ಇಂದು 38ನೇ ಪುಣ್ಯತಿಥಿ
ಹಾವೇರಿ: ತಾಲೂಕಿನ ದೇವಗಿರಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾ ಸಂಸ್ಥಾಪಕ ಆರ್.ಎಫ್. ಪಾಟೀಲರ 38ನೇ ಪುಣ್ಯತಿಥಿಯನ್ನು ಫೆ. 11ರಂದು ಶಾಲಾ ಆವರಣದಲ್ಲಿ ಆಚರಿಸಲಾಗುವುದು ಎಂದು ಮುಖ್ಯಾಧ್ಯಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಗ್ಗಾಂವಿ: ಇಂದು ನೇತ್ರ ತಪಾಸಣೆ ಶಿಬಿರ
ಶಿಗ್ಗಾಂವಿ: ಇಲ್ಲಿನ ಚನ್ನಪ್ಪ ಕುನ್ನೂರು ಸಮೂಹ ಶಿಕ್ಷಣ ಸಂಸ್ಥೆ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಹಾವೇರಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಆಶ್ರಯದಲ್ಲಿ ಫೆ. 11ರಂದು ಚನ್ನಪ್ಪ ಕುನ್ನೂರು ಶಿಕ್ಷಣ ಸಂಸ್ಥೆಯ ನೂತನ ಶಾಲಾ ಆವರಣದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ನೇತ್ರ ತಜ್ಞ ಡಾ. ಎಂ.ಎಂ.ಜೋಶಿ ಶಿಬಿರವನ್ನು ಉದ್ಘಾಟಿಸುವರು. ಮಾಜಿ ಸಂಸದ ಮಂಜುನಾಥ ಕುನ್ನೂರ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ರಾಜಾ ದೇಸಾಯಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಎನ್.ಎಂ. ಅಂಗಡಿ, ಡಿಎಚ್‌ಓ ಡಾ. ರಾಘವೇಂದ್ರಸ್ವಾಮಿ, ಡಾ. ಸುನೀಲ, ಡಾ. ಎಂ.ಎಲ್.ಪಾಟೀಲ, ಡಾ. ಹನುಮಂತಪ್ಪ ಪಾಲ್ಗೊಳ್ಳುವರು.
ನಾಳೆಯಿಂದ ಕಾನೂನು ಸಾಕ್ಷರತಾ ರಥಯಾತ್ರೆ
ಸವಣೂರು: ಕಾನೂನು ಸಾಕ್ಷರತಾ ರಥ ಯಾತ್ರೆ ನಿಮಿತ್ತ ಕಾನೂನು ಅರಿವು-ನೆರವು, ಲೋಕ ಅದಾಲತ್ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಫೆ. 12, 13ರಂದು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜಿಪಂ, ವಿವಿಧ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಫೆ. 12ರಂದು ರಥಯಾತ್ರೆಗೆ ನ್ಯಾ. ಎಸ್.ಎಲ್. ಚವ್ಹಾಣ ಚಾಲನೆ ನೀಡಲಿದ್ದಾರೆ. ಎಂ.ಎಂ. ಪಾಟೀಲ,ಡಾ. ನಾಗೇಂದ್ರ ಹೊನ್ನಳ್ಳಿ, ಎಸ್.ಆರ್. ಪಾಟೀಲ, ಎಚ್.ಎಸ್. ಹೊಸಮನಿ, ಭಾರತಿ ಬಣಕಾರ ಭಾಗವಹಿಸಲಿದ್ದಾರೆ. ಫೆ. 12ರಂದು ನಂದಿಹಳ್ಳಿ, ಸಂಜೆ ತಳ್ಳಿಹಳ್ಳಿಯದಲ್ಲಿ, ಫೆ. 13ರಂದು ಹೊನ್ನಿಕೊಪ್ಪ, ನಾಯಿಕೇರೂರ, ವಡ್ನಿಕೊಪ್ಪದಲ್ಲಿ ಕಾನೂನು ಜಾಗೃತಿ ಕೈಗೊಳ್ಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

