ಹಾವೇರಿ

ಯುವಕರು ಸದೃಢ ವಿಚಾರ ಹೊಂದಿ: ಮುರುಘಾ ಶ್ರೀ

Published On :

ಹಾವೇರಿ: ಗಟ್ಟಿ ವಿಚಾರಗಳ ಮೂಲಕ ಗಟ್ಟಿಯಾದ ವ್ಯಕ್ತಿತ್ವವನ್ನು ಪಡೆದುಕೊಳ್ಳುವತ್ತ ಯುವಜನರು ಸದಾ ಕ್ರಿಯಾಶೀಲರಾಗಿರಬೇಕೆಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ನುಡಿದರು.
ಇಲ್ಲಿನ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಲಿಂ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಅಥಣಿ ಮುರುಘೇಂದ್ರ ಶ್ರೀಗಳ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ಯುವಜನ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವಣ್ಣ, ಅಂಬೇಡ್ಕರ್, ವಿವೇಕಾನಂದರಂತೆ ಪ್ರತಿಯೊಬ್ಬರು ಗಟ್ಟಿ ವಿಚಾರಗಳನ್ನು ಹೊಂದಲು ಆರಂಭಿಸಿದರೆ ನಾವು ಅವರಂತೆ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿದೆ. ಬೇರೆ ವ್ಯಕ್ತಿಗಳಿಗೆ ಸಿಕ್ಕಿದ್ದು ನಮಗೆ ಸಿಕ್ಕಿಲ್ಲವೆಂದು ಅತೃಪ್ತಿಗೆ ಒಳಗಾಗಿ ದುರಾಲೋಚನೆಗೆ ಒಳಗಾಗದೇ ಶ್ರಮವಹಿಸಿ ಅವುಗಳನ್ನು ದೊರಕಿಸಿಕೊಳ್ಳಬೇಕು. ಮಾನವನು ಪರಿಸರದ ಪ್ರಭಾವದಿಂದಲೋ, ಅಜ್ಞಾನದಿಂದಲೋ, ಮೂರ್ಖತನದಿಂದಲೋ, ತನಗರಿವಿಲ್ಲದಂತೆ ದಿನನಿತ್ಯ ದುರಾಲೋಚನೆ ಮಾಡುತ್ತಿರುತ್ತಾನೆ. ಈ ರೀತಿಯ ಆಲೋಚನೆಗಳು ಅವನನ್ನು ಕೆಟ್ಟ ಹಾಗೂ ಖೊಟ್ಟಿಯಾದ ವ್ಯಕ್ತಿತ್ವ ಹೊಂದುವಂತೆ ಮಾಡುತ್ತಿವೆ ಎಂದು ವಿಷಾದಿಸಿದರು.
ಸಣ್ಣ ಪುಟ್ಟ ಆಸೆಗಳಿಗಾಗಿ ಯುವಜನತೆ ಸುಳ್ಳು ಹೇಳುವುದುನ್ನು ಬಿಟ್ಟು, ಗಟ್ಟಿಯಾದ ನಿಲುವು ತಳೆಯುವುದು ಅವಶ್ಯವಿದೆ. ಯಾವ ವಿದ್ಯಾರ್ಥಿಯೂ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದರು.
ಶಾಂತಲಿಂಗ ಶ್ರೀಗಳು ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಎಂ.ವಿ. ಕುಲಕರ್ಣಿ, ಕಬ್ಬಿಣಕಂತಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣಾ ಜವಳಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.