ರೋಗಗ್ರಸ್ತ ಹಾಸ್ಟೆಲ್ ಕುರಿತು ಪುಸ್ತಕ ಬಿಡುಗಡೆ
ಹಾವೇರಿ: ರಾಜ್ಯದ ಎಸ್ಸಿ, ಎಸ್ಟಿ ಮತ್ತು ಬಿಸಿಎಂನ ರೋಗಗ್ರಸ್ತ ಹಾಸ್ಟೆಲ್ಗಳ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಇಲ್ಲಿನ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿ, ಪುಸ್ತಕ ಬಿಡುಗಡೆ ಮಾಡಿದ ಮಕ್ಕಳ ಸಾಹಿತಿ ಗಂಗಾಧರ ನಂದಿ ಮಾತನಾಡಿ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಇಂಥದೊಂದು ಪುಸ್ತಕವನ್ನೇ ರಚಿಸಿರುವುದು ಅಭೂತಪೂರ್ವ ಸಾಧನೆಯಾಗಿದೆ. ದೇಶದ ಭವಿಷ್ಯ ನಿರ್ಮಿಸಬೇಕಾದ ಯುವಜನತೆ ಇಂಥ ವಾತಾವರಣದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಲ್ಲ ಎಂಬ ಆತಂಕ ನಮ್ಮಲ್ಲೂ ಮೂಡಿದ್ದ ಒಂದು ಕ್ಷಣ ನಿಜಕ್ಕೂ ಆತಂಕಿತನಾಗಿದ್ದೆನೆ.
ಆದರೆ, ಈ ಕುರಿತಂತೆ ವಿದ್ಯಾರ್ಥಿ ಸಂಘಟನೆಗಳ ಹೋರಾಟದ ಹಾದಿ ನನಗೆ ಕೊಂಚ ಸಮಾಧಾನ ನೀಡಿದೆ. ಈ ಕುರಿತಂತೆ ಜವಾಬ್ದಾರಿ ಮರೆತಿರುವ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ತಾವು ಮಾಡುತ್ತಿರುವ ಕರ್ತವ್ಯಕ್ಕೆ ನ್ಯಾಯ ಒದಗಿಸಬೇಕು ಎಂದರು.
ಪತ್ರಕರ್ತ ಬಸವರಾಜ ಮರಳಿಹಳ್ಳಿ ಮಾತನಾಡಿದರು. ಅತಿಥಿಗಳಾಗಿ ಪ್ರಾಚಾರ್ಯ ಚನ್ನಪ್ಪ, ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ, ರಮೇಶ, ಕಿರಣ, ಸುಧಾಕರ, ಕಾವೇರಿ ಕಲ್ಲನಗೌಡ್ರ, ವೀಣಾ, ಜ್ಯೋತಿ, ವಿನೋದಾ, ದೀಪಾ ಹಾಗೂ ವಿವಿಧ ಹಾಸ್ಟೆಲ್ಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

