ತ್ಯಾಗ ಜೀವನ ನಡೆಸಬೇಕು:ಶಿವಯೋಗಿ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 22
ಮನುಷ್ಯ ತನ್ನಲ್ಲಿರುವ ಅರಿಷಡ್ ವರ್ಗಗಳನ್ನು ಬಿಟ್ಟು ತ್ಯಾಗ, ಮನೋಭಾವನೆಯಿಂದ ಬಾಳಬೇಕು. ಶಿವಬಸವ ಹಾಗೂ ಶಿವಲಿಂಗ ಶಿವಯೋಗಿಗಳು ಸಮಾಜದ ಏಳ್ಗೆಗಾಗಿ ತ್ಯಾಗ ಜೀವನವನ್ನು ನಡೆಸಿದ್ದಾರೆ. ಅಂಗ ಗುಣಗಳನ್ನು ತ್ಯಜಿಸಿ, ಲಿಂಗ ಗುಣಗಳನ್ನು ಪಡೆಯುವುದೇ ವ್ಯಕ್ತಿಯ ಬದುಕಿನ ಗುರಿಯಾಗಬೇಕು ಎಂದು ಶಿವಯೋಗಿ ಶ್ರೀಗಳು ಸಲಹೆ ನೀಡಿದರು.
ಇಲ್ಲಿನ ಹುಕ್ಕೇರಿ ಮಠದಲ್ಲಿ ಶಿವಬಸವ ಹಾಗೂ ಶಿವಲಿಂಗ ಶ್ರೀಗಳ ಸ್ಮರಣೋತ್ಸವದ ಸಮಾರಂಭದ ಸಮ್ಮುಖ ವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೂಡಲದ ಗುರುನಂಜೇಶ್ವರ ಶ್ರೀಗಳು, ವ್ಯಕ್ತಿಯು ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುವದರ ಜೊತೆಗೆ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಬೇಕು. ನಾವೆಲ್ಲರೂ ಭಾವೈಕ್ಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಹೊಸಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಹುಕ್ಕೇರಿಮಠ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಸದಾಶಿವ ಶ್ರೀಗಳು ಕ್ರಿಯಾಶೀಲರಾಗಿದ್ದು, ಹಿರಿಯ ಶ್ರೀಗಳು ಹಾಕಿಕೊಟ್ಟ ಸತ್ ಪರಂಪರೆಯಗಳಲ್ಲಿ ಸಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಹರಸೂರು ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶ್ರೀ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಎಸ್. ಪಾಟೀಲ, ಹನುಮಂತಪ್ಪ ಕಾಮನಹಳ್ಳಿ, ನಿವೃತ್ತ ಶಿಕ್ಷಕ ನಿಸ್ಸಿಮಪ್ಪ ಕುಂದೂರು ಮತ್ತು ಭೋಜಪ್ಪ ಸೂಡಿ ಇವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದ ನಾಗಲಿಂಗಯ್ಯ ವಸ್ತ್ರದಮಠ ಭಕ್ತಿ ಸಂಗೀತ ಸಾದರಪಡಿಸಿದರು. ಭಕ್ತಿ ಸೇವೆಯನ್ನು ಗುರುಪಾದಪ್ಪ ಬಣಕಾರ, ದಾಸೋಹ ಸೇವೆಯನ್ನು ಶಿವಯೋಗಪ್ಪ ಹುರಳಿಕುಪ್ಪಿ ನಡೆಸಿಕೊಟ್ಟರು.
ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಸಿ.ಎಸ್. ಮರಳಿಹಳ್ಳಿ ನಿರ್ವಹಿಸಿದರು. ಕೆ.ಆರ್. ನಾಶಿಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

