ಹಾವೇರಿ

ಸುರೇಶಗೌಡ ಪಾಟೀಲ್ ಪುರಸಭೆಗೆ ಸ್ಪರ್ಧೆ

Published On :

ಬ್ಯಾಡಗಿ: ಬಿಎಸ್‌ವೈಗೆ ನಿಷ್ಠೆ ತೋರಿಸಿ ಇತ್ತೀಚೆಗೆ ವಿಧಾನಸಭೆ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೂಲಕ ದೊಡ್ಡಸುದ್ದಿಯನ್ನೇ ಮಾಡಿದ್ದ ಸ್ಥಳೀಯ ಮಾಜಿ ಶಾಸಕ ಸುರೇಶಗೌಡ ಇದೀಗ ಪುರಸಭೆಗೆ 4ನೇ ವಾರ್ಡ್‌ನಿಂದ ಸ್ಪರ್ಧಿಸುವುದಾಗಿ ಘೋಷಿಸಿ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ.
ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಕರೆಯಲಾಗಿದ್ದ ಕೆಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ಸಭೆಯಲ್ಲಿ ನೂರಾರು ಟಿಕೆಟ್ ಆಕಾಂಕ್ಷಿಗಳ ಹಾಜರಿದ್ದರು. ಸುರೇಶಗೌಡ ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಕಾರ್ಯಕರ್ತರಲ್ಲಿ ದಿಗ್ಬ್ರಮೆ ಮೂಡಿತು.
ಅದಕ್ಕೆ ಕಾರಣವೂ ಇದೆ ರಾಜಕೀಯ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಉನ್ನತ ಹುದ್ದೆಗೆ ಏರಿದ ಬಳಿಕ ಮತ್ತೆ ಕೆಳ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸುವುದು ವಿರಳ. ಆದರೆ, ಶಾಸಕರ ಈ ನಿರ್ಧಾರದಿಂದ ನೆರೆದಿದ್ದ ಕಾರ್ಯಕರ್ತರು ವಿಚಿಲಿತರಾದಂತೆ ಕಂಡು ಬಂದರು.
ಬಳಿಕ ಸುರೇಶಗೌಡ ಪಾಟೀಲ್ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ಸರ್ಕಾರದಿಂದ ಒದಗಿಸಿದ್ದೇನೆ. ತಾವು ಪುರಸಭೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂದು ಸಮರ್ಥಿಸಿಕೊಂಡರು.
ವಿಪ ಸದಸ್ಯ ಶಿವರಾಜ ಸಜ್ಜನರ, ಪುರಸಭೆ ಮಾಜಿ ಅಧ್ಯಕ್ಷ ಕನ್ನಪ್ಪ ಕೊಪ್ಪದ, ಕೆಜೆಪಿ ತಾಲೂಕಾಧ್ಯಕ್ಷ ಮುರಿಗೆಪ್ಪ ಶೆಟ್ಟರ, ಶಂಭು ಬಿದರಿ, ಗುಡ್ಡಪ್ಪ ಆಡಿನವರ, ಬಸವರಾಜ ಹಂಜಿ, ಬಸವರಾಜ ಸಂಕಣ್ಣನವರ, ಸುರೇಶ ಆಸಾದಿ, ಎಸ್.ಎಸ್. ಹಿರೇಮಠ, ಎಂ.ಎ. ಹಿರೇಮಠ, ರಾಜು ಮೋರಿಗೇರಿ, ನಾಗರಾಜ ಬಳ್ಳಾರಿ, ರವಿ ಪಟ್ಟಣಶೆಟ್ಟಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.