ಹಾವೇರಿ

ಸಂವಹನ ಮಾಧ್ಯಮವಾಗಿ ಆಂಗ್ಲಭಾಷೆ ಬಳಸಿ

Published On :

ಕನ್ನಡಪಭ ವಾರ್ತೆ, ಹಿರೇಕೆರೂರು, ಫೆ.14
ಅಧುನಿಕ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಆಂಗ್ಲಭಾಷೆ ದಾರಿದೀಪವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಸಂವಹನ ಮಾಧ್ಯಮವಾಗಿ ಬಳಕೆ ಮಾಡಿ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಉಪನ್ಯಾಸಕ ಎಂ.ಜಿ. ಬಂಡಿವಡ್ಡರ ಕರೆ ನೀಡಿದರು.
ತಾಲೂಕಿನ ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪದವಿ ಕಾಲೇಜಿನಲ್ಲಿ ಏರ್ರ್ಪಡಿಸಿದ್ದ ಆಂಗ್ಲಭಾಷೆ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪ್ರಚಲಿತ ಜಗತ್ತಿನಲ್ಲಿ ಇಂಗ್ಲಿಷ್ ಭಾಷಾ ವ್ಯಾಮೋಹ ಸಹಜವಾಗಿ ಹೆಚ್ಚುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಿಗೆ ಅಂಗ್ಲಭಾಷೆ ಕಠಿಣ ವಿಷಯವೆಂದು ಕೀಳರಿಮೆ ತೋರದೆ ಪ್ರೀತಿಯಿಂದ ಕಲಿತಾಗ ಅದು ಸುಲಭವಾಗಿ ಅರ್ಥವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಪ್ರಚಲಿತ ಸಮಾಜದಲ್ಲಿ ನಿರುದ್ಯೋಗ ಅತಿ ಪ್ರಮುಖ ಸಮಸ್ಯೆಯಾಗಿದೆ. ನಿರುದ್ಯೋಗ ಹೋಗಲಾಡಿಸಲು ಆಂಗ್ಲಭಾಷೆ ಸಹಕಾರಿಯಾಗಲಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಸರಳವಾಗಿ ಅಂಕ ಗಳಿಸಲು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಲು ಆಂಗ್ಲಭಾಷೆ ಸಹಕಾರಿಯಾಗಲಿದೆ. ಕಾರಣ ವಿದ್ಯಾರ್ಥಿಗಳು ಸತತ ಅಧ್ಯಯನ ಶೀಲರಾಗಬೇಕೆಂದರು.
ಪ್ರಾಚಾರ್ಯ ಡಾ. ಎಂ.ಬಿ. ತಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಎಚ್.ಬಿ. ಕೆಂಚಳ್ಳಿ, ಚಾಮರಾಜ ಕಮ್ಮಾರ, ವಿ.ಎಸ್. ರೋಳಿ, ಎಂ.ಎಂ. ಪ್ಯಾಟಿ, ಡಾ. ಅರುಣ ಶರಾವತಿ ಕೋಟಿಹಾಳ, ಗೌಸಿಯಾ ಅನ್ಸಾರಿ, ಸುಮಯ್ಯ ಖಾಜಿ, ಬಿ.ಬಿ. ಜೋಹರಾ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.