ನಗರ ಸುಧಾರಣಾ ಸಮಿತಿ ಅಭ್ಯರ್ಥಿ ಸ್ಪರ್ಧೆ
ಹಾವೇರಿ: ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ನೀಡಲು ಹಾಗೂ ಹಾವೇರಿ ನಗರಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು 30 ವರ್ಷಗಳ ನಂತರ ಮತ್ತೆ ನಗರ ಸುಧಾರಣಾ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಡಾ. ಜಿ.ಆರ್. ಗುಡಿ ತಿಳಿಸಿದರು.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ನಗರ ಸುಧಾರಣಾ ಸಮಿತಿ ನಗರದ ಎಲ್ಲ 31 ವಾರ್ಡ್ಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉತ್ತಮ ನಡತೆಯ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ. ಪ್ರಸಕ್ತ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇಂದು ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ.
ಭ್ರಷ್ಟಾಚಾರ ತಡೆಗಟ್ಟುವುದು ಹಾಗೂ ಹದಗೆಟ್ಟಿರುವ ನಗರದ ರಾಜಕೀಯ ವ್ಯವಸ್ಥೆ ಸುಧಾರಿಸುವದಕ್ಕಾಗಿ ಮತ್ತೆ ನಗರ ಸುಧಾರಣಾ ಸಮಿತಿ ಸದಸ್ಯರು ಚುನಾವಣಾ ಕಣಕ್ಕಿಳಿಯಲು ನಿಶ್ಚಯಿಸಿದ್ದಾರೆ. ಈ ಕುರಿತಂತೆ ನಗರದ ವಿವಿಧೆಡೆ ಹಲವು ಬಾರಿ ಸಭೆಗಳನ್ನು ನಡೆಸಲಾಗಿದೆ. ಪ್ರತಿ ಸಭೆಯಲ್ಲಿಯೂ ನಮ್ಮ ನಿರೀಕ್ಷೆಗೂ ಮೀರಿ ಜನತೆ ಸ್ಪಂದಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಂತೆ ಜನತೆ ಒತ್ತಾಯಿಸಿದ ಮೇಲೆಯೇ ಸಮಿತಿ ಚುನಾವಣಾ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದೆ ಎಂದರು. ಮಾ.7ರಂದು ನಡೆಯುವ ಚುನಾವಣೆಯಲ್ಲಿ ಜನತೆ ಹೆಚ್ಚಿನ ಬೆಂಬಲ ಕೊಡುತ್ತಾರೆಂಬ ನಂಬಿಕೆ ತಮಗಿದೆ ಎಂದರು. ಕಳೆದ ಸಾಲಿನ ನಗರಸಭಾ ಸದಸ್ಯರಲ್ಲಿ ಕೆಲವರು ಇಡೀ ನಗರಸಭೆ ಹಾಳುಗೆಡವಿದ್ದಾರೆ. ಕೆಲ ಸದಸ್ಯರು ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಿದ್ದರೂ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಮಾರ್ಚ್ನಲ್ಲಿ ನಡೆಯುವ ಚುನಾವಣೆಯಲ್ಲಿ, 2008ರಲ್ಲಿ ಯಾವುದೇ ಪಕ್ಷದಿಂದಾಗಲಿ ಚುನಾಯಿತರಾದ ಸದಸ್ಯರಿಗೆ ಹಾವೇರಿ ನಾಗರಿಕ ಸುಧಾರಣಾ ಸಮಿತಿಯಿಂದ ಸ್ಪರ್ಧಿಸಲು ಅವಕಾಶ ನೀಡುವದಿಲ್ಲ ಎಂದರು. ಹಾವೇರಿ ನಾಗರಿಕ ಸುಧಾರಣಾ ಸಮಿತಿ ಸದಸ್ಯರನ್ನು ಕಾಣಲು ಜನತೆ ಬರಬಾರದು. ಬದಲಿಗೆ ಸಾರ್ವಜನಿಕರಿರಲ್ಲಿಗೆ ಸದಸ್ಯರು ಹೋಗಬೇಕು ಎಂಬುದು ಸಮಿತಿಯ ದೃಢ ನಿಲುವು. 5 ವರ್ಷಗಳಲ್ಲಿ ನಡೆದಿರುವ ದುರಾಡಳಿತವನ್ನು ನೋಡಿರುವ ನಗರದ ಪ್ರಜ್ಞಾವಂತ ನಾಗರಿಕರು ನಾಗರಿಕ ಸುಧಾರಣಾ ಸಮಿತಿ ಅಭ್ಯರ್ಥಿಗಳಿಗೆ ಬೆಂಬಲಿಸಲಿದ್ದಾರೆ ಎಂದು ಡಾ. ಗುಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಸತೀಶ ಪಂಡಿತ, ವರ್ತಕ ಪಿ.ಡಿ. ಶಿರೂರ, ರವಿ ಮೆಣಸಿನಕಾಯಿ, ಶೇಕಣ್ಣ ಕಳ್ಳಿಮನಿ, ಜಯಂತಿಲಾಲ ಜೈನ, ವಿ.ಪಿ. ದ್ಯಾಮಣ್ಣನವರ, ಎಂ.ಎಸ್. ಕೋರಿಶೆಟ್ಟರ, ಗಣೇಶ ಹೂಗಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

