ಪ್ರವರ್ಗ 2(ಎ) ಪ್ರಮಾಣ ಪತ್ರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ.14
ತಾಲೂಕಿನ ಲಿಂಗಾಯತ ಸಾದರು ಜನಾಂಗದವರ ಶಾಲಾ ದಾಖಲಾತಿಯಲ್ಲಿ ಹಿಂದು ಲಿಂಗವಂತರು ಅಂತಾ ನಮೂದಾಗಿದ್ದು, ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಆದೇಶದಂತೆ ಪ್ರವರ್ಗ 2(ಎ) ಪ್ರಮಾಣ ಪತ್ರವನ್ನು ನೀಡುವಂತೆ ಆಗ್ರಹಿಸಿ ತಾಲೂಕು ದಂಡಾಧಿಕಾರಿ ಎ.ಎ. ಕುಲಕರ್ಣಿ ಮೂಲಕ ಮುಖ್ಯಮಂತ್ರಿಗೆ ತಾಲೂಕಿನ ಲಿಂಗಾಯತ ಸಾದರು ಸಮಾಜ ಬಾಂಧವರು ಮನವಿ ಸಲ್ಲಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಆದೇಶದಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಜಾತಿಯವರಿಗೆ ಶೇ. 15ರ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಹೊಸದಾಗಿ ಹೊರಡಿಸಲಾದ ಸರ್ಕಾರದ ಆದೇಶದಲ್ಲಿ ಪ್ರವರ್ಗ 3(ಬಿ) ಕ್ರಮ ಸಂಖ್ಯೆ 1(ಬಿ) ಅಡಿಯಲ್ಲಿ ಸಾದರ ಲಿಂಗಾಯತರ ಉಪ ಜಾತಿಗಳನ್ನು ಸೇರ್ಪಡೆ ಮಾಡಿ ಎಂದು ಆದೇಶ ಮಾಡಿದ್ದರೂ ಸಹ ಲಿಂಗಾಯತ ಸಾದರು ಸಮಾಜ ಬಾಂಧವರು ಸಾಮಾಜಿಕ, ಶೈಕ್ಷಣಿಕ ಉದ್ಯೋಗಗಳಲ್ಲಿ ಮೀಸಲಾತಿಯಿಂದ ಅವಕಾಶ ವಂಚಿತರಾಗಿ ಸಾದರು ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಈಗಾಗಲೇ ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ, ಸದರಿ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಮಾತ್ರವೇ ಆದೇಶ ಪಾಲಿಸುತ್ತಿಲ್ಲ. 7 ದಿನದಲ್ಲಿ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಸಮಾಜ ಮುಖಂಡರಾದ ಶಂಕ್ರಪ್ಪ ಬೆಟದೂರ, ವೀರಣ್ಣ ಮಲ್ಲೂರ, ಚನ್ನಪ್ಪ ಚಿನ್ನಪ್ಪನವರ, ಅಶೋಕ ಕಬನೂರು, ಸಂತೋಷ ಪಾಟೀಲ, ಪ್ರಕಾಶ ಹುರಳಿ, ಸಿದ್ದು ಮೆಳ್ಳಳ್ಳಿ, ಎನ್.ಎಸ್. ಇಂಗಳಗಿ, ಎಸ್.ಎಂ. ಮರಿದ್ಯಾಮಣ್ಣವರ, ಶಿವಪ್ಪ ಮಂತ್ರೋಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

