ಕಲುಷಿತ ರಾಜಕೀಯದಿಂದ ಕೆಟ್ಟ ಸಂದೇಶ: ಶ್ರೀ
ಬ್ಯಾಡಗಿ: ಕಲುಷಿತ ರಾಜಕೀಯ ಪರಿಸ್ಥಿತಿಗಳು ಜನರಲ್ಲಿ ಮತೀಯ ಭಾವನೆಗಳನ್ನು ಬೆಳೆಸುತ್ತಿವೆ. ಇದರಿಂದ ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ನಂದಿಗುಡಿ ಬೃಹನ್ಮಠದ ನಂದೀಶ್ವರ ಶ್ರೀ ವಿಷಾದಿಸಿದರು.
ತಾಲೂಕಿನ ಅತ್ತಿಕಟ್ಟಿ ಗ್ರಾಮದ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಜೀನವದಲ್ಲಿ ತಾಂತ್ರಿಕತೆ ಹೆಚ್ಚಾದಂತೆ ಮನುಷ್ಯ ತನ್ನ ಲೌಕಿಕ ಜೀವನದಲ್ಲಿ ಒತ್ತಡದ ಬದುಕನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಇದರಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಂಡಿರುವ ಮನುಷ್ಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ ಎಂದರು. ಸನಾತನ ಸಂಸ್ಕೃತಿ, ಸಂಸ್ಕಾರಗಳನ್ನು ದೂರ ತಳ್ಳಿರುವ ಮನುಷ್ಯ ಮನಃಶಾಂತಿ ಕಳೆದುಕೊಂಡಿದ್ದು, ಮೂಲ ಸಿದ್ಧಾಂತಗಳನ್ನು ದೂರ ತಳ್ಳುತ್ತಿದ್ದಾನೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಹಬಾಳ್ವೆ ನಡೆಸುವುದು ಸರ್ವಧರ್ಮಗಳ ಮೂಲ ತಿರುಳು ಎಂದರು.
ಶೈಕ್ಷಣಿಕ ಪ್ರಗತಿ ದೇಶದ ಅಭಿವೃದ್ಧಿ ಪೂರಕವಾಗಿದ್ದರೂ ಸಹ ಮಾನವೀಯ ಮೌಲ್ಯ ಸಾಮಾಜಿಕ ನ್ಯಾಯ ಕಾಪಾಡಿಕೊಳ್ಳುವ ಇಲ್ಲದಂತಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಲೌಕಿಕ ಜೀವನ ರೂಪಿಸಿದಾಗ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯವೆಂದರು.
ಉಪನ್ಯಾಸಕ ಸುರೇಶ ಕರಡೇರ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಪಾತ್ರ ಹಾಗೂ ನಾಗರಾಜ ಬಿಲ್ಲಹಳ್ಳಿ ಧಾರ್ಮಿಕ ರಂಗದಲ್ಲಿ ಯುವಪೀಳಿಗೆಯ ಪಾತ್ರ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಎಪಿಎಂಸಿ ಸದಸ್ಯ ಜಗದೀಶ ಕಣಗಲಬಾವಿ, ಗ್ರಾಪಂ ಸದಸ್ಯ ಬಾಬುಜಾನ್ ಮಲ್ಲಾನವರ, ಸಿದ್ದಪ್ಪ ಸೊಪ್ಪೇರ, ನಟರಾಜ ಕರಿನಾಗಣ್ಣನವರ, ತಾಲೂಕು ರೈತ ಸಂಘದ ಕಾರ್ಯದರ್ಶಿ ಮಲ್ಲೇಶಪ್ಪ ಚಿಕ್ಕಳ್ಳಿ, ಮನೋಹರ ಕಾಳಪ್ಪನವರ, ಬಾನಪ್ಪ ಕಚವಿ, ನಾಗಪ್ಪ ಬೆಣಗೇರಿ, ಚಂದ್ರಪ್ಪ ಕುಲುಮಿ, ಸಂಜೀವ ಕುಲುಮಿ, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

