ಹಾವೇರಿ

ಹಾವೇರಿ: ಕೋಳಿ ವಿತರಣಾ ಕಾರ್ಯಕ್ರಮ

Published On :

ಹಾವೇರಿ: ಪಶು ಸಂಗೋಪನಾ ಇಲಾಖೆಯಡಿ ಹಾವೇರಿ ತಾಲೂಕಿನ 16 ಗ್ರಾಪಂ ವ್ಯಾಪ್ತಿಯ ಎಸ್ಸಿ, ಎಸ್ಟಿ ಮಹಿಳೆಯರಿಗೆ ಗಿರಿರಾಜ ಕೋಳಿಗಳ ವಿತರಣಾ ಕಾರ್ಯಕ್ರಮ ಪಶು ಚಿಕಿತ್ಸಾಲಯದಲ್ಲಿ ಜರುಗಿತು. ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಿ ತಾಪಂ ಉಪಾಧ್ಯಕ್ಷ ಬಸಪ್ಪ ಕಳಸೂರು ಮಾತನಾಡಿ, ಪಶುಸಂಗೋಪನಾ ಇಲಾಖೆ ಪ್ರತಿ ಫಲಾನುಭವಿಗೆ ನೀಡುವ ಐದು ಗಿರಿರಾಜ ಕೋಳಿಗಳು ಆರಂಭಕ್ಕೆ ಸಣ್ಣ ಉದ್ಯೋಗವೆನಿಸಿದರೂ ಅವು ಮೊಟ್ಟೆಯಿಟ್ಟು ಮರಿ ಮಾಡಿದಲ್ಲಿ ಕೋಳಿ ಸಂತತಿ ಅಭಿವೃದ್ಧಿಯಾಗಿ ಕೋಳಿ ಸಾಕಾಣಿಕೆಯನ್ನೇ ಪ್ರಮುಖ ಉದ್ಯೋಗವನ್ನಾಗಿಸಿಕೊಳ್ಳಲು ಸಾಧ್ಯವಿದೆ ಎಂದರು. ಪಶುಸಂಗೋಪನಾ ಇಲಾಖೆಯ ವಿಸ್ತರಣಾಧಿಕಾರಿ ಡಾ. ಕಿರಣ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಗಳೂರು, ಗಣೇಶ ಮೇಲ್ಮರಿ, ಕರಿಯಪ್ಪನವರ, ಪಶುವೈದ್ಯಾಧಿಕಾರಿ ಡಾ. ಅಮೃತರಾಜ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.