ಹಾವೇರಿ

ಶೀಘ್ರ ರಾಣಿಬೆನ್ನೂರು ಏತ ನೀರಾವರಿಗೆ ಚಾಲನೆ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಫೆ.4
ತುಂಗಾ ಮೇಲ್ದಂಡೆ ಯೋಜನೆಯ ನೀರಾವರಿ ಸೌಲಭ್ಯ ವಂಚಿತ ತಾಲೂಕಿನ 9 ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಉದ್ದೇಶದಿಂದ ರಾಣಿಬೆನ್ನೂರು ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದ್ದು, ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಸಿಎಂ ಜಗದೀಶ ಶೆಟ್ಟರ್ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ತಾಲೂಕು ರೈತ ಸಂಘದ ಸಂಚಾಲಕ ಲೋಕೇಶ ಸುತಾರ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಮಧ್ಯದಲ್ಲಿ ಹರಿದಿರುವ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಹಾಗೂ ಸಬ್ ಕಾಲುವೆಗಳ ನಿರ್ಮಾಣಕ್ಕೆ ಜಮೀನು ಕಳೆದುಕೊಂಡಿದ್ದಲ್ಲದೇ, ಯೋಜನೆಯ ನೀರಾವರಿ ಸೌಲಭ್ಯದಿಂದ ವಂಚಿತಗೊಂಡ ತಾಲೂಕಿನ 9 ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸಲು ಹಾಗೂ ರಾಣಿಬೆನ್ನೂರಿನ ದೊಡ್ಡಕೆರೆಗೆ ನೀರು ತುಂಬಿಸಲಾಗುವುದು. 4 ಕೆರೆಗಳ ವ್ಯಾಪ್ತಿಗೊಳಪಟ್ಟಿರುವ 9 ಗ್ರಾಮಗಳ ಸುಮಾರು 64,554 ಎಕರೆ ರೈತರ ಜಮೀನಿಗೆ ನೀರುಣಿಸಲು ಕ್ರಮ ಜರುಗಿಸುವ ಭರವಸೆ ದೊರೆತಿದೆ ಎಂದರು.
ಈ ಸಂರ್ದರ್ಭದಲ್ಲಿ ಸಿದ್ಧನಗೌಡ ಪಾಟೀಲ, ಬಸವರಾಜ ವಡೇರಹಳ್ಳಿ, ಮಂಜಪ್ಪ ಕಡ್ಲೇಪ್ಪನವರ, ಮಲ್ಲಿಕಾರ್ಜುನ ದುಳೆಹೂಳಿ, ಹುಚ್ಚಪ್ಪ ಹುಚ್ಚಗರ್ಕಿ, ಸಿದ್ಧಪ್ಪ ಗೌಡ್ರ, ನಾಗಪ್ಪ ಹುಚ್ಚಗರ್ಕಿ, ಶಂಭಣ್ಣ ಮಾಗೋಡ, ವೆಂಕಟೇಶ ಲಮಾಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.