ಹಾವೇರಿ

ಸವಣೂರು: ಚಕ್ಕಡಿ ಓಡಿಸುವ ಸ್ಪರ್ಧೆ ಯಶಸ್ವಿ

Published On :

ಕನ್ನಡಪ್ರಭ ವಾರ್ತೆ, ಸವಣೂರು, ಫೆ. 6
ತಾಲೂಕಿನ ಕುರಬರಮಲ್ಲೂರ ಗ್ರಾಮದ ತಿಪ್ಪಣ್ಣಾ ಅಜ್ಜಣ್ಣನವರ ಹೊಲದಲ್ಲಿ ಬಸವೇಶ್ವರ ರೈತ ಸಂಘದ ಆಶ್ರಯದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಜರುಗಿತು.
92 ಜೋಡಿ ಎತ್ತುಗಳೊಂದಿಗೆ ರೈತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಂಕಾಪುರದ ಎತ್ತುಗಳಿಗೆ ಪ್ರಥಮ, ಮಲ್ಲನಾಯಕನ ಕೊಪ್ಪದ ಎತ್ತುಗಳಿಗೆ ದ್ವಿತೀಯ ಹಾಗೂ ಮಾಸನಕಟ್ಟಿಯ ಎತ್ತುಗಳಿಗೆ ತೃತೀಯ ಸ್ಥಾನ ಲಭಿಸಿತು.
ನಿರ್ಣಾಯಕರಾಗಿ ಬಿ.ಎಂ. ಪಾಟೀಲ, ಗಂಗಪ್ಪ ದೊಡ್ಡಪೂಜಾರ, ಚಂದ್ರಶೇಖರ ಸಣ್ಣಪೂಜಾರ, ವಿಜಯಕುಮಾರ ದೇವಿಹಾಳ, ಚನ್ನಮಲ್ಲಯ್ಯಾ ಹಿರೇಮಠ, ಚಂದ್ರಶೇಖರ ಕಂಬಳಿ, ಈರಪ್ಪ ಜಲ್ಲಾಪುರ, ಶೇಖಪ್ಪ ವೀರಗೊಂಡ, ಆನಂದ ದೊಡ್ಡಮನಿ, ರಮೇಶ ಅಜ್ಜಣ್ಣನವರ ಕಾರ್ಯ ನಿರ್ವಹಿಸಿದರು.
ಗಂಗಾದರ ಅಜ್ಜಣ್ಣನವರ, ಲೋಹಿತ ಸಣ್ಣಪೂಜಾರ ನಿರ್ವಹಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.