ಮಕ್ಕಳ ಉನ್ನತಿಗೆ ಶ್ರಮಿಸಿ: ಬೊಮ್ಮಾಯಿ
ಶಿಗ್ಗಾಂವಿ: ಒಂದು ಕಾಲದಲ್ಲಿ ಬಂಡವಾಳಶಾಹಿಗಳು ಜಗತ್ತನ್ನು ಆಳುತ್ತಿದ್ದರು. ಸದ್ಯ ಜಗತ್ತನ್ನು ಆಳುವ ಶಕ್ತಿಗಳು ಜ್ಞಾನಕ್ಕೆ ತಲೆಬಾಗುತ್ತಿವೆ. ಕಲ್ಲು ಒಡೆಯುವ ಪರಂಪರೆಯನ್ನು ಬಿಟ್ಟು ಬೇರೆ ರಂಗಗಳಲ್ಲಿ ಮುನ್ನುಗ್ಗುವಂತೆ, ಮಕ್ಕಳನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತರುವ ಕೆಲಸ ಮಾಡುವಂತೆ ಸಚಿವ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಮಂಗಳವಾರ ಪಟ್ಟಣದ ದುರ್ಗಾದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ, ಸಮುದಾಯ ಭವನ, ಗುರು ಸಿದ್ಧರಾಮೇಶ್ವರರ 840ನೇ ಜಯಂತಿ ಹಾಗೂ ಶಿಗ್ಗಾಂವಿ-ಸವಣೂರು ತಾಲೂಕ ಬೋವಿ (ವಡ್ಡರ) ಸಮಾಜದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಬಜೆಟ್ನಲ್ಲಿ 100 ಕೌಶಲ್ಯ ತರಬೇತಿ ತಾಂತ್ರಿಕ ಕಾಲೇಜುಗಳಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಪ್ರತಿ ಕಾಲೇಜಿಗೆ ರು. 6 ಕೋಟಿ ಹಣ ಮೀಸಲಿಟ್ಟು, ಶೀಘ್ರ ಕಾಮಗಾರಿ ಪ್ರಾರಂಭಿಸಲು ಮೊದಲ ಹಂತದಲ್ಲಿ ರು. 3 ಕೋಟಿ ಬಿಡುಗಡೆ ಮಾಡಲಾಗುವುದು. ಸವಣೂರು ಪಟ್ಟಣಕ್ಕೆ ಒಂದು ಕೌಶಲ್ಯ ತರಬೇತಿ ತಾಂತ್ರಿಕ ಕಾಲೇಜು ಮಂಜೂರಾಗಿದೆ. ಹಿಂದುಳಿದ ವರ್ಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ದೇವಸ್ಥಾನ ಉದ್ಘಾಟಿಸಿದರು. ಸಿ.ಟಿ. ಕುರಂದವಾಡ ಪ್ರಾಸ್ತಾವಿಕ ಮಾತನಾಡಿದರು. ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಾನ್ನಿಧ್ಯ, ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಶ್ರೀಗಳು ವಹಿಸಿದ್ದರು. ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಅರ್ಜುನ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ರಾಮು ಪೂಜಾರ, ತಾಪಂ ಅಧ್ಯಕ್ಷೆ ಉಷಾ ಬಿಳಿಕುದರಿ, ಜಿಪಂ ಸದಸ್ಯ ಶಶಿಧರ ಹೊಣ್ಣನವರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಪ್ರೇಮಾ ಪಾಟೀಲ, ನಿಂಗಣ್ಣ ಜವಳಿ, ವೀರನಗೌಡ ಪಾಟೀಲ, ನಿಂಗಪ್ಪ ಹರಿಜನ, ಫರೀದಾಬಾನು ಶೇಖಸನದಿ, ಶಾಂತಮ್ಮ ಬೊಮ್ಮನಹಳ್ಳಿ, ಬೋವಿ ಸಮಾಜದ ಜಿಲ್ಲಾಧ್ಯಕ್ಷ ರವಿ ಪೂಜಾರ ಇದ್ದರು. ಫಕ್ಕಿರೇಶ ಶಿಗ್ಗಾಂವಿ ಸ್ವಾಗತಿಸಿದರು. ಸುರೇಖಾ ಕುರಂದವಾಡ ಹಾಗೂ ಶಿವಾನಂದ ಮ್ಯಾಗೇರಿ ನಿರ್ವಹಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

