19ರಂದು ರಫ್ತು ಜಾಗೃತಿ ಕಾರ್ಯಕ್ರಮ
ಹಾವೇರಿ: ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಸವಣೂರಿನ ವರ್ತಕರ ಸಂಘ ಹಾಗೂ ಎಪಿಎಂಸಿ, ಬೆಂಗಳೂರಿನ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಒಂದು ದಿನದ ರಫ್ತು ಜಾಗೃತಿ ಕಾರ್ಯಕ್ರಮ ಫೆ. 19ರಂದು ಬೆಳಗ್ಗೆ 10.30ಕ್ಕೆ ಸವಣೂರಿನ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಜರುಗಲಿದೆ. ಹಾಲಿ ರಫುದಾರ ಸಂಸ್ಥೆಗಳ ಮಾಲೀಕರು, ಪಾಲುದಾರರು, ನೌಕರರು ಹಾಗೂ ಹೊಸದಾಗಿ ರಫ್ತು ವ್ಯವಹಾರ ಪ್ರಾರಂಭಿಸುವವರು ಪಾಲ್ಗೊಳ್ಳಬಹುದು. ತರಬೇತಿಯಲ್ಲಿ ರಫ್ತು ವ್ಯವಹಾರ ಏಕೆ, ಹೇಗೆ, ಎಲ್ಲಿಗೆ ಹಾಗೂ ಯಾವ ಯಾವ ಸಾಮಗ್ರಿ ರಫ್ತು ಮಾಡಬಹುದು. ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ನಡೆಸಲಾಗುವುದೆಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ವಿ.ಎಂ. ಸೂರಣಗಿ ತಿಳಿಸಿದ್ದಾರೆ. ಆಸಕ್ತರು ಫೆ. 18ರೊಳಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾವೇರಿ ದೂರವಾಣಿ- 08375 -249116, 249028 ಇಲ್ಲಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರದ ಧಾರವಾಡ ಕಚೇರಿ ದೂರವಾಣಿ-0836-2222600 ಅಥವಾ ವಿಐಟಿಸಿ-ಸಿಟಿಐಸಿ ಯೋಜನಾ ನಿರ್ವಾಹಕ ಮುರಳಿ ದೀಕ್ಷಿತ ಮೊ- 80479 33953 ಇಲ್ಲಿ ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

