ಇಂದಿನಿಂದ ಪೀಠಾರೋಹಣ ಕಾರ್ಯಕ್ರಮ
ರಾಣಿಬೆನ್ನೂರು: ರಾಜ್ಯ ವೀರಶೈವ ಪಂಚಮಸಾಲಿ ಸಂಘ, ಪಂಚಮಸಾಲಿ ಪೀಠಗಳ ಸಂಯುಕ್ತಾಶ್ರಯದಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಫೆ.14ರಿಂದ 18ರ ವರೆಗೆ 5ನೇ ವರ್ಷದ ಪೀಠಾರೋಹಣ ನಡೆಯಲಿದೆ.
ಸಮಾರಂಭದಲ್ಲಿ 5 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಂಗಡಿ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ, ವಿದ್ಯಾವಂತ ಯುವ ಜನತೆಗೆ ಸ್ವಯಂ ಉದ್ಯೋಗ ಕುರಿತಂತೆ ಮಾಹಿತಿ ನೀಡಿದ ಪರಿಣಾಮ ಒಂದು ವರ್ಷದಿಂದೀಚೆಗೆ ರಾಜ್ಯದ ಸುಮಾರು 3 ಸಾವಿರ ಪಂಚಮಸಾಲಿ ಯುವಕರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಜಗದ್ಗುರುಗಳ 5ನೇ ಪೀಠಾರೋಹಣ ಮಹೋತ್ಸವ ನಡೆಸಲು ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಗೋಷ್ಠಿಗಳು, ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಆಗಮಿಸುವ ಎಲ್ಲ 5 ಲಕ್ಷ ಸಮಾಜ ಬಾಂಧವರಿಗೆ ಊಟ, ವಸತಿಗಾಗಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪೂರ್ಣಿಮಾ ಬೆನ್ನೂರು ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮಹಿಳೆಯರು ಪ್ರಬಲರಾಗಲು ಉತ್ತೇಜಿಸಲು ಮಹಿಳಾಗೋಷ್ಠಿಗಳನ್ನು ನಡೆಸಲಾಗುವುದು. ಸಮಾವೇಶದ ನಿಮಿತ್ತ ಕುಂಭಮೇಳ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪುರುಷರಿಗಾಗಿ ರೊಟ್ಟಿತಿನ್ನುವ ಸ್ಪರ್ಧೆ ಏರ್ಪಡಿಸಿದ್ದು, 30 ನಿಮಿಷಗಳಲ್ಲಿ 50 ರೊಟ್ಟಿ ತಿಂದವರಿಗೆ ಪ್ರಥಮ ರು. 15 ಸಾವಿರ ನಗದು, ದ್ವಿತೀಯ ರು. 10 ಸಾವಿರ ನಗದು ಹಾಗೂ ತೃತೀಯ 5 ಸಾವಿರ ನಗದು ಹಣ ನೀಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಶಿವಪ್ಪ ಗುರಿಕಾರ, ಶೇಖಣ್ಣ ಬಳ್ಳಾರಿ, ಚಂದ್ರಣ್ಣ ತಿಳುವಳ್ಳಿ, ಶಿವಪ್ಪ ಕುರುವತ್ತಿ, ಕುಮಾರ ಎಳೆಹೋಳಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಮಳವಳ್ಳಿ, ಕಾರ್ಯದರ್ಶಿ ವಸಂತವ್ವ ಹುಲ್ಲತ್ತಿ, ರಾಜು ಶಿವಲಿಂಗಪ್ಪನವರ, ಸಿದ್ದು ಚಿಕ್ಕಬಿದರಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

