ನೀರಾವರಿ ವೀಕ್ಷಿಸಿದ ಭಾವಿ ಎಂಜಿನಿಯರ್ ಗಳು
ಹಾನಗಲ್ಲ: ತಾಲೂಕಿನಲ್ಲಿ ಮಳೆ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಇಲ್ಲಿ ಹರಿದಿರುವ ಧರ್ಮಾ ಹಾಗೂ ವರದಾ ನದಿಗಳಿಗೆ 18 ಕಡೆಗಳಲ್ಲಿ ಬಾಂದಾರ ನಿರ್ಮಿಸಿ, ರೈತರ ಭೂಮಿಗೆ ನೀರೊದಗಿಸಲಾಗುತ್ತಿದೆ. ಈ ನೀರಾವರಿ ಕಾಮಗಾರಿಗಳ ಅಧ್ಯಯನಕ್ಕಾಗಿ ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದರು.
ಸಿವಿಲ್ ಅಂತಿಮ ವರ್ಷದ ಪಠ್ಯಕ್ರಮದಲ್ಲಿ ನಿರಾವರಿ ವಿಷಯ ಇರುವ ಕಾರಣ ಪ್ರಾತ್ಯಕ್ಷಿಕೆಗಾಗಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಾಗಿತ್ತು. 100 ವಿದ್ಯಾರ್ಥಿಗಳ ತಂಡ ಈ ಭಾಗದ ನೀರಾವರಿ ವ್ಯವಸ್ಥೆ ವೀಕ್ಷಿಸಿ, ಮಳೆಯಾಶ್ರಿತ ಬೇಸಾಯ, ಸದಾಕಾಲ ಹರಿಯದ ನದಿ, ಕೆರೆ-ಕಟ್ಟೆಗಳಿಂದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗಳನ್ನು ಅಧ್ಯಯನ ಮಾಡಿದರು.
ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವ ಮಳಗಿ ಸಮೀಪದ ಧರ್ಮಾ ಜಲಾಶಯಕ್ಕೆ ಭೇಟಿ ನೀಡಿ, ಕಾಲುವೆಗಳ ಮೂಲಕ ಕೆರೆ ತುಂಬಿಸುವ ವ್ಯವಸ್ಥೆ ಗಮನಿಸಿದರು. ಹಾನಗಲ್ಲಿನ ಕುಡಿಯುವ ನೀರಿನ ಸಂಗ್ರಹಗಾರವಾದ ಇತಿಹಾಸ ಪ್ರಸಿದ್ಧ ಆನಿಕೆರೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನೂ ವೀಕ್ಷಿಸಿದರು. ಚಿಕ್ಕ ನೀರಾವರಿ ಇಲಾಖೆಯ ಅಭಿಯಂತರರಿಂದ ವಿವರಣೆ ಪಡೆದುಕೊಂಡರು.
ಸಂಜೆ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಹಾನಗಲ್ ಭಾಗದ ವಿವಿಧ ಇಲಾಖೆ ಎಂಜನಿಯರ್ಗಳು ಆಯೋಜಿಸಿದ್ದ ಎಲ್ಸಿಡಿ ಪ್ರೋಜೆಕ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಂತ್ರಜ್ಞಾನಗಳ ತಿಳಿವಳಿಕೆ ಪಡೆದುಕೊಂಡರು. ವಿದ್ಯಾರ್ಥಿಗಳ ಅಧ್ಯಯನ ಪ್ರವಾಸಕ್ಕೆ ಚಿಕ್ಕ ನೀರಾವರಿ ಇಲಾಖೆ ಅಭಿಯಂತರ ಬಿ.ಎನ್. ಭಟ್, ಜಿ.ಬಿ. ಛಪ್ಪರ್ ಅನುಕೂಲತೆ ಒದಗಿಸಿದರು. 28 ವಿದ್ಯಾರ್ಥಿನಿಯರೂ ಇದ್ದ ತಂಡದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹೆಗಡೆ, ಪ್ರೊ ಶ್ರೀನಾಥರಾವ್, ಪ್ರೊ ಜಯಪ್ರಕಾಶ, ಪ್ರೊ ಉಮಾದೇವಿ ಸೇರಿದಂತೆ 14 ಪ್ರಾಧ್ಯಾಪಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

