ಹಾವೇರಿ

ಪ್ರಾಚೀನ ಸ್ಮಾರಕ ಪರಂಪರೆ ಪ್ರತೀಕ: ಡಾ೤ ಭೋಜರಾಜ

Published On :

ಹಾವೇರಿ: ಪ್ರಾಚೀನ ಸ್ಮಾರಕಗಳು ಕೇವಲ ಇತಿಹಾಸದ ಆಕರಗಳಾಗಿರದೇ ನಮ್ಮ ಪರಂಪರೆ ಪ್ರತೀಕಗಳಾಗಿವೆ. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಡಾ. ಭೋಜರಾಜ ಪಾಟೀಲ ತಿಳಿಸಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಜಿಲ್ಲಾ ಪರಂಪರೆ ಕೂಟದ ಆಶ್ರಯದಲ್ಲಿ ಪರಂಪರೆ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಜನರಲ್ಲಿನ ಅಜ್ಞಾನ, ಅಂಧಾನುಕರಣೆ, ಮೂಢನಂಬಿಕೆಗಳೇ ಸ್ಮಾರಕಗಳ ನಾಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಿಧಿ ಇದೆ ಎಂಬ ದುರಾಸೆಯಿಂದ ದೇವಾಲಯಗಳನ್ನು ಹಾಳುಗೆಡುವುತ್ತಿರುವುದು ವಿಷಾದನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ೤ ಎಸ್.ಕೆ. ನಾಶಿ ಮಾತನಾಡಿ, ಆಧುನಿಕ ಬದುಕಿನಲ್ಲಿ ವಿವಿಧ ಕೌಶಲ್ಯಗಳು ಅಗತ್ಯವಾಗಿದ್ದರೂ ಪ್ರಾಚೀನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋದಲ್ಲಿ ಮಾತ್ರ ನಮ್ಮ ಪರಂಪರೆ ಉಳಿಸಲು ಸಾಧ್ಯ ಎಂದರು. ನಾಗರತ್ನಾ ಪ್ರಾರ್ಥಿಸಿದರು. ಪ್ರೊ. ಎಂ. ನಾಗರಾಜ ಸ್ವಾಗತಿಸಿದರು. ಪರಂಪರೆ ಕೂಟದ ಸಂಚಾಲಕ ಶಿವಯೋಗಿ ಕೋರಿಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು. ಚೇತನಾ ಪರಪ್ಪನವರ ವಂದಿಸಿದರು. ಸಬರಿನ್ ತಾಜ್ ಡಾಲಾಯತ್ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.