ಇಂದು ಕೆಜೆಪಿ ಸಭೆ (ಸುದ್ದಿ ಸಂಕ್ಷೇಪ)
ಹಿರೇಕೆರೂರು: ಪಟ್ಟಣದ ಗುರಭವನದಲ್ಲಿ ಫೆ. 16ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ಜರುಗಲಿದೆ. ಕೆಜೆಪಿ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಕೆಜೆಪಿ ಮುಖಂಡ ಯು.ಬಿ. ಬಣಕಾರ ಪಾಲ್ಗೊಳ್ಳುವರು. ಈ ಸಭೆಯಲ್ಲಿ ಮಾರ್ಚ್ 7ರಂದು ಜರುಗಲಿರುವ ಪಟ್ಟಣ ಪಂಚಾಯ್ತಿ ಚುನಾವಣೆ ಬಗ್ಗೆ ಚರ್ಚಿಸಲಾಗುವುದು. ಕಾರಣ ತಾಲೂಕಿನ ಎಲ್ಲ ಕೆಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆ ನೀಡಬೇಕೆಂದು ತಾಲೂಕು ಕೆಜೆಪಿ ಪ್ರಧಾನ ಕಾರ್ಯದರ್ಶಿ ಷಣ್ಮುಖಯ್ಯ ಮಳಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾತೆ ತೆರೆಯಲು ಸೂಚನೆ
ಹಿರೇಕೆರೂರು: ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರಿಗೆ ತಸ್ತೀಕ ಹಣವನ್ನು ಕೋರ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ. ಕಾರಣ ತಾಲೂಕಿನ ದೇವಾಲಯಗಳ ತಸ್ತೀಕ ಹಣವನ್ನು ಪಡೆಯುವ ಅರ್ಚಕರು ಕೋರ್ ಬ್ಯಾಂಕಿಂಗ್ ಹೊಂದಿರುವ ಬ್ಯಾಂಕಿನಲ್ಲಿ ಖಾತೆ ತೆರೆದು ವಿವಿರಗಳನ್ನು ಸಲ್ಲಿಸುವಂತೆ ತಹಸೀಲ್ದಾರ್ ತುಷಾರ ಹೊಸೂರ ಅರ್ಚಕರಲ್ಲಿ ಮನವಿ ಮಾಡಿದ್ದಾರೆ.
ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಮನವಿ
ಹಿರೇಕೆರೂರು: ತಾಲೂಕಿನ ಅಣಜಿ ಗ್ರಾಮದಲ್ಲಿ ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂದು ಅಣಜಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶಿವಾನಂದ ಎಸ್.ಎಂ. ದೂರಿದ್ದಾರೆ. ಈ ಕುರಿತು ವಿವರಣೆ ನೀಡಿದ ಅವರು ನಮ್ಮ ಗ್ರಾಮದಲ್ಲಿ ಬಿಪಿಎಲ್ ಅರ್ಹತೆ ಇರುವವರಿಗೆ ಕಾರ್ಡ್ ದೊರತಿಲ್ಲ. ಅನರ್ಹರರಿಗೆ ಬಿಪಿಎಲ್ ಕಾರ್ಡ್ ದೊರೆತಿದೆ. ಆದ್ದರಿಂದ, ಅರ್ಹರಿಗೆ ಕಾರ್ಡ್ ವಿತರಿಸುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಶಹರ ಘಟಕ ಸಭೆ
ಹಾವೇರಿ: ನಗರಸಭೆ ಚುನಾವಣೆ ನಿಮಿತ್ತಬಿಜೆಪಿ ಶಹರದ ಘಟಕದ ಪೂರ್ವಭಾವಿಸಭೆಯನ್ನು ಫೆ. 17ರ ಬೆಳಗ್ಗೆ 10ಕ್ಕೆ ಶಹರದ ಸೀತಾರಾಮ ಮಂಗಲ ಕಚೇರಿ (ರಾಮದೇವರ ಗುಡಿ)ಯಲ್ಲಿ ಕರೆಯಲಾಗಿದೆ. ಶಹರ ಘಟಕಾಧ್ಯಕ್ಷ ಶಿವಲಿಂಗಪ್ಪ ಕಲ್ಯಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ, ಚುನಾವಣೆ ನಿರ್ವಹಣೆ ಸಮಿತಿ ಅಧ್ಯಕ್ಷ ನಾಗೇಂದ್ರ ಕಟಕೋಳ, ತಾಲೂಕು ಗ್ರಾಮೀಣ ಘಟಕಾಧ್ಯಕ್ಷ ಬಸವರಾಜ ಅರಬಗೊಂಡ, ಶಶಿಕಲಾ ಮಠದ ಪಾಲ್ಗೊಳ್ಳುವರು. ನಗರಸಭೆ ಚುನಾವಣೆ ಆಕಾಂಕ್ಷಿಗಳು, ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ನಾಮನಿರ್ದೇಶನ ಸದಸ್ಯರು, ಕಾರ್ಯಕರ್ತರು ಭಾಗವಹಿಸಲು ಪ್ರಧಾನ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ ಕೋರಿದ್ದಾರೆ.
