ಸೇವಾಭಾವದಿಂದ ಅಭಿವೃದ್ಧಿ: ಮೃತ್ಯುಂಜಯ ಮುದ್ದಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ.22
ನಾಡು-ನುಡಿ ಶ್ರೇಯಸ್ಸಿಗೆ ಶ್ರಮಿಸಿದ ಮಹಾತ್ಮರಲ್ಲಿ ವಿವೇಕಾನಂದರ ಕೊಡುಗೆ ಮಹತ್ವದ್ದೆಂದು ರಾಣೆಬೆನ್ನೂರ ವಿವೇಕಾನಂದ ಆಶ್ರಮದ ಮುಖ್ಯಸ್ಥ ಮೃತ್ಯುಂಜಯ ಮುದ್ದಿ ಹೇಳಿದರು.
ತಾಲೂಕಿನ ಗಂಗಿಭಾವಿ ಗವಿಮಠದ ದೇವಸ್ಥಾನದ ಆವರಣದಲ್ಲಿ ಕೆಎಸ್ಆರ್ಪಿ 10ನೇ ಪೊಲೀಸ್ ಪಡೆ ಹಾಗೂ ಶಿಗ್ಗಾಂವಿ ವಿವೇಕ ಬಳಗದ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧಿಕಾರಿಗಳಲ್ಲಿ ಪ್ರಾಮಾಣಿಕತೆ, ಸ್ವಾಮೀಜಿಗಳಲ್ಲಿ ಸೇವಾ ಮನೋಭಾವ, ತಂದೆ-ತಾಯಿಗಳಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿದಾಗ ಮಾತ್ರ ಯುವಜನಾಂಗ ಸರಿದಾರಿಗೆ ಬರಲು ಸಾಧ್ಯ.
ವೇಷಭೂಷಣ ಯಾವುದೇ ಇದ್ದರೂ ನಾವು ಭಾರತೀಯರು ಎಂಬ ಭಾವನೆ ಮೂಡಬೇಕು ಎಂದರು.
ಗವಿಮಠದ ಗುರುಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕ ಬಳಗದ ಅಧ್ಯಕ್ಷ ಲಿಂಗರಾಜ ಗಾಣಿಗರ, ಕೆಎಸ್ಆರ್ಪಿ 10ನೇ ಪಡೆ ಸಹಾಯಕ ಕಮಾಂಡೆಂಟ್ ಬಿ..ಬಿ. ದೊಡ್ಡಮನಿ, ಬಾಗಲಕೋಟೆಯ ಮಲಪ್ರಭಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಹಿರೇಮಠ, ಸುಂಕದ, ಬಿ.ಎಸ್. ಬಿಂಗಿ, ನಿವೃತ್ತ ಪ್ರಾಚಾರ್ಯ ಎಸ್.ಬಿ. ಬಡ್ಡಿ, ನಿವೃತ್ತ ಶಿಕ್ಷಕ ಪಿ.ಕೆ. ನರಗುಂದ, ಗುರುಲಿಂಗ ಸ್ವಾಮೀಜಿ, ಭಾರತಿ ಗಾಣಿಗೇರ, ಅನಸೂಯಾ ಮೊರಬದ, ಶಾರದಾ ಕಳ್ಳಿಮಠ, ಶ್ಯಾಮಲಾ ಬ್ರಹ್ಮಾವರ, ಅನ್ನಪೂರ್ಣಾ ಉಪಸ್ಥಿತರಿದ್ದರು. ಕೆಎಸ್ಆರ್ಪಿ 10ನೇ ಪೊಲೀಸ್ ಪಡೆ, ಶಿಗ್ಗಾಂವಿ ವಿವೇಕ ಜಾಗ್ರತ ಬಳಗದ ವತಿಯಿಂದ ಗವಿ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮಾಜಿ ಅಧ್ಯಕ್ಷ ಅಶೋಕ ಖುರ್ಸಾಪುರ ಸ್ವಾಗತಿಸಿದರು. ಡಾ ಐಪಿಕೆ ಶೆಟ್ಟರ ನಿರೂಪಿಸಿ, ವಂದಿಸಿದರು. ಅನಂತರ ವಿವೇಕಾನಂದರ ಕುರಿತು ಗೀತ ಭಜನಾ ಸತ್ಸಂಗ ಕಾರ್ಯಕ್ರಮ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

