ನೈತಿಕತೆ ಬೆಳವಣಿಗೆಯಿಂದ ಸಮಾಜ ಸುಧಾರಣೆ
ಹಿರೇಕೆರೂರು: ಸಮಾಜದಲ್ಲಿ ಬರಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಪ್ರಗತಿ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮಾನಸಿಕವಾಗಿ ಬದಲಾಗಿ, ನೈತಿಕತೆ ಬೆಳೆಸಿಕೊಂಡಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಜತೆಗೆ ಸಾಧು, ಸಂತರು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಹಕಾರಿ ಧುರೀಣ ಎಸ್.ಎಸ್. ಪಾಟೀಲ ಕರೆ ನೀಡಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಶನೈಶ್ವರಸ್ವಾಮಿ ಪ್ರಾಣಪ್ರತಿಷ್ಠಾನದ 2ನೇ ವರ್ಷದ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧರ್ಮಜಾಗೃತಿ ಮೂಡುತ್ತಿರುವುದು ಸಂತಸದಾಯಕ. ಆದರೆ ಯುವಜನತೆ ದುಶ್ಟಟಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದಕರ. ಚುನಾವಣೆ ಸಂದರ್ಭದಲ್ಲಿ ಯುವಕರು ರಾಜಕಾರಣಿಗಳ ಆಮಿಷಗಳಿಗೆ ಒಳಗಾಗುತ್ತಿದ್ದಾರೆ. ಇಂದಿನ ಅಧಿಕಾರಿಗಳು, ರಾಜಕಾರಣಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಕಾರಣ ಎಲ್ಲರೂ ಜಾಗೃತರಾಗಬೇಕು ಎಂದು ಮನವಿ ಮಾಡಿದರು.
ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದರೂ ಪಾಪ ಹೋಗಲಾರದು, ಸಚ್ಚಾರಿತ್ರ್ಯವಂತರಾದಾಗ ಮಾತ್ರ ಪಾಪ ನಿವಾರಣೆ ಸಾಧ್ಯ. ಮಾನವ ದುರಾಸೆ, ದುರಂಹಕಾರ, ಅಸೂಯೆ, ಸ್ವಾರ್ಥ, ಅಧಿಕಾರ ಹಾಗೂ ಹಣದ ಲಾಲಸೆಗಳಿಂದ ಮಾನವತೆಯನ್ನೇ ತೊರೆದಿದ್ದಾನೆ. ಮಾನವ ದಯೆ, ಪರೋಪಕಾರ, ಮಾನವೀಯ ಸದ್ಗುಣ, ಸಚ್ಚಾರಿತ್ರ್ಯ ಬೆಳೆಸಿಕೊಳ್ಳಬೇಕು ಎಂದರು.
ಕಾಳೇನಹಳ್ಳಿ ರೇವಣಸಿದ್ದ ಶ್ರೀಗಳು, ತಿಪ್ಪಾಯಿಕೊಪ್ಪದ ವಿರೂಪಾಕ್ಷ ಶ್ರೀಗಳು, ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀಗಳು, ಪಾಂಡೋಮಟ್ಟಿಯ ಗುರುಬಸವ ಶ್ರೀಗಳು, ರಾಣಿಬೆನ್ನೂರಿನ ಶಿವಯೋಗಿ ದೇವರು ಹಾಗೂ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ತಾವರೆಕೊಪ್ಪದ ಉಪವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿದರು. ಶಿವಬಸಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ತಿಪ್ಪಣ್ಣನವರ, ಬಿ.ಜಿ. ವಡ್ಡಿನಕಟ್ಟಿ, ಬಿ.ಎಂ. ಮುತ್ತಗಿ, ಸೋಮಪ್ಪ ಹಲಗೇರಿ, ದಿಗ್ಗೆಪ್ಪ ಗಂಗಪ್ಪಳವರ, ಏಕೇಶ ಬಣಕಾರ, ಶಿವಯೋಗಪ್ಪ ಬಣಕಾರ,
ಶಂಕ್ರಗೌಡ ವಡ್ಡಿನಕಟ್ಟಿ, ಜಯಕುಮಾರ ಉಪ್ಪಾರ, ಬೈರಪ್ಪ ಚಕ್ರಸಾಲಿ, ಬಿ.ಡಿ.ಬೂಕಾಂತ, ಸೋಮಪ್ಪ ಮಾರವಳ್ಳಿ ಉಪಸ್ಥಿತರಿದ್ದರು. ಅನಂತರ ಅನ್ನ ಸಂತರ್ಪಣೆ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

