ಇಂದಿನಿಂದ ಜಾತ್ರೋತ್ಸವ
ಶಿಗ್ಗಾಂವಿ: ಪಟ್ಟಣದ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಮತ್ತು ಕಳಸಾರೋಹಣ, ಸಮುದಾಯ ಭವನ ಉದ್ಘಾಟನೆ ಹಾಗೂ ಗುರುಸಿದ್ದರಾಮೇಶ್ವರವರ 840ನೇ ಜಯಂತ್ಯೋತ್ಸವ, ಶಿಗ್ಗಾಂವಿ-ಸವಣೂರು ತಾಲೂಕು ಭೋವಿ (ವಡ್ಡರ) ಸಮಾಜದ ಬೃಹತ್ ಸಮಾವೇಶ ಫೆ. 11 ಮತ್ತು 12ರಂದು ಪಟ್ಟಣದ ಜಯನಗರದ ವಡ್ಡರ ಓಣಿಯಲ್ಲಿ ನಡೆಯಲಿದೆ. ಫೆ. 11ರಂದು ಬೆಳಗ್ಗೆ 7ಕ್ಕೆ ಗಣಪತಿ ಪೂಜಾ, ಹೋಮ, ಪೂರ್ವಾಂಗಹವನ, ಬಲಿದಾನ ಪೂರ್ಣಾಹುತಿ, ಮಂಗಳಾರತಿ ಜರುಗುವುದು. ಫೆ. 12ರಂದು ಬೆಳಗ್ಗೆ 11ಕ್ಕೆ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ, 11.30ಕ್ಕೆ ಅಖಿಲ ಕರ್ನಾಟಕ ಭೋವಿ(ವಡ್ಡರ) ಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹಾಗೂ ಕಾಗಿನೆಲೆಯ ನಿರಂಜನಾನಂದ ಪುರಿ ಶ್ರೀಗಳು, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಶ್ರೀಗಳು ಸಾನ್ನಿದ್ಯ ವಹಿಸುವರು. ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸುವರು. ಸಚಿವ ಬಸವರಾಜ ಬೊಮ್ಮಾಯಿ ದುರ್ಗಾದೇವಿ ಸಮುದಾಯ ಭವನ ಉದ್ಘಾಟಿಸುವರು. ಮಾಜಿ ಸಂಸದ ಮಂಜುನಾಥ ಕುನ್ನೂರ ದೇವಸ್ಥಾನ ಉದ್ಘಾಟಿಸುವರು. ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಅರ್ಜುನ ಹಂಚಿನಮನಿ ಅಧ್ಯಕ್ಷತೆ ವಹಿಸುವರು. ಸಿ.ಎಂ. ಉದಾಸಿ, ಸುನೀಲ ವಲ್ಯಾಪುರೆ, ಪ್ರಲ್ಹಾದ ಜೋಶಿ, ಜನಾರ್ದನ ಸ್ವಾಮಿ, ಮತ್ತಿತರರು ಆಗಮಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

