ಹಾನಗಲ್ಲ ಕೋಟೆ ಬಯಲಲ್ಲಿ ಹೋರಿ ಬೆದರಿಸುವ ಹಬ್ಬ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 30
ಊರ ತುಂಬಿದ 10 ಸಾವಿರಕ್ಕೂ ಅಧಿಕ ರೈತರ ಉತ್ಸಾಹದ ಕೇಕೆ, ಪರಾಕುಗಳ ಆರ್ಭಟಗಳ ನಡುವೆ ನೂರಾರು ಹೋರಿಗಳ ಸಂಭ್ರಮ, ಹೋರಿ ಹಿಡಿಯುವ ಕಲಿಗಳ ಕಸರತ್ತು - ಇದು ಸೋಮವಾರ ಇಲ್ಲಿ ನಡೆದ ಐತಿಹಾಸಿಕ ಹೋರಿ ಹಬ್ಬದ ದೃಶ್ಯ ವೈಭವ.
ಹಾನಗಲ್ಲಿನ ಐತಿಹಾಸಿಕ ಕೋಟೆಯ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಸೋಮವಾರ ಬೆಳಗ್ಗೆಯೇ ಹೋರಿ ಹಬ್ಬಕ್ಕಾಗಿ ಸಿದ್ಧತೆ ನಡೆದಿತ್ತು. ರಾಷ್ಟ್ರದ ಮಹಾಪುರುಷರು, ದೇವರು, ಪ್ರಾಣಿಗಳು, ತಾರೆಯರ ಹೆಸರುಗಳನ್ನು ಹೊತ್ತು ಗುರುತಿಸಿಕೊಂಡ, ಜೂಲ, ಬಲೂನು, ಒಣ ಕೊಬ್ಬರಿಯೊಂದಿಗೆ ಸಿಂಗರಿಸಿಕೊಂಡ ಹೋರಿಗಳು ಓಟದ ಪ್ರದರ್ಶನಕ್ಕೆ ಸಿದ್ಧಗೊಂಡಿದ್ದವು. ರೈತರ ಕೈಯಲ್ಲಿ ಬಣ್ಣ ಬಣ್ಣದ ಬಾರಿಕೋಲು, ಧ್ವಜಗಳಿದ್ದವು.
ಮಾಜಿ ಸಚಿವ ಸಿ.ಎಂ. ಉದಾಸಿ ಹೋರಿ ಹಬ್ಬಕ್ಕೆ ಚಾಲನೆ ನೀಡಿ, ಹಾನಗಲ್ಲ ಹೋರಿ ಹಬ್ಬ ರಾಷ್ಟ್ರದಲ್ಲೇ ಪ್ರಸಿದ್ಧವಾಗಿದೆ. ಕೃಷಿ ಸಮುದಾಯ ಸುಗ್ಗಿಯ ಈ ಕಾಲದಲ್ಲಿ ತಮ್ಮ ಸಹವರ್ತಿಗಳಾದ ಜಾನುವಾರುಗಳನ್ನು ಪ್ರೀತಿಯಿಂದ ಸಾಕಿ ಸಲುಹಿ, ಅವುಗಳನ್ನು ಮನ ತಣಿಯುವಂತೆ ಓಡಿಸಿ, ಶೌರ್ಯ ಪ್ರದರ್ಶಿಸಿ ಆನಂದಿಸುವ ಹಬ್ಬ ಇದು. ಈ ಹಬ್ಬ ಆಯೋಜನೆಯಲ್ಲಿ ನಗರದ ಕಮಾಟಗೇರಿ ಹಾಗೂ ಬೋವಿಗಲ್ಲಿಯ ಯುವಕರ ಪಾತ್ರ ದೊಡ್ಡದು. ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ದನ ಬೆದರಿಸುವ ಹಬ್ಬ ಗ್ರಾಮೀಣ ರೈತರ ಕ್ರೀಡೆಯಾಗಿದ್ದು, ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಆವೇಶಕ್ಕೆ ಒಳಗಾಗದೆ ಹಬ್ಬನ್ನು ಸಂತಸಕ್ಕಾಗಿ ಆಚರಿಸುವಂತಾಗಬೇಕು ಎಂದರು.
ದೇವೇಂದ್ರಪ್ಪ ಮೂಡ್ಲಿಯವರ, ಹನುಮಂತಪ್ಪ ಬಮ್ಮನಹಳ್ಳಿ, ಗಣೇಶ ಮೂಡ್ಲಿಯವರ, ಅಶೋಕ ಆರೇಗೊಪ್ಪ, ಮಾಲತೇಶ ಚಿಕ್ಕಣ್ಣನವರ, ನಾಗೇಂದ್ರ ಬೊಮ್ಮನಹಳ್ಳಿ, ಹನುಮಂತ ಮೂಡ್ಲಿ, ದಾನೇಶ ಸಿಂಧೂರ, ಹನುಮಂತಪ್ಪ ನಾಗಜ್ಜನವರ, ದಯಾನಂದ ನಾಗಜ್ಜನವರ, ಮಂಜಣ್ಣ ನಾಗಜ್ಜನವರ, ನಾಗೇಂದ್ರ ತುಮರಿಕೊಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

