ಬದುಕು ರೂಪಿಸುವ ಸಂಸ್ಕೃತಿ ಅಳವಡಿಸಿಕೊಳ್ಳಿ
ಹಾನಗಲ್ಲ: ತತ್ವಾದರ್ಶಗಳಿಲ್ಲದ ಬದುಕು ವ್ಯರ್ಥವಾಗಿದ್ದು, ಕಲೆ, ಸಂಗೀತ, ಸಂಸ್ಕೃತಿಯ ತಂಗಾಳಿ ಬೀಸಿ ಸಾಂಸ್ಕೃತಿಕ ಮೆರಗಿನೊಂದಿಗೆ ಬದುಕನ್ನ್ನು ರೂಪಿಸಿಕೊಳ್ಳುವತ್ತ ಸಮಾಜದ ಚಿತ್ತ ಬೇಕಾಗಿದೆ ಎಂದು ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಕರೆ ನೀಡಿದರು.
ಹಾನಗಲ್ಲ ತಾಲೂಕಿನ ಹುಣಸೆಟ್ಟಿಕೊಪ್ಪದಲ್ಲಿ ಜ್ಯೋತಿಷ್ಯ ವಿದ್ವಾನ್ ದಿ. ಪಂಡಿತ್ ವಸಂತಪ್ಪ ಶಾಸ್ತ್ರೀಗಳವರ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘ ಹಾಗೂ ಹಾವೇರಿಯ ಕನ್ನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ದಿ. ಪಂಡಿತ್ ವಸಂತಪ್ಪ ಶಾಸ್ತ್ರೀಗಳವರ ಸ್ಮರಣೋತ್ಸವ ಹಾಗೂ ಸಂಗೀತ ಸಂಜೆ, ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ಪೀಳಿಗೆಯಲ್ಲಿ ಸಾಮಾಜಿಕ ಅರಿವು ಕಡಿಮೆಯಾಗುತ್ತಿದೆ. ನಮ್ಮ ಸುತ್ತಲ ಪರಿಸರ ಶುದ್ಧವಾಗಿರಬೇಕು. ಕೂಡಿ ಬಾಳುವ ಸ್ವರ್ಗ ಸುಖ ಬೇಕಾಗಿದೆ. ಅಧಿಕಾರ ಬಂದಾಗ ಮೈಮರೆತು ವರ್ತಿಸಬಾರದು. ಯಶಸ್ವಿ ಜೀವನ ವಿಧಾನಕ್ಕೆ ಪ್ರೇರಣೆ ಬೇಕಾಗಿದೆ. ಸಾಧಕರನ್ನು ಗೌರವಿಸುವ, ನಾಡ ಪ್ರೀತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೊ ಮಾರುತಿ ಶಿಡ್ಲಾಪುರ, ಸಂಗೀತ ಕ್ಷೇತ್ರಕ್ಕೆ ಹಾನಗಲ್ಲ ತಾಲೂಕಿನ ಕೊಡುಗೆ ಗಣನೀಯ. ಸಂಗೀತ ಸಾಹಿತ್ಯದ ಮೂಲಕ ಮನಸ್ಸನ್ನ್ನು ಅರಳಿಸಿಕೊಳ್ಳಲು ಸಾಧ್ಯ. ಹುಟ್ಟಿನ ಸಾರ್ಥಕತೆಗೆ ಸಮಾಜಮುಖಿ ಕಾರ್ಯವಾಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿ ಸಿಂದಗಿ ಶಾಂತವೀರೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಯೋತಿಷ್ಯ ಒಂದು ಶಾಸ್ತ್ರ. ಸೂಕ್ತ ಅರಿವಿಲ್ಲದೆ ಯಾವುದನ್ನೂ ಹೀಗಳೆಯುವುದು ಸರಿಯಲ್ಲ. ಸಂಗೀತ ಸಾಹಿತ್ಯಕ್ಕೆ ಇರುವ ಶಕ್ತಿಯ ಅರಿವಿಲ್ಲದೆ ಮನುಷ್ಯ ಮೌಢ್ಯದ ಹಾದಿ ಹಿಡಿಯುತ್ತಿದ್ದಾನೆ ಎಂದು ವಿಷಾದಿಸಿದರು.
ಪಿಎಸಿಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಪ್ಪ ಗುಡಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲಾವಿದರಾದ ವೇದಮೂರ್ತಿ ಬಸವಣ್ಣೆಯ್ಯ ಶಾಸ್ತ್ರಿಗಳು ವೆಂಕಟಾಪುರಮಠ, ಗೋಪಾಲಾಚಾರ್ಯ ಬಡಿಗೇರ, ನ್ಯಾ. ಎಸ್.ಆರ್. ಕದಂ ಅವರನ್ನು ಸನ್ಮಾನಿಸಲಾಯಿತು. ಹಿರೇಕಣಗಿ ಪಿಎಸಿಎಸ್ ಬ್ಯಾಂಕ್ ಅಧ್ಯಕ್ಷ ಬಿ.ಎಸ್. ಕುಕನಗೌಡ್ರ, ರಾಜಪ್ಪ ಸಂಕಪಾಳೆ, ಮಂಜಪ್ಪ ಹೊಂಬಳಿ, ಪರಮೇಶ್ವರಪ್ಪ ನೆಗವಣಗಿ, ಪ್ರಭು ದೊಡ್ಡಕುರುಬರ, ಆನಂದಪ್ಪ ಜಾಧವ, ಮಂಜು ಬಳಿಗಾರ, ವಿಷ್ಣುಕಾಂತ ಜಾಧವ ಇದ್ದರು. ಜ್ಯೋತಿಷ್ಯ ವಿದ್ವಾನ್ ದಿ. ಪಂಡಿತ್ ವಸಂತಪ್ಪ ಶಾಸ್ತ್ರಿಗಳವರ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘದ ಅಧ್ಯಕ್ಷ ವೆಂಕಟೇಶ ಗವಾಯಿಗಳು ಪ್ರಾಸ್ತಾವಿಕ ಮಾತನಾಡಿದರು. ಸುಭಾಸಪ್ಪ ಅರ್ಕಸಾಲಿ ಸ್ವಾಗತಿಸಿದರು. ನಿರಂಜನ ಗುಡಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

