ಹಾವೇರಿ

ಜಿಲ್ಲಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Published On :

ಹಿರೇಕೆರೂರು: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ  ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು. ಬೆಳಗ್ಗೆಯಿಂದ ಖಾಸಗಿ, ಸರ್ಕಾರಿ ಬಸ್ಸುಗಳು ಸಂಚಾರ ಮಾಡಿದರೂ 10 ಗಂಟೆ ಸುಮಾರಿಗೆ ಬಸ್ ಸಂಚಾರ ವಿರಳವಾಯಿತು. ಆದರೆ, ಆಟೋಮೆಟಡೋರ್ ಮತ್ತಿತರ ವಾಹನಗಳ ಸಂಚಾರ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸಂಚರಿಸಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಆದರೆ ಬ್ಯಾಂಕುಗಳು ತಮ್ಮ ದೈನಂದಿನ ಕೆಲಸ ಕಾರ್ಯವನ್ನು ನೆಡಸಲು ಮುಂದಾದರೂ ಸಹ ಗ್ರಾಹಕರು ಬಂದ್ ಹಿನ್ನಲೆಯಲ್ಲಿ ಕಡಿಮೆ ಪ್ರಮಾಣ ಕಂಡು ಬಂದಿತು. ಶಾಲಾ, ಕಾಲೇಜುಗಳು ಮುಚ್ಚಿದ್ದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು. ಕೆಲ ಅಂಗಡಿಕಾರರು ತಾವೇ ಅಂಗಡಿಗಳನ್ನು ಬಂದ್ ಮಾಡಿ ಬೆಬಂಲ ಸೂಚಿಸಿದರೂ ಮಧ್ಯಾಹ್ನದ ವೇಳೆಗೆ ಪುನಃ ಎಂದಿನಂತೆ ಸಹಜ ಸ್ಥಿತಿಯತ್ತ ಮರಳಿತು.
ರಟ್ಟಿಹಳ್ಳಿ: ತಾಲೂಕಿನ ರಟ್ಟಿಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಮಿಕರು ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಹತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕಾರ್ಮಿಕರು ರಾಜು ಹೇಂದ್ರೆಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಮನಮೋಹನ ಸಿಂಗ್ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭ ಕಾರ್ಮಿಕರ ಮುಖಂಡ ರಾಜಕುಮಾರ ಹೇಂದ್ರೇ ಮಾತನಾಡಿ, ಗ್ರಾಮ ಪಂಚಾಯಿತಿ ಕಾರ್ಮಿಕರು 12 ಗಂಟೆಗೂ ಹೆಚ್ಚು ಸಮಯ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಿನ ಬೆಲೆ ಏರಿಕೆ ಪರಿಣಾಮವಾಗಿ ದೈನಂದಿನ ಬದುಕು ನಡೆಸುವುದು ದುಸ್ತರವಾಗಿದೆ. ನೆಮ್ಮದಿ ಜೀವನ ನೆಡಸಲು ವೇತನವನ್ನು ಕನಿಷ್ಠ ರು. 10 ಸಾವಿರ ನೀಡಬೇಕು. ಗಗನಕ್ಕೇರುತ್ತಿರುವ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿ ಗ್ರಾಮ ಪಂಚಾಯಿತಿ ಕಾರ್ಮಿಕರಿಗೆ ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ಗ್ರಾಪಂ ಸಿಬ್ಬಂದಿಗೆ 3ನೇ ಹಣಕಾಸು ಆಯೋಗದ 2008ರಲ್ಲಿ ನೀಡಿದ ಅಂತಿಮ ವರದಿಯಲ್ಲಿ ಪಂಚಾಯಿತಿ ಸಿಬ್ಬಂದಿಗೆ ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕೆಂದು ಶಿಫಾರಸು ಮಾಡಿದ್ದರೂ ಸಹ ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕಾರ್ಮಿಕರಿಗೆ ರಾಷ್ಟ್ರೀಯ ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗಿರೀಶ ಪಾಟೀಲ, ಅಶೋಕ ಬೆಳಕೇರಿ, ವೀರೇಶ ದ್ಯಾವಕ್ಕಳವರ, ಸರೋಜಮ್ಮ ಮುದಗಣ್ಣನವರ, ರೇಣುಕಮ್ಮ ಹರಿಜನ, ಪರಮೇಶ ಅಂತ್ರವಳ್ಳಿ, ಬಸವರಾಜ ಹರಿಜನ, ಗುತ್ತೆಮ್ಮ ಹರಿಜನ, ಅಹ್ಮದಗೌಸು ಮೆಡ್ಲೇರಿ, ಸಂತೋಷ ಬಿಳಿ, ಮಂಜು ಚಲುವಾದಿ, ಬಸವರಾಜ ಕಟ್ಟೇಕಾರ, ವಿರೇಶ ಹರಿಜನ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.