ನಾಟಕ ಕಲೆಗೆ ನೂತನ ಸ್ಪರ್ಶ ಬೇಕಿದೆ
ಶಿಗ್ಗಾಂವಿ: ಇಂದು ಅನೇಕ ಸಂಪರ್ಕ ಸಾಧನಗಳು ಲಭ್ಯವಾಗುತ್ತಿರುವುದರಿಂದ ಹಳ್ಳಿ ಮತ್ತು ನಗರಗಳ ಮಧ್ಯೆ ಅಂತರ ಕಡಿಮೆಯಾಗುತ್ತಾ ಬಂದಿದೆ. ಹೀಗಾಗಿ ಹವ್ಯಾಸಿ ಗ್ರಾಮೀಣ ಕಲಾವಿದರು ತಮ್ಮ ನಾಟಕ ಕಲೆಗೆ ಹೊಸ ಸ್ಪರ್ಶ ನೀಡುವುದರ ಮೂಲಕ ರಂಗಭೂಮಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಬಂಡಾಯ ಸಾಹಿತಿ, ರಂಗಭೂಮಿ ತಜ್ಞ ಸತೀಶ ಕುಲಕರ್ಣಿ ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿಯ ಉತ್ಸವ ರಾಕ್‌ಗಾರ್ಡನ್ ಕಲಾ ಗ್ಯಾಲರಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಗುಡಗೇರಿ ಎನ್. ಬಸವರಾಜರ ದ್ವಿತೀಯ ಸ್ಮರಣೋತ್ಸವದಲ್ಲಿ ಪಾಲ್ಗೊಂಡು ರಂಗಭೂಮಿ ಚಿಂತನ-ಮಂಥನದಲ್ಲಿ ಗ್ರಾಮೀಣ ಹವ್ಯಾಸಿ ರಂಗಭೂಮಿಯಲ್ಲಿ ಅಂದು-ಇಂದು ವಿಷಯ ಕುರಿತು ಮಾತನಾಡಿದರು.
ನಮ್ಮತನವನ್ನ ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಕಲಾಪ್ರದರ್ಶನದಲ್ಲೂ ಪೈಪೋಟಿ ನೀಡುವಷ್ಟರ ಮಟ್ಟಕ್ಕೆ ಉತ್ಸಾಹಿ ತಂಡ ಕಟ್ಟುವ ಅಗತ್ಯ ಇದೆ. ಗ್ರಾಮೀಣ ಹವ್ಯಾಸಿ ರಂಗಭೂಮಿ ಕಲಾವಿದರ ರಕ್ಷಣೆ ಮತ್ತು ಪ್ರೋತ್ಸಾಹ ಇಂದಿನ ಅಗತ್ಯವಾಗಿದೆ.
ನಾಟಕ ಅಕಾಡೆಮಿ ಸದಸ್ಯೆ ರಂಗಭೂಮಿ ಕಲಾವಿದೆ ಸುಮತಿಶ್ರೀ ನವಲಿಹಿರೇಮಠ ಮಾತನಾಡಿ, ಹಣದಾಸೆಗೆ ಒಳಗಾಗದೇ ರಂಗಭೂಮಿಯಲ್ಲಿ ಪ್ರಾಮಾಣಿಕ ಕಲಾ ಪ್ರದರ್ಶನವೊಂದೇ ನಮ್ಮ ಕಾಯಕ ಎಂದು ಭಾವಿಸಿ ಬದುಕಿದ ಅನೇಕ ಹಿರಿಯ ಕಲಾವಿದರು ಬದುಕಿನ ಕೊನೆ ಕ್ಷಣಗಳನ್ನ್ನು ಕಣ್ಣೀರಿನಲ್ಲಿ ಕಳೆಯುತ್ತಿದ್ದಾರೆ. ಅಂತಹವರನ್ನು ಸರ್ಕಾರ ಕೈಹಿಡಿದು ನಡೆಸಬೇಕಿದೆ.
ಕಲಾವಿದರಿಗಾಗಿ ಇರುವ ಅನೇಕ ಸರ್ಕಾರಿ ಯೋಜನೆಗಳು ದುರ್ಬಳಕೆಯಾಗುತ್ತಿವೆ. ಮಾಸಾಶನ ಪಡೆಯುತ್ತಿರುವ ಪಟ್ಟಿಯಲ್ಲಿ ಮುಖಕ್ಕೆ ಬಣ್ಣ ಹಚ್ಚದ ಖೊಟ್ಟಿ ಅನರ್ಹ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ ಎಂದು ವಿಷಾದಿಸಿದರು. ಉದ್ಯಮಿ ಪ್ರಕಾಶ ದಾಸನೂರ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಸದಸ್ಯರಾದ ಮಲ್ಲನಗೌಡ ಪಾಟೀಲ, ವಿಠ್ಠಲ ಕೊಪ್ಪದ, ಪರಿಮಳಾ ಕಲಾವಂತ, ಅಂಕಣಕಾರ ಆರೂರು ಲಕ್ಷ್ಮಣ ಶೇಠ, ಹರ್ಷ ಸೊಲಬಕ್ಕನವರ, ವೇದಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭುವನೇಶ್ವರಿ ಪಾಟೀಲ ನಿರ್ವಹಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

