಗ್ರಾಪಂ ಅಭಿವೃದ್ದಿ ಅಧಿಕಾರಿ, ಪಿ.ಜಿ. ಮೂಗಾನವರ ಮಾತನಾಡಿದರು. ಪ್ರತಿಭಟನೆಯಲ್ಲಿ ವಂದೇಮಾತರಂ ಯುವಕ ಸಂಘದ ಸದಸ್ಯರಾದ ಜಗದೀಶ ಕೆರೂಡಿ, ರವಿ ಕೆರೂಡಿ, ಮಾಲತೇಶ ಕಜ್ಜರಿ, ರಾಜು ಓಲೇಕಾರ, ಮೌನೇಶ ಹಳ್ಳಿ, ನೀಲವ್ವ ಕಜ್ಜರಿ, ಮಾಳವ್ವ ಓಲೇಕಾರ, ರೇಣುಕವ್ವ ಹರಿಜನ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

