30ಕ್ಕೆ ಬಸವಣ್ಣ ದೇವರ ಕಾರ್ತಿಕೋತ್ಸವ
ಹಿರೇಕೆರೂರು: ತಾಲೂಕಿನ ಎಲಿವಾಲ ಗ್ರಾಮದ ಬಸವಣ್ಣ ದೇವರ ಕಾರ್ತಿಕೋತ್ಸವ ಹಾಗೂ ವೀರಮಹೇಶ್ವರ ದೇವರ ಜಾತ್ರೆ ಮತ್ತು ಗುಗ್ಗಳ ಮಹೋತ್ಸವ ಡಿ. 30ರಿಂದ ಜ. 1ರ ವರೆಗೆ ಅದ್ಧೂರಿಯಾಗಿ ಜರುಗಲಿದೆ. ಡಿ. 30ರಂದು ರಾತ್ರಿ 8ಕ್ಕೆ ಬಸವಣ್ಣ ದೇವರ ಕಾರ್ತಿಕೋತ್ಸವ ಮತ್ತು ಡಿ. 31ರಂದು ವೀರಮಹೇಶ್ವರ ಜಾತ್ರೆ ಮತ್ತು ಗುಗ್ಗಳ ಜರುಗಲಿದೆ. ಜ. 1ರಂದು ರಾತ್ರಿ 8ಕ್ಕೆ ಪರ್ವ ನಡೆಯವುದು. ಜ. 1ರಂದು ಬೆಳಗ್ಗೆ 10ಕ್ಕೆ ನಿಧಾನವಾಗಿ ಬೈಕ್ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ರು. 1501, ದ್ವಿತೀಯ ರು. 1001, ತೃತೀಯ ರು. 501 ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ ರು. 10 ಇದೆ. ಆಸಕ್ತರು ಮಂಜುನಾಥ ಸೊರಟೂರು (ಮೊ. 9972985170) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಬಿಜೆಪಿ ಯುವ ಮೋರ್ಚಾಗೆ ನೇಮಕ
ಸವಣೂರು: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಸಮನಿ ಅವರನ್ನು ನೇಮಕ ಮಾಡಲಾಗಿದೆ.
29ರಂದು 'ಅಮ್ಮನೆನ್ವ ಅಮೃತ' ಕೃತಿ ಬಿಡುಗಡೆ
ರಾಣಿಬೆನ್ನೂರು: ಕಸಾಪ ಹಾಗೂ ಗಾಯಿತ್ರಿ ವಸಂತ ಪ್ರಕಾಶನದ ಆಶ್ರಯದಲ್ಲಿ ಡಿ. 29ರಂದು ಬೆಳಗ್ಗೆ 11 ಗಂಟೆಗೆ ಮೆಡ್ಲೇರಿ ರಸ್ತೆಯಲ್ಲಿರುವ ತಾಲೂಕು ಕಸಾಪ ಸಭಾಭವನದಲ್ಲಿ 'ಅಮ್ಮನೆನ್ವ ಅಮೃತ' ಕವನ ಸಂಕಲನ ಬಿಡುಗಡೆ ಆಗಲಿದೆ.ಧಾರವಾಡ ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಸಿ.ವಿ. ವೇಣುಗೋಪಾಲ ಕೃತಿ ಬಿಡುಗಡೆ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸುವರು. ಹಲಗೇರಿ ಗ್ರಾಮದ ಸಂಗೀತ ಶಿಕ್ಷಕ ವಿದ್ವಾನ್ ಉತ್ತರಾಚಾರ್ಯ ಕಮ್ಮಾರ, ಹಾನಗಲ್ಲ ಜ.ಶಿ.ಸೌ. ಸಹಕಾರಿ ಸಂಘದ ನಿರ್ದೇಶಕ ಎ.ಎಸ್. ಬಳ್ಳಾರಿ, ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎಫ್. ಚಿನ್ನಿಕಟ್ಟಿ, ಪಪೂ ಕಾಲೇಜು ನೌಕರರ ಸಂಘದ ಕಾರ್ಯಾಧ್ಯಕ್ಷ ಎಚ್.ಬಿ. ಲಿಂಗಯ್ಯ, ಹಾವೇರಿ ಎಸ್‌ಜಿಎಂವಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಬೇವಿನಮರದ ಭಾಗವಹಿಸುವರು. 'ಅಮ್ಮನೆನ್ವ ಅಮೃತ' ಕೃತಿ ಬಗ್ಗೆ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡುವರು ಎಂದು ಗಾಯತ್ರಿ ವಸಂತ ಹೊಸಮನಿ ತಿಳಿಸಿದ್ದಾರೆ.
ಆರೋಪಿ ಪತ್ತೆಗೆ ಮನವಿ
ಹಾವೇರಿ: ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರದ ಕೋಹಿನೂರು ಕಾಲನಿಯ ಆರೋಪಿ ರಾಯೀಸ್ ಪಟೇಲ ಎಂಬಾತನ ಮೇಲೆ ರಾಣಿಬೆನ್ನೂರು ಪ್ರಧಾನ ದಿವಾಣಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೂ ಕಾಣೆಯಾಗಿದ್ದಾನೆ. ಆರೋಪಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ರಾಣಿಬೆನ್ನೂರು ಅಬಕಾರಿ ಠಾಣೆಗೆ ಮಾಹಿತಿ ನೀಡಲು ವಲಯ ಅಬಕಾರಿ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

