ಹಾವೇರಿ

ಕಕ್ಷಿದಾರರಿಗೆ ಸೂಕ್ತ ನ್ಯಾಯ ಕೊಡಿಸಿ

Published On :

ರಾಣಿಬೆನ್ನೂರು: ಕಠಿಣ ಪರಿಶ್ರಮ, ಸತತ ಅಧ್ಯಯನ ನಡೆಸುವ ಮೂಲಕ ಕಕ್ಷಿದಾರರ ಮನಸ್ಸಿಗೆ ನೋವುನ್ನುಂಟಾಗದಂತೆ ವರ್ತಿಸಿ ನ್ಯಾಯ ಕೊಡಿಸುವಲ್ಲಿ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳುವಂತೆ ಯುವ ನ್ಯಾಯವಾದಿಗಳಿಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾದೀಶ ಎಚ್.ಎಲ್. ದತ್ತು ಸಲಹೆ ಮಾಡಿದರು.
ರಾಜ್ಯ ವಕೀಲರ ಪರಿಷತ್, ತಾಲೂಕು ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ನ್ಯಾಯವಾದಿಗಳ ವಿಭಾಗಿಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕಠಿಣ ಪರಿಶ್ರಮದೊಂದಿಗೆ ಅಧ್ಯಯನ ನಡೆಸಿ ನ್ಯಾಯ ಕೊಡಿಸಿ. ನ್ಯಾಯವಾದಿಗಳನ್ನು ಕಕ್ಷಿದಾರರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಕಾರಣ ಎಲ್ಲರೂ ಪ್ರೀತಿಸುವ ನಡತೆ ನಿಮ್ಮದಾಗಲಿ ಎಂದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೆ. ಶ್ರೀಧರರಾವ್ ಮಾತನಾಡಿ, ಹಲವಾರು ರೀತಿಯಿಂದ ಮೋಸಕ್ಕೊಳಗಾಗಿ ಹಾಗೂ ಅಪರಾಧವೆಸಗಿ ನ್ಯಾಯಕೊಡಿಸುವಂತೆ ತಮ್ಮಲ್ಲಿಗೆ ಬರುವ ಕಕ್ಷಿದಾರರಿಗೆ, ನ್ಯಾಯ ಒದಗಿಸುವ ಗುರುತರ ಜವಾಬ್ದಾರಿ ನ್ಯಾಯವಾದಿಗಳ ಮೇಲಿದೆ. ಇದು ವೃತ್ತಿ ಗೌರವ ಹಾಗೂ ನ್ಯಾಯಾಲಯದ ಹೆಸರಿಗೆ ಧಕ್ಕೆ ಬಾರದ ರೀತಿ ಕರ್ತವ್ಯ ನಿರ್ವಹಿಸಲು ಮುಂದಾಗುವಂತೆ ತಿಳಿಸಿದರು. ಉಚ್ಚ ನ್ಯಾಯಾಲಯದ ಇನ್ನೋರ್ವ ನ್ಯಾಯಾಧೀಶ ಮೋಹನ ಶಾಂತನಗೌಡ್ರ ಮಾತನಾಡಿ, ದೇವ ಸ್ವರೂಪಿ ತಂದೆ-ತಾಯಿಗಳನ್ನು ಮನೆಯಿಂದ ಹೊರತಳ್ಳಿ ಕಲ್ಲು-ಮಣ್ಣಿನಿಂದ ನಿರ್ಮಿಸಿರುವ ದೇವಸ್ಧಾನಗಳ ದೇವರ ಮುಂದೆ ಕಷ್ಟ ಪರಿಹಾರಕ್ಕಾಗಿ ಬೇಡಿಕೊಳ್ಳುವುದಕ್ಕಿಂತ ಜನ್ಮ ನೀಡಿದವರನ್ನು ಗೌರವದಿಂದ ಕಾಣಿ. ಹುಟ್ಟು-ಸಾವಿನ ಮಧ್ಯದಲ್ಲಿ ಸತ್ಯಾಸತ್ಯತೆಗಳನ್ನು ಅರ್ಥೈಸಿಕೊಂಡು, ಸತ್ಯವಂತರಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿ. ಕರ್ತವ್ಯವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ನಿರ್ರ್ವಹಿಸಿ ಎಂದರು.
ರಾಜ್ಯ ಕಾನೂನು ಹಾಗೂ ಸಂಸದಿಯ ವ್ಯವಹಾರಗಳ ಸಚಿವ ಸುರೇಶಕುಮಾರ ಮಾತನಾಡಿದರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯಾಲಯದ ನ್ಯಾ. ಜಾವೇದ ರಹೀಮ, ಸಂಸದ ಶಿವಕುಮಾರ ಉದಾಸಿ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಮಲ್ಲೇಶಯ್ಯ, ಹರೀಶ, ಜಯಕುಮಾರ ಪಾಟೀಲ, ಶಿವರಾಮ ಉಪಸ್ಥಿತರಿದ್ದರು.
50 ವರ್ಷದಿಂದ ನ್ಯಾಯವಾದಿಗಳಾಗಿ ಕರ್ರ್ತವ್ಯ ನಿರ್ವಹಿಸುತ್ತರುವ ಸಿ.ಎಂ. ಕುಲಕರ್ಣಿ, ಎನ್.ಬಿ. ಬಣಕಾರ, ಎಸ್.ಎಲ್. ಪಾಟೀಲ, ಎಂ. ಚನ್ನಬಸಪ್ಪ, ಎಂ.ಎಂ. ಕರೂರು, ಕೆ.ಎಂ. ಬಂದಮ್ಮನವರ, ಪಿ.ವಿ. ಕೆರೂಡಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ನ್ಯಾಯವಾದಿಗಳು ನ್ಯಾಯಮೂರ್ತಿಗಳನ್ನು ಕುಂಭಮೇಳದೊಂದಿಗೆ ವೇದಿಕೆಗೆ ಕರೆ ತಂದರು. ಕೆ. ಶಿವಲಿಂಗಪ್ಪ ಸ್ವಾಗತಿಸಿದರು. ನಾಡಿಗೇರ ನಿರ್ವಹಿಸಿದರು. ಬಣಕಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.