ಹಾವೇರಿ

ಎಲ್ಲ ಧರ್ಮಗಳ ಉತ್ತಮಾಂಶ ಪಾಲಿಸೋಣ: ನಾಗೇಂದ್ರ

Published On :

ಹಾನಗಲ್ಲ: ಭಾರತದಲ್ಲಿ ಕ್ರೈಸ್ತ ಮಿಷನರಿಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆ ಅಪಾರ. ಸರ್ವ ಧರ್ಮದ ಸಾರವೂ ಒಂದೇ. ಎಲ್ಲ ಧರ್ಮದ ಉತ್ತಮ ಅಂಶಗಳನ್ನು ಪಾಲಿಸೋಣ. ಈ ಸಮಾಜದಲ್ಲಿ ದೀನ ದಲಿತ, ಬಡವರ ಸೇವೆಗೆ ಪಣ ತೊಡೋಣ ಎಂದು ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ ಹೇಳಿದರು.
ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ (ಸಮಾಜ ಸೇವಾ ಸಂಸ್ಥೆ) ಕ್ರಿಸ್ಮಸ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಲೊಯೋಲೋ ವಿಕಾಸ ಸಂಸ್ಥೆ ಗ್ರಾಮಗಳಲ್ಲಿ ಮಹಿಳಾ ಸಂಘಗಳನ್ನು ಆರಂಭಿಸಿ, ಬಡ ಕುಟುಂಬಗಳ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿದೆ. ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸಿದೆ. ಸರ್ಕಾರಿ ಸೌಲಭ್ಯಗಳ ಕುರಿತು ತರಬೇತಿ ನೀಡಿ ಗ್ರಾಮೀಣ ಪರಿಸರದಲ್ಲಿ ಜನಜಾಗೃತಿಗೆ ಕಾರಣವಾಗಿದೆ. ಮಾರಕ ರೋಗಗಳ ಕುರಿತು ಮಾಹಿತಿ ನೀಡುವ ಮೂಲಕ ಸ್ವಚ್ಛ-ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಹಾನಗಲ್ಲ ಪಿಎಸ್‌ಐ ಮಹದೇವ ಯಲಿಗಾರ ಮಾತನಾಡಿ, ಮದರ್ ತೆರೇಸಾ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು. ಸಮಾಜವನ್ನು ಬಡತನದಿಂದ ಮುಕ್ತಗೊಳಿಸಿ, ಮೇಲು-ಕೀಳೆಂಬ ಭಾವನೆ ತೊಲಗಿಸೋಣ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಮಾತನಾಡಿ, 21ನೇ ಶತಮಾನದ ವೈಜ್ಞಾನಿಕ ಯುಗದಲ್ಲೂ ಜಾತೀಯತೆ ಮುಂದುವರಿದಿರುವುದು ವಿಷಾದದ ಸಂಗತಿ. ಎಲ್ಲ ಧರ್ಮಗಳೂ ಶ್ರೇಷ್ಠ. ಅವುಗಳ ಸಂದೇಶಗಳೂ ಒಂದೇ ಆಗಿವೆ. ಸಮುದಾಯಗಳ ನಡುವೆ ಗೊಂದಲ ಏರ್ಪಡುವುದನ್ನು ನಿಲ್ಲಿಸಿ ಒಂದಾಗಿ ಬಾಳುವ ಮನೋಭಾವ ಬೆಳಸಿಕೊಳ್ಳಬೇಕು. ಜಾತ್ಯತೀತ ಸಮಾಜ ನಮ್ಮದಾಗಬೇಕು ಎಂದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ಸಿ. ಮೀನಾ ಮೋನಿಕ ಕ್ರಿಸ್ಮಸ್ ಸಂದೇಶ ನೀಡಿದರು. ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ, ಧರ್ಮಗುರು ಫಾ. ಫ್ರಾನ್ಸಿಸ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ವಿರಾಟ ನಗರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಚ್. ಶಿರ್ಶಿ, ತಾಪಂ ಉಪಾಧ್ಯಕ್ಷೆ ಅನೀತಾ ಶಿವೂರ, ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಬ್ಬಂದಿ ಇದ್ದರು. ಛಾಯಪ್ಪ ಪ್ರಾರ್ಥಿಸಿದರು. ಪ್ರದೀಪ್ ಸ್ವಾಗತಿಸಿದರು. ನಯನಾ ಕಾರ್ಯಕ್ರಮ ನಿರೂಪಿಸಿದರು. ಬಸಮ್ಮ ವಂದಿಸಿದರು.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.