ನಾಳೆ ಪೂರ್ವಭಾವಿ ಸಭೆ
ಬ್ಯಾಡಗಿ: ಪುರಸಭೆ ಚುನಾವಣೆ ದಿನಾಂಕ ನಿಗದಿಗೊಂಡ ಹಿನ್ನೆಲೆಯಲ್ಲಿ ತಾಲೂಕು ಕಾಂಗ್ರೆಸ್ ಘಟಕವು ಫೆ. 17ರಂದು ಇಲ್ಲಿನ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಬೇಕೆಂದು ಘಟಕದ ರಮೇಶ್ ಸುತ್ತಕೋಟಿ ತಿಳಿಸಿದ್ದಾರೆ.
ಕೆಇಬಿ ನಿವೃತ್ತರಸಂಘದ ಸಭೆ ನಾಳೆ
ಹಾವೇರಿ: ಕೆಇಬಿ ನಿವೃತ್ತ ನೌಕರರ ಸಂಘದ ಹಾವೇರಿ ಜಿಲ್ಲಾ ಸದಸ್ಯರ ಮಹಾಸಭೆ ಫೆ. 17ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಹೆಸ್ಕಾಂ ಆವರಣದಲ್ಲಿರುವ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಜರುಗಲಿದೆ. ಸಭೆಯಲ್ಲಿ ರಾಜ್ಯ ಕೆಇಬಿ ನಿವೃತ್ತ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎ. ಶರಣಪ್ಪ, ಖಜಾಂಚಿ ಎಂ.ಎಂ. ನಾಡಗೇರ ಹಾಗೂ ಕವಿಪ್ರನಿ ನೌಕರ ಸಂಘ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದುಕಣ್ಣನವರ ಭಾಗವಹಿಸುವರು. ಹಾವೇರಿ ಜಿಲ್ಲಾ ವ್ಯಾಪ್ತಿಯ ಕೆಇಬಿ ನಿವೃತ್ತ ನೌಕರ ಬಾಂಧವರು ಭಾಗವಹಿಸಬೇಕೆಂದು ಕೇಂದ್ರ ಸಮಿತಿಯ ಸದಸ್ಯರಾದ ಎನ್.ಟಿ. ಹಾವೇರಿ ಮತ್ತು ವೃತ್ತ ಸಮಿತಿಯ ಅಧ್ಯಕ್ಷ ಸಿ.ಎ. ಕೂಡಲಮಠ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಇಂದು ಬಿಎಸ್ಸಾರ್ಕಾರ್ಯಕರ್ತರ ಸಭೆ
ಹಾವೇರಿ: ಹಾವೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ನ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯನ್ನು ಇಲ್ಲಿನ ಕಾಗಿನೆಲೆ ರಸ್ತೆಯ ಮುರುಘಾಮಠದಲ್ಲಿ ಫೆ. 16ರಂದು ಮಧ್ಯಾಹ್ನ 4 ಗಂಟೆಗೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲಾ ಸಂಚಾಲಕ ವೀರೇಶ ಜಾಲವಾಡಗಿ, ಮುಖಂಡ ಡಾ ಸಂಜಯ ಡಾಂಗೆ, ಅಜಮತ್ ಶೇಖ್, ನಿರ್ಮಲಾ ಗುಮಕಾರ, ಈಶ್ವರಿ ಮಡಿವಾಳರ, ಜಯಣ್ಣ ಶೆಟ್ಟರ ಪಾಲ್ಗೊಳ್ಳಲಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶಹರ ಘಟಕದ ಅಧ್ಯಕ್ಷ ರಾಹುಲ್ ಚೌಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

