ಚೌಡಯ್ಯ ರಥಯಾತ್ರೆ ಇಂದು ಹಾನಗಲ್ಲಿಗೆ
ಹಾನಗಲ್ಲ: ನಿಜಶರಣ ಅಂಬಿಗರ ಚೌಡಯ್ಯನವರ ರಥಯಾತ್ರೆ ಜಿಲ್ಲೆಯಾದ್ಯಂತ ಸಮಾಜ ಬಾಂಧವರಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಯಶಸ್ಸು ಕಂಡಿದೆ. ಫೆ. 14ರಂದು ರಥಯಾತ್ರೆ ಹಾನಗಲ್ಲ ನಗರ ಪ್ರವೇಶಿಸಲಿದೆ ಎಂದು ಗಂಗಾಮತ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸಣ್ಣ ಮೂಡಿ ತಿಳಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಫೆ. 14ರಂದು ಬೆಳಗ್ಗೆ 9 ಘಂಟೆಗೆ ಆಗಮಿಸಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ರಥಯಾತ್ರೆಯನ್ನು ಕುಮಾರೇಶ್ವರ ವೃತ್ತದಲ್ಲಿ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುವುದು. ವಾದ್ಯ ವೈಭವ, ಕಲಾತಂಡಗಳೊಂದಿಗೆ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ರಥಯಾತ್ರೆ ಸಂಪನ್ನಗೊಳ್ಳಲಿದೆ. ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ, ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಾಳೆ ವಾರ್ಷಿಕ ಸ್ನೇಹ ಸಮ್ಮೇಳನ
ರಾಣಿಬೆನ್ನೂರು: ತಾಲೂಕಿನ ಹೊನ್ನತ್ತಿಯ ಹೊನ್ನಮ್ಮದೇವಿ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 27ನೇ ವಾರ್ಷಿಕ ಸ್ನೇಹ ಸಮ್ಮೇಳನ ಫೆ.15ರಂದು ನಡೆಯಲಿದೆ. ಮಾಜಿ ಶಾಸಕ ನಾಗಪ್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು. ಆರ್. ಶಂಕರ, ಎಂ.ಪಿ. ಮುದ್ದಿ, ಬಿ.ಎಂ.ಬೇವಿನಮರದ, ಇತರರು ಆಗಮಿಸುವರು.
ಕಾಂಕ್ರಿಟ್ ರಸ್ತೆ, ಸೇತುವೆಗೆ ರು. 6.30 ಕೋಟಿ ಬಿಡುಗಡೆ
ಹಾನಗಲ್ಲ: ಬೃಹತ್ ನೀರಾವರಿ ಇಲಾಖೆ ಧರ್ಮಾ ಕಾಲುವೆ ನವೀಕರಣ ಯೋಜನೆಯಡಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕಾಗಿ ರು. 6.30 ಕೋಟಿ ಬಿಡುಗಡೆಯಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಸುರಳೇಶ್ವರ, ಅಕ್ಕಿವಳ್ಳಿ, ಹೋತನಹಳ್ಳಿ ಗ್ರಾಮಗಳ 1 ಕಿ.ಮೀ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ರು. 80 ಲಕ್ಷ ಬಿಡುಗಡೆಯಾಗಿದೆ. ಶೃಂಗೇರಿ ಗ್ರಾಮದ ಧರ್ಮಾ ಕಾಲುವೆ ಪಿಕಪ್ ಬಳಿ ಸೇತುವೆ ನಿರ್ಮಾಣಕ್ಕಾಗಿ ರು. 1.35 ಕೋಟಿ, ಶೃಂಗೇರಿ ಸುರಳೇಶ್ವರ ರಸ್ತೆಯಲ್ಲಿ ಡೊಳ್ಳೇಶ್ವರದಿಂದ 4.5 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ರು. 2.50 ಕೋಟಿ, ಮಂತಗಿ-ಶೃಂಗೇರಿ ನಡುವೆ 2ಕಿ.ಮೀ ರಸ್ತೆ ನಿರ್ಮಿಸಲು ರು. 1.65 ಕೋಟಿ ನಬಾರ್ಡ್ನಿಂದ ಬಿಡುಗಡೆಯಾಗಿವೆ ಎಂದು ಉದಾಸಿ ವಿವರಿಸಿದರು. ತಾಲೂಕಿನ ಮೂರು ಗ್ರಾಮಗಳ ಪ. ಪಂಗಡಗಳ ಕಾಲೋನಿಯಲ್ಲಿ ತಲಾ ರು. 10 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಒಟ್ಟು ರು. 30 ಲಕ್ಷ ಬಿಡುಗಡೆಯಾಗಿದೆ. ಹೋತನಹಳ್ಳಿ, ಮಲಗುಂದ, ಶಂಕ್ರಿಕೊಪ್ಪ ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಗೊಳ್ಳಲಿವೆ. ಅಲ್ಲದೆ ತಾಲೂಕಿನ 6 ಗ್ರಾಮಗಳ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ತಲಾ ರು. 10 ಲಕ್ಷ ವೆಚ್ಚದಲ್ಲಿ ಜಗಜೀವನರಾಂ ಭವನ ನಿರ್ಮಿಸಲು ಒಟ್ಟು ರು. 60 ಲಕ್ಷ ಬಿಡುಗಡೆಯಾಗಿದೆ. ಸುರಳೇಶ್ವರ, ಯತ್ತಿನಹಳ್ಳಿ, ಬಿದರಕೊಪ್ಪ, ಕೆಲವರಕೊಪ್ಪ, ದೇವರಹೊಸಪೇಟೆ, ಹಳೇಶೀಗಿಹಳ್ಳಿ ಗ್ರಾಮಗಳಲ್ಲಿ ಜಗಜೀವನರಾಮ ಭವನ ನಿರ್ಮಾಣಗೊಳ್ಳಲಿವೆ ಎಂದು ಉದಾಸಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

