ಹಾವೇರಿ

ಮಾ. 7ರಂದು ಬ್ಯಾಡಗಿ ಪುರಸಭೆ ಚುನಾವಣೆ

Published On :

ಬ್ಯಾಡಗಿ: ಸರ್ಕಾರ ಹಾಗೂ ಚುನಾವಣೆ ಆಯೋಗದ ಜಟಾಪಟಿ ನಡುವೆ ಪುರಸಭೆ ಚುನಾವಣೆಗೆ ಅಧಿಸೂಚನೆ ಹೊರ ಬೀಳುವ ಮೂಲಕ ಅಂತಿಮ ತೆರೆ ಬಿದ್ದಿದೆ.
ಕಳೆದ 2007ರಲ್ಲಿನ ಮೀಸಲಾತಿ ಅನ್ವಯದಂತೆ ಮಾ. 7ರಂದು ಚುನಾವಣೆ ನಡೆಯಲಿದೆ. ಫೆ. 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, 25 ನಾಮಪತ್ರ ಪರಿಶೀಲನೆ ನಡೆಯಲಿದೆ. 27 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, ಮಾ. 11ರಂದು ಮತಗಳ ಏಣಿಕೆ ಕಾರ್ಯ ನಡೆಯಲಿದೆ.
ವಾರ್ಡ್ಗಳ ಮೀಸಲಾತಿ, ವಾರ್ಡ್ ಸಂಖ್ಯೆ: 1- ಪ. ಪಂಗಡ, 2-ಪ. ಪಂಗಡ(ಮಹಿಳೆ) 3-ಹಿಂದುಳಿದ ವರ್ಗ (ಅ) 4- ಸಾಮಾನ್ಯ, 5-ಹಿಂದುಳಿದ ವರ್ಗ (ಅ) 6- ಸಾಮಾನ್ಯ (ಮಹಿಳೆ), 7-ಸಾಮಾನ್ಯ, 8- ಹಿಂದುಳಿದ ವರ್ಗ (ಅ), 9- ಸಾಮಾನ್ಯ, 10-ಸಾಮಾನ್ಯ, 11-ಸಾಮಾನ್ಯ, 12- ಹಿಂದುಳಿದ ವರ್ಗ (ಬ) (ಮಹಿಳೆ), 13- ಹಿಂದುಳಿದ ವರ್ಗ(ಬ), 14-ಹಿಂದುಳಿದ ವರ್ಗ (ಅ), 15- ಹಿಂದುಳಿದ ವರ್ಗ(ಅ) (ಮಹಿಳೆ), 16- ಸಾಮಾನ್ಯ, 17- ಪರಿಶಿಷ್ಟ ಜಾತಿ, 18-ಪರಿಶಿಷ್ಟ ಜಾತಿ(ಮಹಿಳೆ), 19- ಸಾಮಾನ್ಯ, 20- ಸಾಮಾನ್ಯ(ಮಹಿಳೆ), 21- ಸಾಮಾನ್ಯ(ಮಹಿಳೆ), 22-ಸಾಮಾನ್ಯ(ಮಹಿಳೆ), 23-ಹಿಂದುಳಿದ ವರ್ಗ(ಅ) (ಮಹಿಳೆ).
ಸಲ್ಲಿಸಬೇಕಾದ ದಾಖಲೆಗಳು: ಚುನಾವಣೆಗೆ ಸ್ಫರ್ಧಿಸುವವರು 21 ವರ್ಷ ಪೂರ್ಣಗೊಂಡಿರುವ ವಯಸ್ಸಿನ ದೃಢೀಕರಣ ಪತ್ರ, ಆಯೋಗದ ನಿಗದಿತ ನಮೂನೆಯಂತೆ ರು. 20 ಛಾಪಾ ಕಾಗದದಲ್ಲಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರಗಳು 3 ಪ್ರತಿಗಳಲ್ಲಿ(1 ಮೂಲ, 2 ಝರಾಕ್ಸ ಪ್ರತಿ) ಸಲ್ಲಿಸಬೇಕು. ಮೀಸಲಾತಿಯಡಿ ಸ್ಪರ್ಧಿಸುವವರು ತಹಸೀಲ್ದಾರ್ ಅವರಿಂದ ಚುನಾವಣೆ ನಿಮಿತ್ತ ಪಡೆದ ಜಾತಿ ಪ್ರಮಾಣಪತ್ರ (1 ಮೂಲ, 2 ಝರಾಕ್ಸ) ಲಗತ್ತಿಸಬೇಕು.
ಪುರಸಭೆಗೆ ತೆರಿಗೆ ಪಾವತಿಸಿ ಬೇಬಾಕಿ ಪ್ರಮಾಣಪತ್ರ ಸಲ್ಲಿಸಬೇಕು. ಸೂಚಕರು ಸಂಬಂಧಿಸಿದ ವಾರ್ಡ್ನವರಾಗಿರಬೇಕು. ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವವರು ಇಬ್ಬರು ಸೂಚಕರ ತಲಾ 2 ಫೋಟೋ, ಪಕ್ಷೇತರ ಅಭ್ಯರ್ಥಿಗೆ ನಾಲ್ಕು ಜನ ಸೂಚಕರು ತಲಾ ಎರಡರಂತೆ ಒಟ್ಟು 8 ಫೋಟೋ ಲಗತ್ತಿಸಬೇಕು. ಅಭ್ಯರ್ಥಿಯು 2 ಫೋಟೋ ಲಗತ್ತಿಸಿ ಮೇಲಿನ ಎಲ್ಲ ದಾಖಲೆಗಳೊಂದಿಗೆ ರು. 1 ಸಾವಿರ (ಸಾಮಾನ್ಯ) ಹಾಗೂ ರು. 500 (ಎಸ್ಸಿ, ಎಸ್ಟಿ, ಹಿಂದುಳಿದ (ಅ) ಮತ್ತು (ಬ) ವರ್ಗ ಹಾಗೂ ಮಹಿಳೆಯರು) ಠೇವಣಿಯೊಂದಿಗೆ ನಾಮಪತ್ರಗಳನ್ನು (2 ಪ್ರತಿ) ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.