3 ಪ್ರಶಸ್ತಿ ಪಡೆದ್ರೂ ಅಭಿವೃದ್ಧಿ ಇಲ್ಲ
ಶಿವಾನಂದ ಮಲ್ಲನಗೌಡರ
ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ, ಅಭಿವೃದ್ಧಿಗೊಳ್ಳದ ಹೊಸ ಬಡಾವಣೆಗಳು, ಉದ್ಯಾನವನ ಹಾಗೂ ಸಾರ್ವಜನಿಕ ಶೌಚಾಲಯಗಳ ಕೊರತೆ. ಇದು ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಮೂರು ಬಾರಿ ಅತ್ಯುತ್ತಮ ಪುರಸಭೆ ಪ್ರಶಸ್ತಿಗೆ ಭಾಜನವಾಗಿರುವ ಬ್ಯಾಡಗಿ ಪುರಸಭೆ ಕತೆ. ತನ್ನ ಖ್ಯಾತಿಗೆ ತಕ್ಕಂತೆ ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ಪುರಸಭೆ ವಿಫಲವಾಗಿದೆ.
ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ 23 ವಾರ್ಡುಗಳಿವೆ, 9223 ಪುರುಷ ಹಾಗೂ 9203 ಮಹಿಳೆ ಸೇರಿದಂತೆ ಒಟ್ಟು 18429 ಮತದಾರರಿದ್ದು, 23 ಸದಸ್ಯರ ಭವಿಷ್ಯ ನಿರ್ಧರಿಸಲಿದ್ದಾರೆ.
ರು. 22.33 ಕೋಟಿ: ವಿವಿಧ ಯೋಜನೆಗಳಲ್ಲಿ ಪಟ್ಟಣಕ್ಕೆ ಕಳೆದ 5 ವರ್ಷದಲ್ಲಿ ರು. 22.33 ಕೋಟಿ ಅನುದಾನ ಒದಗಿದೆ. ಎಲ್ಲ ಅನುದಾನವನ್ನು ಬಳಕೆ ಮಾಡಲಾಗಿದ್ದು, ಕುಡಿಯುವ ನೀರು, ಚರಂಡಿ, ರಸ್ತೆ ಹಾಗೂ ವಾಣಿಜ್ಯ ಮಳಿಗೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ.
ನೀರಿಗೆ ರು. 22 ಕೋಟಿ: ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಒದಗಿಸಲು ರು. 22 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ. ನದಿ ಪಾತ್ರದಲ್ಲಿ ಜಾಕ್‌ವೆಲ್, 36 ಕೀ.ಮೀ. ಪೈಪ್‌ಲೈನ್ ಹಾಗೂ ಶುದ್ಧೀಕರಣ ಘಟಕ ನಿರ್ಮಿಸುವ ಮೂಲಕ 2040ನೇ ಇಸವಿಯವರೆಗೆ ಸುಮಾರು 1 ಲಕ್ಷ ಜನಸಂಖ್ಯೆಗೆ ಸಾಕಾಗುವಷ್ಟು ನೀರು ಒದಗಿಸಲು ನಿರ್ಧರಿಸಲಾಗಿದೆ.
ತೆರಿಗೆ ಭಾರ: ಖಾತೆ ಬದಲಾವಣೆಗೆ ರು. 1 ಲಕ್ಷ ಮೌಲ್ಯದ ಆಸ್ತಿಗೆ ಸರ್ಕಾರ ರು. 500 ನಿಗದಿ ಮಾಡಿದೆ. ಆದರೆ ಪುರಸಭೆ ಆಡಳಿತ ಮಂಡಳಿ ಏಕಾಏಕಿ ಅದನ್ನು ರು. 1000ಕ್ಕೆ ಹೆಚ್ಚಿಸಿದೆ. ಇದಕ್ಕೆ ಕಾರಣ ಅಭಿವೃದ್ಧಿಗೆ ಹಣ ಬೇಕು ಎನ್ನುವುದು. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಎಪಿಎಂಸಿಗೆ ಮೂಲ ಸೌಕರ್ಯ ಒದಗಿಸದ ಪುರಸಭೆ ಅಲ್ಲಿಯೂ ಖಾತೆ ಬದಲಾವಣೆಗೆ ರು. 10 ಸಾವಿರ ತೆರಿಗೆ ವಸೂಲಿ ಮಾಡುತ್ತಿದೆ.
ತೆರಿಗೆ ಕೈಬಿಟ್ಟ ಪುರಸಭೆ: ವ್ಯಾಪಾರಿ ಕೇಂದ್ರವಾಗಿರುವ ಪಟ್ಟಣದಲ್ಲಿ ಸುಮಾರು 15 ಕೋಲ್ಡ್ ಸ್ಟೋರೇಜ್, (ಶೀತಲೀಕರಣ ಘಟಕ) 20ಕ್ಕೂ ಹೆಚ್ಚು ಖಾರದಪುಡಿ ತಯಾರಿಕಾ ಘಟಕಗಳಿವೆ. ಬೆಟ್ಟದ ಮಲ್ಲೇಶ್ವರ ಗುಡ್ಡಪ್ರದೇಶದಲ್ಲಿ ಸುಮಾರು 4 ಪವನ ವಿದ್ಯುತ್ ಕೇಂದ್ರಗಳು ತಲೆ ಎತ್ತಿವೆ. ಇದರಲ್ಲಿನ 4 ಪವನ ವಿದ್ಯುತ್ ಕೇಂದ್ರಗಳು ಬನ್ನಿಹಟ್ಟಿ ಗ್ರಾಪಂ ಮತ್ತು 4 ಕೋಲ್ಡ್ ಸ್ಟೋರೇಜ್‌ಗಳು ಮಾಸಣಗಿ ಗ್ರಾಪಂ ವ್ಯಾಪ್ತಿಯಲ್ಲಿವೆ. ಆದರೆ, ಸ್ಥಳೀಯ ಪುರಸಭೆ ಮಾತ್ರ ತನ್ನ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಲು ಹಿಂದು ಮುಂದು ನೋಡುತ್ತಿದ್ದು, ಸದ್ದಿಲ್ಲದಂತೆ ರಸ್ತೆ, ವಿದ್ಯುತ್, ನೀರು, ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದೆ. ಇದರಿಂದ ಪುರಸಭೆಗೆ ಬರಬೇಕಾಗಿದ್ದ ಲಕ್ಷಾನುಗಟ್ಟಲೇ ತೆರಿಗೆಗೆ ಕತ್ತರಿ ಬಿದ್ದಿದೆ.
ಇನ್ನು ಪಟ್ಟಣದ ಮುಖ್ಯರಸ್ತೆಯಲ್ಲಿನ ಒತ್ತುವರಿ ತೆರವುಗೊಳಿಸಿ ಅಗಲೀಕರಣ ಮಾಡಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆನ್ನುವುದು ಇಲ್ಲಿನ ಸಾರ್ವಜನಿಕರ ಬಹುದಿನದ ಬೇಡಿಕೆ ಹಾಗೇ ಉಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

