ಹಾವೇರಿ

ಶಿಕ್ಷಣದಿಂದ ಸಂಸ್ಕಾರ: ಕರಿಲಿಂಗಪ್ಪನವರ

Published On :

ಬ್ಯಾಡಗಿ: ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಸಂಸ್ಕಾರ ಬೆಳೆಯಬಲ್ಲದು. ಇತ್ತೀಚೆಗೆ ಮಕ್ಕಳಲ್ಲಿ ಬರೆಯುವ, ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಮಾನವೀಯ ಮೌನ್ಯಗಳೂ ಮಾಯವಾಗುತ್ತಿವೆ ಎಂದು ತಾಪಂ ಸದಸ್ಯ ಮಲ್ಲಿಕಾರ್ಜುನಪ್ಪ ಕರಲಿಂಗಪ್ಪನವರ ವಿಷಾದಿಸಿದರು.
ಕದರಮುಂಡಲಗಿ ಸರ್ಕಾರಿ ಹಿಪ್ರಾ ಹೆಣ್ಣುಮಕ್ಕಳ ಶಾಲೆಯಲ್ಲಿ ಬಿಸಲಳ್ಳಿ ವಿಭಾಗದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಉದ್ಘಾಟಿಸಿ, ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮಾಲತೇಶ ಅರಳೀಮಟ್ಟಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಹಮ್ಮಿಗಿ, ಎಪಿಎಂಸಿ ಸದಸ್ಯ ರವೀಂದ್ರ ಪಟ್ಟಣಶೆಟ್ಟಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಬಡಗಣ್ಣನವರ, ಹನುಮಂತಪ್ಪ ಕುರುಡಮ್ಮನವರ, ಬಸವಂತಪ್ಪ ಕುಡುಪಲಿ, ಬಸವರಾಜ ಕಾರಿಗೇರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅಕ್ಕಮ್ಮ ಅರ್ಕಾಚಾರಿ, ಪ್ರಕಾಶ ಅಜ್ಜಮ್ಮನವರ, ಹಾಲನಗೌಡ್ರ ದಾನಪ್ಪಗೌಡ್ರ, ವೀರಣ್ಣ ವೆಂಕಣ್ಣನವರ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಪಾಟೀಲ, ಎಚ್.ಡಿ. ಪುರದ. ಎಸ್.ಎಸ್. ತೇರದಾಳ, ಎಚ್.ಎಂ. ಖಾನ್, ಡಿ.ಎನ್. ಅಲ್ಲಾಪುರ, ವಿಷಯ ಪರಿವೀಕ್ಷಕ ಬಸವರಾಜಪ್ಪ ಇದ್ದರು.
ವಿ.ವಿ. ಮಾತನವರ ಮಾತನಾಡಿದರು. ಮುಖ್ಯ ಶಿಕ್ಷಕ ಬಿ.ಎಂ. ಜಗಾಪುರ ಸ್ವಾಗತಿಸಿದರು. ಪಿ.ಡಿ. ಪುಟ್ಟಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.