ಹಾವೇರಿ

ಹೊಸ ವರ್ಷಕ್ಕೆ ಸ್ವಾಗತ: ಸ್ಪರ್ಧೆ

Published On :

ಹಾವೇರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಓಂ ತಂಡದ ಯುವಕರು ಪ್ರತಿ ವರ್ಷದಂತೆ ಈ ಸಲವೂ ಹೊಸ ವರ್ಷದ ಸ್ವಾಗತಕ್ಕಾಗಿ ಆಯೋಜಿಸಿದ್ದ ಮಕ್ಕಳ ಸ್ಪರ್ಧೆಯಲ್ಲಿ ಹತ್ತಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಓಂ ತಂಡದ ಗಣೇಶ ರಾಯ್ಕರ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷದ ಸ್ವಾಗತಕ್ಕಾಗಿ ಮಕ್ಕಳಿಗಾಗಿ ತಂಡ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ಮ್ಯೂಸಿಕಲ್ ಚೇರ್, ನಿಂಬೆ ಬ್ಯಾಲೆನ್ಸ್, ಬಿಸ್ಕತ್ ತಿನ್ನುವುದು ಸೇರಿದಂತೆ ವೈವಿಧ್ಯಮಯ ಆಟಗಳನ್ನು ನಡೆಸಲಾಯಿತು. ತಂಡದಿಂದ ಹಲವು ಜಾಗೃತಿ ಹಾಗೂ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮ ನಡೆಸುತ್ತ ಬರಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಬಹುಮಾನ ಪಡೆಯಲು ತೀವ್ರ ಕಸರತ್ತು ನಡೆಸಿದರು. ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಮರ್ಥ್ಯ ಪ್ರದರ್ಶಿಸಿದರು. ನಂತರ ಆಕರ್ಷಕ ಬಹುಮಾನವನ್ನು ಗಿಟ್ಟಿಸಿಕೊಂಡರು.
ನಿಂಬು ಬ್ಯಾಲೆನ್ಸ್‌ನಲ್ಲಿ ನಾಗವೇಣಿ ಪ್ರಥಮ, ಗುರುರಾಜ ಶಿಂದೆ ದ್ವಿತೀಯ, ಆದರ್ಶ ಅಣ್ಣಿಗೇರಿ ತೃತೀಯ, ಮ್ಯೂಸಿಕಲ್ ಚೇರ್ ವಿಭಾಗದಲ್ಲಿ ರೋಷನ್ ಪ್ರಥಮ, ಸ್ವಾತಿ ದ್ವಿತೀಯ, ಬಿಸ್ಕತ್ ತಿನ್ನುವ ಸ್ಪರ್ಧೆಯಲ್ಲಿ ರೇವತಿ ಅಣ್ಣಿಗೇರಿ ಪ್ರಥಮ, ಹೈದರಲಿ ದ್ವಿತೀಯ, ಚೇತನ ತೃತೀಯ ಸ್ಥಾನ ಪಡೆದರು. ಶಿವಲಿಂಗೇಶ್ವರ ಕಾಲೇಜಿನ ಪ್ರಾಚಾರ್ಯ ವಿ.ಕೆ.ಹಲಗಣ್ಣನವರ, ರಾಜಶೇಖರ ಪಾಟೀಲ, ಸಂಜೀವ ನಾಡಗೌಡ್ರ, ರಾಘವೇಂದ್ರ, ಸಹದೇವ, ಅನ್ವರಸಾಬ ಚಿಮ್ಮಿನಗಿ ಇತರರು ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸಿದರು. ಓಂ ತಂಡದ ಪ್ರಶಾಂತ ಅಸುಂಡಿ, ಶಿವರಾಜ ನವಲೆ, ಸಂತೋಷ ಪೀಸೆ, ವೀರನಗೌಡ ಪಾಟೀಲ, ಸಂಜಿವ ಬಜೇನಾಯ್ಕರ, ಮೌನೇಶ, ಅಶೋಕ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.